ಮಾಗಡಿ: ಇಂದಿರಾ ಕ್ಯಾಂಟಿನ್‌ನಲ್ಲಿ ಹಣಪಡೆದು ಊಟ ನೀಡುತ್ತಾರೆ. ಆದರೆ ಶುದ್ಧ ಕುಡಿಯುವ ನೀರು ನೀಡುತ್ತಿಲ್ಲ. ಸಂಪಿನ ಕಲುಷಿತ ನೀರನ್ನೇ ಗ್ರಾಹಕರಿಗೆ ಕುಡಿಸುತ್ತಿದ್ದಾರೆ ಎಂದು ನೂರಾರು ಗ್ರಾಹಕರು ದೂರಿದ್ದಾರೆ. ಪಟ್ಟಣದ ಪುರಸಭೆ ಕೂಗಳತೆ ದೂರದಲ್ಲಿರುವ ಕ್ಯಾಂಟೀನ್‌ಲ್ಲಿ, ಶುದ್ಧ ನೀರು ವಿತರಿಸುತ್ತಿಲ್ಲ. ಸಂಪಿನಲ್ಲಿರುವ ನೀರನ್ನೇ ಕೊಳಾಯಿಂದ ಹಿಡಿದು ಎಂದು ಗ್ರಾಹಕರಿಗೆ ನೀಡುತ್ತಿದ್ದಾರೆ.
ಈಗಾಗಲೇ ಜನರು ಕೊವೀಡ್-19 ಸೋಂಕಿನ ಭೀತಿ ಎದುರಿಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ಗುಣಮಟ್ಟದ ತಿಂಡಿ ಊಟದ ಜೊತೆಗೆ ಶುದ್ಧ ನೀರು ನೀಡಬೇಕು. ಈ ಎಲ್ಲ ನಿಯಮ ಗಾಳಿಗೆ ತೂರಿಗೆ ತೂರಿರುವ ಗುತ್ತಿಗೆದಾರ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಕ್ಯಾಂಟಿನ್ ಸಿಬ್ಬಂದಿ ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಆದರೆ ಅಡುಗೆಯವರು, ಸಿಬ್ಬಂದಿ ಮಾಸ್ಕ್ ಧರಿಸುತ್ತಿಲ್ಲ.
ಈ ಕುರಿತು ಗ್ರಾಹಕರು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಗ್ರಾಹಕರು ಆತಂಕಕ್ಕೊಳಗಾಗಿದ್ದಾರೆ. ಸೋಂಕಿನ ಭೀತಿಯಲ್ಲಿ ತಿಂಡಿ ಊಟ ಮಾಡುವಂತ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದು ತಮ್ಮ ಮನದಾಳದ ನೋವು ತೋಡಿಕೊಂಡರು. ಕಾರ್ಮಿಕರನ್ನು ಬೇಕಾಬಿಟ್ಟಿ ನಡೆಸಿಕೊಳ್ಳುತ್ತಿದ್ದು, ಇಂದಿರಾ ಕ್ಯಾಂಟಿನ್ ಸೇವೆ ಕುರಿತು ಮೇಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಲವು ಬಾರಿ ಕ್ಯಾಂಟೀನ್ ಮಾಲಿಕರಿಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಕ್ಯಾಂಟಿನ್ ಮಾಲಿಕರ ನಿರ್ಲಕ್ಷ್ಯ, ನಿಯಮ ಉಲ್ಲಂಘನೆ ವಿರುದ್ಧ ಮೇಲಾಧಿಕಾರಿಗಳಿಗೆ ಶಿಪಾರಸು ಮಾಡುವುದಾಗಿ ತಿಳಸಿದ್ದಾರೆ. ಮಾಗಡಿ ಕೊರೊನಾ ಸೋಂಕು ರಹಿತವಾಗಿದೆ. ಹೀಗೆ ಮುಂದುವರಿಯಬೇಕೆಂಬ ಚಿಂತನೆಯಿಂದ ಹಲವು ಮುಂಜಾಗ್ರತೆ ಕ್ರಮ ಅನುಸರಿಸುತ್ತಿದ್ದೇವೆ ಎಂಬ ಮಾತು ಕೇಳಿಬರುತ್ತಿದೆ.