Advertisement

30ರವರೆಗೆ ಕಂಟೇನ್ಮೆಂಟ್‌ ವಲಯ ಲಾಕ್‌ಡೌನ್‌

09:19 AM Jun 29, 2020 | Suhan S |

ವಿಜಯಪುರ: ಕೇಂದ್ರ ಸರ್ಕಾರದ ಆದೇಶದಂತೆ ಮೇ 30 ರಂದು ಕಂಟೇನ್ಮೆಂಟ್‌ ವಲಯಗಳಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಅವಧಿ ಜೂನ್‌ 30ಕ್ಕೆ ಕೊನೆಗೊಳ್ಳಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‌ಭಾಸ್ಕರ್‌ ಅವರು ಆದೇಶ ಹೊರಡಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಸರ್ಕಾರದ ಆದೇಶದಂತೆ ಕಂಟೇನ್ಮೆಂಟ್‌ ವಲಯ ಹೊರತುಪಡಿಸಿದ ಪ್ರದೇಶಗಳಲ್ಲಿ ಹಂತಹಂತವಾಗಿ ನಿಷೇಧಿತ ಚಟುವಟಿಕೆ ತೆರೆಯಲು ಲಾಕ್‌ಡೌನ್‌ ಸಡಿಲಿಕೆಗಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಾರಣ ರಾಜ್ಯ ಸರ್ಕಾರ 30-5-2020ರಲ್ಲಿ ಜಾರಿಗೊಳಿಸಿರುವ ಕಂಟೇನ್ಮೆಂಟ್‌ ವಲಯಗಳಲ್ಲಿನ ಲಾಕ್‌ಡೌನ್‌ ಅವಧಿ ಯನ್ನು 30-6-2020ರವರೆಗೆ ವಿಸ್ತರಿಸಲಾಗಿದೆ ಎಂದು ವಿವರಿಸಿದ್ದಾರೆ.

5-7-2020 ರ ಭಾನುವಾರದಿಂದ ಮುಂದಿನ ನಾಲ್ಕು ಭಾನುವಾರಗಳು ಅಂದರೆ ದಿ.2-8-2020ರವರೆಗಿನ ಎಲ್ಲ ಭಾನುವಾರದ ದಿನಗಳಂದು ಪೂರ್ಣ ದಿನದ ಲಾಕ್‌ಡೌನ್‌ ಇರಲಿದೆ. ಆದರೆ ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಕಚೇರಿಗಳು, ಬೋರ್ಡ್‌ಗಳು ಮತ್ತು ಕಾರ್ಪೋರೇಷನ್‌ಗಳು ತುರ್ತು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವಂತಹ ಇಲಾಖೆಗಳು, ಕಚೇರಿಗಳು, ಬೋರ್ಡ್ ಗಳು ಮತ್ತು ಕಾಪೋìರೇಶನ್‌ ಗಳನ್ನು ಹೊರತುಪಡಿಸಿ ಈಗಿರುವ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರಗಳನ್ನು ಸೇರಿಸಿಕೊಂಡಂತೆ 2020ರ ಜುಲೈ 10ರಿಂದ ಎಲ್ಲ ಶನಿವಾರ ದಿನಗಳಂದು 8-8-2020ರವರೆಗೆ ಮುಚ್ಚಲ್ಪಡುತ್ತವೆ. ರಾಜ್ಯಾದ್ಯಂತ ನಿತ್ಯ ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಕರ್ಫ್ಯೂ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.