ಕೋಲಾರ: ತಾಲೂಕಿನ ನರಸಾಪುರ ಹೋಬಳಿಯಖಾಜಿ ಕಲ್ಲಹಳ್ಳಿಯಲ್ಲಿ ಒಂದೇ ದಿನದಲ್ಲಿ 8 ಜನರಿಗೆಕೊರೊನಾ ಪಾಸಿಟಿವ್ ಬಂದಿದ್ದು, ಇಡೀ ಗ್ರಾಮವನ್ನುಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ.
ನರಸಾಪುರ ಗ್ರಾಮ ಪಂಚಾಯ್ತಿನಿಂದ ಕೊರೊನಾತಡೆಗಟ್ಟಲು ಧ್ವನಿವರ್ಧಕದ ಮೂಲಕ ಮೂಲಕನರಸಾಪುರ, ಕುರ್ಕಿ ಮತ್ತು ಖಾಜಿ ಕಲ್ಲಹಳ್ಳಿಗ್ರಾಮಗಳಲ್ಲಿ ಜನರಿಗೆ ಕೋವಿಡ್-19 ರ ಬಗ್ಗೆ ಅರಿವು ಮೂಡಿಸಲಾಯಿತು.
ನರಸಾಪುರ, ಕುರ್ಕಿ ಹಾಗೂ ಖಾಜಿ ಕಲ್ಲಹಳ್ಳಿಗ್ರಾಮಗಳಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿಓಡಾಡಬಾರದು. ಮನೆಯಿಂದ ಹೊರಗಡೆ ಬರುವವರು ಕಡ್ಡಾಯವಾಗಿ ಮಾಸ್ಕ್ಧರಿಸಿ ಕೋವಿಡ್‌ನಿಯಮ ಪಾಲಿಸಬೇಕು ಎಂದು ಗ್ರಾಮಪಂಚಾಯ್ತಿನಿಂದ ಧ್ವನಿವರ್ಧಕದ ಮೂಲಕ ಅರಿವು ಮೂಡಿಸಿದರು.
ಕೋಲಾರ ಡೀಸಿ ಆದೇಶದಂತೆ ನರಸಾಪುರಗ್ರಾಮದಲ್ಲಿ ಬ್ಯಾಂಕ್, ದಿನಸಿ ಅಂಗಡಿಗಳು, ಬಾರ್‌ಗಳು, ತರಕಾರಿ ಸಗಟು ಮಾರುಕಟ್ಟೆಯನ್ನು ಮೂರುದಿನ ಸಂಪೂರ್ಣ ಬಂದ್ ಮಾಡಲಾಗಿದೆ.ಪಿಡಿಒ ಎಚ್.ಎಂ.ರವಿ ಮಾತನಾಡಿ, ಕೋವಿಡ್‌ನಿಯಮ ಉಲ್ಲಂಘಿಸಿ ರಸ್ತೆಗಿಳಿದರೆ ಪೊಲೀಸರು ವಾಹನ ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ.
ತುರ್ತುಪರಿಸ್ಥಿತಿ ಹೊರತುಪಡಿಸಿ ಯಾವುದೇ ಕಾರಣಕ್ಕೂ ಜನಮೂರು ದಿನ ಓಡಾಟ ಮಾಡಬಾರದು.ಮನೆಗಳಲ್ಲಿದ್ದು ಕೊಂಡು ತಮ್ಮ ಅರೋಗ್ಯಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.ನರಸಾಪುರ ಗ್ರಾಪಂ ಅಧ್ಯಕ್ಷೆ ಸುಮಿತ್ರಮ್ಮ ರಾಜಣ್ಣ.ಉಪಾಧ್ಯಕ್ಷ ಸುಮನ್ ಚಂದ್ರು, ಸದಸ್ಯರಾದಕೆಇಬಿ ಚಂದ್ರು, ಹಾಲಿವುಡ್ ಮುನಿರಾಜು,ಟಿ. ಮಂಜುನಾಥ್, ಕುಮಾರ್, ರಾಜೇಂದ್ರ,ದೇವರಾಜ್, ಕೃಷ್ಣ, ಮುರಳಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.