Advertisement
ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಮಹಾರಾಷ್ಟ್ರದ ಪುಣೆ ಹತ್ತಿರದ ವೀರ ಜಲಾಶಯದಿಂದ ಹರಿಬಿಟ್ಟ ನೀರು ಜಿಲ್ಲೆಯ ಜೀವನಾಡಿ ಭೀಮಾ ನದಿಗೆ ಬಂದು ಭೀಮಾ ಏತ ಜಲಾಶಯದಲ್ಲಿ ಸಂಗ್ರಹವಾಗುತ್ತಿದೆ. ಹಾಗಾಗಿ ಜಲಾಶಯ ಈಗ ಅರ್ಧದಷ್ಟು ಭರ್ತಿಯಾಗಿದೆ.
Related Articles
Advertisement
ಸತತ ಮಳೆಯಿಂದ ಕಳೆ ಸಹ ಬೆಳೆಗಳಿಗಿಂತ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಬೆಳೆಗಳ ಬೆಳವಣಿಗೆಗೆ ಹೊಡೆತ ಬೀಳಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕಳೆ ತೆಗೆಯುವುದು ರೈತನಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ದನಕರುಗಳಿಗೆ ಇನ್ನೂ ಪರಿಪೂರ್ಣ ಮೇವು ತಿನ್ನುವಷ್ಟು ಕಳೆ ಬೆಳೆದಿಲ್ಲ. ಹೀಗಾಗಿ ಜಿಟಿಜಿಟಿ ಮಳೆ ನಡುವೆ ದನಕರುಗಳಿಗೆ ಮೇವು ಹಾಕುವುದು ಕಷ್ಟವಾಗುತ್ತಿದೆ.
ಮಳೆ ವಿವರ: ಕಳೆದ ಆಗಸ್ಟ್ 1ರಿಂದ ಕಳೆದ ಐದು ದಿನಗಳಲ್ಲಿ ಜಿಲ್ಲಾದ್ಯಂತ 59 ಮಿಮೀ ಮಳೆಯಾಗಿದೆ. ಸರಾಸರಿ 26 ಮಿಮೀ ಮಳೆ ಪೈಕಿ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಫಜಲಪುರ ತಾಲೂಕಿನಲ್ಲಿ ಕಳೆದ ಐದು ದಿನಗಳ ಕಾಲ ಒಟ್ಟಾರೆ 34 ಮಿಮೀ, ಆಳಂದ ತಾಲೂಕಿನಲ್ಲಿ 58 ಮಿಮೀ, ಚಿಂಚೋಳಿ ತಾಲೂಕಿನಲ್ಲಿ 105 ಮಿಮೀ, ಚಿತ್ತಾಪುರ ತಾಲೂಕಿನಲ್ಲಿ 62 ಮಿಮೀ, ಕಲಬುರಗಿ ತಾಲೂಕಿನಲ್ಲಿ 66 ಮಿಮೀ, ಜೇವರ್ಗಿ ತಾಲೂಕಿನಲ್ಲಿ ಕೇವಲ 30 ಮಿಮೀ ಮಳೆಯಾಗಿದೆ. ಸೇಡಂ ತಾಲೂಕಿನಲ್ಲಿ 62 ಮಿಮೀ ಮಳೆಯಾಗಿದೆ.
ಜೇವರ್ಗಿ ತಾಲೂಕಿನಲ್ಲಿ ಜೂನ್ 7ರ ಮೃಗಶಿರ ಮಳೆ ಆರಂಭದಿಂದಲೂ ಕೊರತೆವಿದೆ. ಜೂನ್ ತಿಂಗಳಲ್ಲಿ ಶೇ. 23ರಷ್ಟು ಹಾಗೂ ಜುಲೈ ತಿಂಗಳಲ್ಲಿ ಶೇ. 38ರಷ್ಟು ಮಳೆ ಕೊರತೆಯಾಗಿತ್ತು. ಈಗಲೂ ಜೇವರ್ಗಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಮಳೆ ಬೆಳೆಗೆ ತಕ್ಕ ಬಂದಿಲ್ಲ.