Advertisement

ನಿಯಂತ್ರಣ ತಪ್ಪಿ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಕಂಟೈನರ್ ಲಾರಿ:ಓರ್ವ ಸಾವು

11:02 AM Jun 21, 2021 | Team Udayavani |

ಪಣಂಬೂರು: ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಲಾರಿಯೊಂದು ನವ ಮಂಗಳೂರು ಬಂದರಿನ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಘಟನೆ ರವಿವಾರ ರಾತ್ರಿ ಸುಮಾರು 11 ಗಂಟೆಗೆ ನಡೆದಿದೆ.

Advertisement

ಪರಿಣಾಮ ಓರ್ವ ಸಾವನ್ನಪ್ಪಿದ್ದು ಇನ್ನೋರ್ವನಿಗಾಗಿ ಹುಡುಕಾಟ ನಡೆದಿದೆ. ಧಾರಾಕಾರ ಮಳೆಯ ವೇಳೆ ಬರ್ತ್ ಕೊನೆಯನ್ನು ಚಾಲಕ ಸರಿಯಾಗಿ ಅಂದಾಜಿಸದೆ ಹಿಂದೆಕ್ಕೆ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನ ಲಾಗಿದೆ.

ಇದನ್ನೂ ಓದಿ: ಕಾಪು: ಟರ್ಪಾಲಿನ ಮನೆಯಲ್ಲಿ ನಾಲ್ಕು ಮಂದಿ ವಾಸ, ಅಸಹಾಯಕತೆಯ ನಡುವೆಯೇ ಸಂಕಷ್ಟದ ಜೀವನ

ಕಂಟೈನರ್ ನಲ್ಲಿ ಚಾಲಕ ಮತ್ತು ಬೇರೆ ಕೆಲಸಕ್ಕೆಂದು ಹೋಗುವ ಕಾರ್ಮಿಕ ಒಬ್ಬ ಈ ಕಂಟೇನರ್ ಹತ್ತಿದ್ದು,ಸದ್ಯ ಕಾರ್ಮಿಕ ಮಲಕಪ್ಪ( 35) ನ ಮೃತದೇಹವನ್ನು ಹೊರ ತೆಗೆಯಲಾಗಿದೆ.  ಚಾಲಕ ರಾಜೇಸಾಬನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next