Advertisement

ಸರ್ಕಾರಿ ಸೌಲಭ್ಯಕ್ಕೆ ನನ್ನನ್ನೇ ಸಂಪರ್ಕಿಸಿ: ಸಚಿವ ನಾಗೇಶ್‌

03:50 PM Oct 14, 2020 | Suhan S |

ಮುಳಬಾಗಿಲು: ಯಾರೇ ಆಗಲಿ, ತಮಗೆ ಬೇಕಾದ ಸರ್ಕಾರಿ ಸೌಲಭ್ಯಕ್ಕಾಗಿ ತಮ್ಮನ್ನು ನೇರವಾಗಿ ಸಂಪರ್ಕಿಸಿ ಅರ್ಜಿ ನೀಡಬೇಕೆಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

Advertisement

ತಾಲೂಕಿನ ಅಗರ ಗ್ರಾಪಂ ವ್ಯಾಪ್ತಿಯ ಮಂಡಿಕಲ್‌ ಗ್ರಾಮದ ಶ್ರೀಪ್ರಸನ್ನ ಚೌಡೇಶ್ವರಿದೇವಿದೇಗುಲ ಮುಂದೆ ಏರ್ಪಡಿಸಲಾಗಿದ್ದಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ 10.99 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅದೇ ರೀತಿ ಎಲ್ಲಾ ಗ್ರಾಪಂಗಳಲ್ಲೂ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇನ್ನು ಚೌಡೇಶ್ವರಿದೇವಿ ದೇವಾಲಯದ ಆವರಣದಲ್ಲಿಯಾತ್ರಿ ಭವನ ಸಹ ಮಂಜೂರು ಮಾಡಿಸುತ್ತೇನೆ.ಇಲ್ಲಿರುವ ಎಲ್ಲಾ ಗ್ರಾಮಗಳ ಮುಖಂಡರು ತಮ್ಮ ಗ್ರಾಮಗಳಿಗೆ ಬೇಕಾದ ಸೌಲಭ್ಯಗಳ ಕುರಿತ ಅರ್ಜಿಯನ್ನು ಈಗ ನೀಡಿದರೆ ಸ್ಥಳದಲ್ಲಿಯೇಪರಿಹರಿಸುವುದಾದರೆ ಇಲ್ಲಿಯೇ ಪರಿಹರಿಸುತ್ತೇನೆ. ಇಲ್ಲವಾದಲ್ಲಿ ಹಿರಿಯರಿಗೆ ಕಳುಹಿಸಿ ಅದನ್ನು ಮಂಜೂರು ಮಾಡಿಸುತ್ತೇನೆಂದರು.

ತಾವು ಈಗಾಗಲೇ 30 ಗ್ರಾಪಂಗಳಲ್ಲಿ ಸಂಚಾರಮಾಡಿದ್ದು ಉಳಿದಿರುವ ಗ್ರಾಮಗಳಿಗೆ ಭೇಟಿ ನೀಡಿ ಅವರಿಗೆ ಬೇಕಾದ ಸವಲತ್ತು ಒದಗಿಸುತ್ತೇನೆ. ಅಲ್ಲದೇ ಯಾರೇ ಆಗಲೀ ತಮಗೆ ಬೇಕಾದಸೌಲಭ್ಯಕ್ಕಾಗಿ ತಮ್ಮನ್ನು ನೇರವಾಗಿ ಸಂಪರ್ಕಿಸ ಬೇಕೆಂದರು.

ಅರ್ಜಿ ಸಲ್ಲಿಸಿ: ನವೆಂಬರ್‌ನಲ್ಲಿ 8 ಸಾವಿರ ಸಾಗುವಳಿ ಚೀಟಿ ನೀಡಲಾಗುವುದು, ಭೂ ರಹಿತರು ಸರ್ಕಾರಿ ಜಮೀನುಗಳಿಗೆ ಇನ್ನೂ ಅರ್ಜಿ ಸಲ್ಲಿಸಬಹುದಿದ್ದು ಕಾನೂನು ಚೌಕಟ್ಟಿನಲ್ಲಿ ವಿತರಿಸಲಾಗುವುದು ಎಂದು ಹೇಳಿದರು.

10 ಸಾವಿರ ಮನೆ ಮಂಜೂರು ಮಾಡಿಸುವೆ: ಪ್ರಸ್ತುತ ತಾಲೂಕಿಗೆ 1 ಸಾವಿರ ಮನೆ ಮಂಜೂರಾಗಿದ್ದು, ಇನ್ನೂ 10 ಸಾವಿರ ಮನೆ ತರುವುದಾಗಿ ತಿಳಿಸಿದರಲ್ಲದೇ, ದುಗ್ಗಸಂದ್ರ ಹೋಬಳಿಗೆ ಅನುಕೂಲವಾಗುವಂತೆ ಎಚ್‌.ಗೊಲ್ಲಹಳ್ಳಿಯಲ್ಲಿ ಬೆಸ್ಕಾಂ ಕಚೇರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

Advertisement

ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ಎಪಿಎಂಸಿಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್‌, ನಿರ್ದೇಶಕರಾದಎಚ್‌.ಎಸ್‌. ಜಗದೀಶ್‌, ಯುವ ಮುಖಂಡ ಎಸ್‌. ಚಲಪತಿಗೌಡ, ಕೆ.ಎಂ. ಸುಧೀಂದ್ರ, ದರಖಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ತಾಪಂ ಸದಸ್ಯ ಮಾರಪ್ಪ, ಪುರಸಭೆ ಮಾಜಿ ಸದಸ್ಯೆ ಕೆ.ಎಂ. ಅರುಣಕುಮಾರಿ, ಮುಖಂಡರಾದ ಕೊಲದೇವಿ ಎಂ.ಶ್ರೀನಿವಾಸ್‌, ಪದ್ಮನಾಭಗೌಡ, ಡಿ. ವೆಂಕಟರಾಮಪ್ಪ, ಎನ್‌. ರಾಮು, ವಿ.ಕೃಷ್ಣಮೂರ್ತಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next