Advertisement
ಆ. 18ರಂದು ಅಂಧೇರಿ ಪೂರ್ವದ ಜೆ. ಬಿ. ನಗರದಲ್ಲಿನ ಸತ್ಯನಾರಾಯಣ ಗೋಯೆಂಕಾ ಭವನದಲ್ಲಿ ನಡೆದ ಶ್ರೀ ಜಯಲಕ್ಷ್ಮೀ ಪಥಸಂಸ್ಥೆಯ 19ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಸೈಟಿಯ ಶೇರುದಾರರಿಗೆ ಲಾಭಾಂಶದ ಶೇ. 9ರಷ್ಟು ಡಿವಿಡೆಂಡ್ ಘೋಷಿಸಿದರು.
Related Articles
Advertisement
ಅತಿಥಿ ಅಭ್ಯಾಗತರಾಗಿ ರಾಕೇಶ್ ಸಿಂಗ್, ಅಶೋಕ್ ಗೌಡ, ಕಾಂಗ್ರೆಸ್ ನೇತಾರ ಚಂದ್ರ ಶೆಟ್ಟಿ, ಸಿಎ ಮಂಜುನಾಥ ಕೆ. ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸೊಸೈಟಿಯ ಉನ್ನತಿಗೆ ಶುಭ ಹಾರೈಸಿದರು. ಕಾರ್ಯಾಧ್ಯಕ್ಷರು ಮತ್ತು ನಿರ್ದೇಶಕರು ಸೊಸೈಟಿಯ ಸದಸ್ಯರ ಮಕ್ಕಳಿಗೆ ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿ ಸೊಸೈಟಿಯ ಉನ್ನತಿಗಾಗಿ ಶ್ರಮಿಸಿದ ಸರ್ವರ ಅನನ್ಯ ಸೇವೆ ಶ್ಲಾಘಿಸಿ ಅಭಿವಂದಿಸಿದರು.
ಒಕ್ಕಲಿಗರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಜಿತೇಂದ್ರ ಜೆ. ಗೌಡ, ಉದ್ಯಮಿಗಳಾದ ಹಾಗೂ ಸೊಸೈಟಿಯ ಉಪಾಧ್ಯಕ್ಷ ಎ. ಕೆಂಪೇಗೌಡ, ಕಾರ್ಯದರ್ಶಿ ಕೆ. ರಾಜೇ ಗೌಡ, ಕೋಶಾಧಿಕಾರಿ ಮುತ್ತೇ ಎಸ್. ಗೌಡ, ನಿರ್ದೇಶಕರಾದ ಅನಸೂಯ ಆರ್. ಗೌಡ, ದೇವಕಿ ನಾರಾಯಣ ಗೌಡ, ಸುನಂದಾ ಆರ್. ಗೌಡ, ರಾಹುಲ್ ಯು. ಲಗಡೆ, ಭಾರತಿ ಎಸ್. ಗಾಯಕ್ವಾಡ್, ಸುನೀಲ್ ಕೆ.ಅವØಡ್, ಸುರತ್ ಎನ್. ಯಾದವ್ ವೇದಿಕೆಯಲ್ಲಿ ಆಸೀನರಾಗಿದ್ದರು. ಸೊಸೈಟಿಯ ಪ್ರಬಂಧಕ ಪರಶುರಾಮ್ ಕೆ. ದೌಂಡ್ ಸ್ವಾಗತಿಸಿ ಸಭಾ ಕಲಾಪ ನಡೆಸಿ ಗತ ಸಾಲಿನ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ಸೊಸೈಟಿಯು ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ ‘ಎ’ ದರ್ಜೆ ಸ್ಥಾನದೊಂದಿಗೆ ದೃಢೀಕೃತಗೊಂಡಿದೆ ಎಂದರು. ಸೊಸೈಟಿಯ ಗ್ರಾಹಕರು, ಶೇರುದಾರರು, ಹಿತೈಷಿಗಳು, ಸೊಸೈಟಿಯ ಸಿಬಂದಿಗಳು, ಪಿಗ್ಮಿ ಸಂಗ್ರಹದಾರರು ಸಭೆಯಲ್ಲಿ ಹಾಜರಿದ್ದರು.
ಎ. ಕೆಂಪೇಗೌಡ ಅವರು ಸ್ವಾಗತಿಸಿದರು. ಕಚೇರಿಯ ಅಧಿಕಾರಿಗಳಾದ ಆಶಾರಾಣಿಬಿ. ಗೌಡ ಅವರು ಗತ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಪರಶುರಾಮ್ ಕೆ. ದೌಂಡ್ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಬಿತ್ತರಿಸಿದರು. ಲೆಕ್ಕಾಧಿಕಾರಿ ಶಿಲ್ಪಾ ಸಂತೋಷ್ ಮಾಂಡವ್ಕಾರ್ ಲೆಕ್ಕಪತ್ರಗಳ ಮಾಹಿತಿ ನೀಡಿದರು. ಶಿವಕುಮಾರ್ ಎಚ್. ಗೌಡ ವಾರ್ಷಿಕ ಬಜೆಟ್ ಮಂಡಿಸಿದರು. ಕೆ. ರಾಜೇ ಗೌಡ ಅಂತರಿಕ ಲೆಕ್ಕಪತ್ರಗಳ ಮಾಹಿತಿ ಮತ್ತು ವಾರ್ಷಿಕ ವ್ಯವಹಾರದ ಮಾಹಿತಿ ನೀಡಿ, ಅತಿಥಿಗಳನ್ನು ಪರಿಚಯಿಸಿ ವಂದಿಸಿದರು.
ಚಿತ್ರ – ವರದಿ: ರೋನ್ಸ್ ಬಂಟ್ವಾಳ್