Advertisement

ಬಂಗಾರ ಖರೀದಿಗೆ ಗ್ರಾಹಕರ ಹಿಂದೇಟು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮಾರಾಟ ಇಳಿಕೆ

09:56 AM Oct 11, 2019 | sudhir |

ಕೋಲ್ಕತಾ: ಆಟೋಮೊಬೈಲ್‌ ವಲಯದ ನಂತರ ದೇಶದಲ್ಲಿ ಬಂಗಾರ ಖರೀಸಿದಿಸುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕಳೆದ ಬಾರಿ ನವರಾತ್ರಿ ಸಂದರ್ಭದಲ್ಲಿ ಅಧಿಕ ಮಟ್ಟದಲ್ಲಿ ಬಂಗಾರ ಮಾರಾಟವಾಗಿದ್ದರೆ, ಈ ಬಾರಿ ಚಿನ್ನದ ಮಾರುಕಟ್ಟೆಯ ವಹಿವಾಟು ಕುಸಿದಿದೆ.

Advertisement

ಈ ಪರಿಣಾಮ ಆಭರಣ ತಯಾರಿಕಾ ಕಂಪನಿಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಅನೇಕ ಜುವೆಲ್ಲರಿ ಕಂಪೆನಿಗಳ ಉದ್ಯೋಗಿಗಳು ಕೆಲಸ ಕಳೆದು ಕೊಳ್ಳುತ್ತಿದ್ದಾರೆ. ಹೀಗಾಗಿ, ಬಂಗಾರ ತಯಾರಿಕೆಯಲ್ಲಿ ನಿಪುಣರಾಗಿರುವ ಅಕ್ಕಸಾಲಿಗರಿಗೂ ಕೆಲಸ ಇಲ್ಲದಂತಾಗಿದೆ.

ಚಿನ್ನಕ್ಕೂ ಆರ್ಥಿಕ ಹಿಂಜರಿತದ ಬಿಸಿ
ಇಂದು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕ ಹಿಂಜರಿತ ಉಂಟಾಗಿದೆ. ಇನ್ನೂ ಇದರ ಬಿಸಿ ಚಿನ್ನಾಭರಣ ಕ್ಷೇತ್ರಕ್ಕೂ ತಾಗಿದ್ದು, ದೇಶದಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಕುಸಿಯುತ್ತಿದೆ. ವಿಶೇಷವೆಂದರೆ ಬೆಲೆಯಲ್ಲಿ ಕುಸಿತ ಕಂಡರೂ ಗ್ರಾಹಕರು ವ್ಯಾಪಾರ-ವಾಹಿವಾಟಿನಿಂದ ದೂರ ಉಳಿದಿರುವುದು ಆಶ್ಚರ್ಯ ಮೂಡಿಸಿದೆ.

1,300 ರೂ. ಇಳಿಕೆ
ಕಳೆದ ಒಂದು ವಾರದಲ್ಲಿ ಬಂಗಾರದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದ್ದು, ಚಿನ್ನದ ದರ 1,300 ರೂ.ಗಳಷ್ಟು ಕಡಿಮೆಯಾಗಿದೆ. ಕಳೆದ ವಾರ 10 ಗ್ರಾಂಗೆ 39,885 ರೂ. ಇದ್ದ ಚಿನ್ನದ ಬೆಲೆ ಈಗ 38,527 ರೂ.ಗೆ ಇಳಿದಿದೆ. ಬೆಳ್ಳಿಯ ಬೆಲೆಯಲ್ಲೂ ಕುಸಿತ ಕಂಡು ಬಂದಿದ್ದು, ಕಳೆದ ವಾರ ಕೆ.ಜಿ.ಗೆ 51,489 ಇದ್ದ ಬೆಲೆ ಈ ವಾರ 47,640 ರೂ.ಗೆ ಇಳಿದಿದೆ.

ಅಬಕಾರಿ ಸುಂಕ ಕಡಿತಗೊಳಿಸಲು ಬೇಡಿಕೆ
ಸ್ವರ್ಣೋದ್ಯಮದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಅಲ್‌ ಇಂಡಿಯಾ ಜೆಮ್‌ ಮತ್ತು ಜುವೆಲ್ಲರಿ ಡೊಮೆಸ್ಟಿಕ್‌ ಕೌನ್ಸಿಲ್‌ ಮಾಹಿತಿ ನೀಡಿದ್ದು, ಚಿನ್ನ ಆಮದು ಹಾಗೂ ಜುವೆಲ್ಲರಿಗಳ ಮೇಲಿನ ಜಿಎಸ್‌ಟಿಯನ್ನು ಶೇ.1ಕ್ಕೆ ನಿಗದಿಗೊಳಿಸಿ ಅಬಕಾರಿ ಸುಂಕವನ್ನು ಶೇ.10ರಷ್ಟು ಇಳಿಕೆ ಮಾಡುವಂತೆ ಬೇಡಿಕೆ ಇಡಲಾಗಿದೆ ಎಂದು ಕೌನ್ಸಿಲ್‌ ಉಪಾಧ್ಯಕ್ಷ ಶಂಕರ್‌ ಸೇನ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next