Advertisement

ತೈಲೋತ್ಪನ್ನ ಭಾರೀ ತುಟ್ಟಿ

07:00 AM Apr 21, 2018 | Team Udayavani |

ಹೊಸದಿಲ್ಲಿ /ಜೆಡ್ಡಾ: ವಿಶ್ವ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 73.78 ಡಾಲರ್‌ನಷ್ಟು ಹೆಚ್ಚಾಗಿದೆ. ಹೀಗಾಗಿ ಲೀಟರ್‌ ಪೆಟ್ರೋಲ್‌,  ಡೀಸೆಲ್‌ ಬೆಲೆ 2013ರ ಸೆಪ್ಟೆಂಬರ್‌ ಬಳಿಕ ಅತ್ಯಧಿಕ ಮಟ್ಟಕ್ಕೇರಿದೆ. ಒಪೆಕ್‌ ರಾಷ್ಟ್ರಗಳೂ ಉತ್ಪಾದನೆ ಮೇಲೆ ನಿಯಂತ್ರಣ ಹೇರಿರುವುದು ದರ ಹೆಚ್ಚಲು ಕಾರಣ.

Advertisement

ಹೊಸದಿಲ್ಲಿಯಲ್ಲಿ ಶುಕ್ರವಾರ ಲೀ. ಪೆಟ್ರೋಲ್‌ಗೆ 74.08, ಮುಂಬೈನಲ್ಲಿ 81.94, ಕೋಲ್ಕತಾದಲ್ಲಿ 76.78, ಚೆನ್ನೈ ನಲ್ಲಿ 76.85, ಬೆಂಗಳೂರಿನಲ್ಲಿ 75.25 ಆಗಿತ್ತು. ಅದೇ ರೀತಿ ಪ್ರತಿ ಲೀಟರ್‌ ಡೀ ಸೆಲ್‌ ಬೆಲೆ ನವದೆಹಲಿಯಲ್ಲಿ 65.31, ಮುಂಬಯಿಯಲ್ಲಿ 68.01, ಕೋಲ್ಕತಾದಲ್ಲಿ 69.54, ಚೆನ್ನೈನಲ್ಲಿ 68.90, ಬೆಂಗಳೂರಿನಲ್ಲಿ 66.41 ಆಗಿತ್ತು.

ಸೌದಿ ಅರೇಬಿಯಾ‌ ತೈಲ ಸಚಿವ ಖಾಲಿದ್‌- ಅಲ್‌-ಫ‌ಲೇಹ್‌ ಮಾತ ನಾಡಿ, ಜಗತ್ತಿನ ರಾಷ್ಟ್ರಗಳಿಗೆ ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆ ಪಾವತಿ ಸಾಮರ್ಥ್ಯ ಇದೆ ಎಂದಿದ್ದಾರೆ. ಅವರ ಹೇಳಿಕೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವಾದ್ಯಂತ ಧಾರಾಳವಾಗಿ ಕಚ್ಚಾ ತೈಲ ದೊರೆಯುತ್ತಿರುವಾಗ ಕೃತಕವಾಗಿ ಕಚ್ಚಾ ತೈಲ ಬೆಲೆ ಏರುವಂತೆ ಮಾಡಲಾಗುತ್ತಿದೆ. ಒಪೆಕ್‌ ರಾಷ್ಟ್ರಗಳ ಕ್ರಮ ಒಪ್ಪಲಾಗದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next