ಕಳೆದಿದ್ದು, ಜನಜೀವನದ ಅವಿಭಾಜ್ಯ ಅಂಗಗಳಾದ ಹೋಟೆಲ್, ಪೆಟ್ರೋಲ್ -ಡೀಸೆಲ್ ಹಾಗೂ ಮೊಬೈಲ್ ಶಾಪ್
ಗಳಲ್ಲಿ ಬೆಲೆ ಹೆಚ್ಚಳವಾಗದೇ ಗ್ರಾಹಕರು ನಿರಾಳವಾಗಿದ್ದಾರೆ.
Advertisement
ನಗರದ ಹೋಟೆಲ್‌ಗಳಲ್ಲಿ ಎಂದಿನಂತೆ ವ್ಯಾಪಾರ ನಡೆದಿದ್ದು, ಯಾವುದೇ ಎಸಿ ರಹಿತ ಹೋಟೆಲ್‌ಗಳಲ್ಲಿ ದಿನ ನಿತ್ಯದಉಪಾಹಾರ, ಕಾಫಿ, ಟೀ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದ ಕೇಂದ್ರ ಭಾಗದಲ್ಲಿರುವ ಹೋಟೆಲ್ ಮಯೂರಾದಲ್ಲಿ
ಯಾವುದೇ ತಿಂಡಿ-ತಿನಿಸುಗಳ ಬೆಲೆಯಲ್ಲಿ ಹೆಚ್ಚಳವಾಗದೇ ಇರುವುದು ಗ್ರಾಹಕರಲ್ಲಿ ಒಂದಿಷ್ಟು ಅಚ್ಚರಿ ತಂದಿದ್ದಂತೂ ನಿಜವಾಗಿತ್ತು. ಜಿಎಸ್‌ಟಿ ಕುರಿತು ಮಾತನಾಡಿದ ಹೋಟೆಲ್ ಮಾಲೀಕ ಮಧುಸೂದನ್, ಹೋಟೆಲ್ ಉದ್ಯಮದ ಮೇಲೆ ಜಿಎಸ್‌ಟಿ ಪರಿಣಾಮ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ವಾರ್ಷಿಕ 75 ಲಕ್ಷ ರೂ. ಗಳಿಗಿಂತಲೂ ಹೆಚ್ಚು ವಹಿವಾಟು
ಮಾಡುವ ಹೋಟೆಲ್‌ಗಳಿಗೆ ಶೇ.12ರಷ್ಟು ಜಿಎಸ್‌ಟಿ ವಿ ಧಿಸಲಾಗುತ್ತಿದೆ. ಎಸಿ ಇರುವ ಹೋಟೆಲ್‌ಗಳಿಗೆ ತೆರಿಗೆ ಶೇ.18ರಷ್ಟಾಗಲಿದೆ ಎಂದು ತಿಳಿಸಿದರು.
ಅನಿವಾರ್ಯವಾಗಿ ತಿಂಡಿ-ತಿನಿಸುಗಳ ಬೆಲೆಯೂ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಹೋಟೆಲ್ ಉದ್ಯಮಕ್ಕೆ ಜಿಎಸ್‌ಟಿ
ವಿ ಧಿಸುವ ಕುರಿತಂತೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಅಷ್ಟರಲ್ಲಿ ಈ ಹಿಂದೆ ಇದ್ದ ಶೇ.4ರ ವ್ಯಾಟ್‌ಗೆ ಶೇ.1
ಜಿಎಸ್‌ಟಿ ಸೇರಿಸಿ ಹೋಟೆಲ್ ಉದ್ಯಮಕ್ಕೆ ಶೇ.5ರಷ್ಟು ಜಿಎಸ್‌ಟಿ ವಿ ಧಿಸಿದರೆ ಶೇ.1ರ ತೆರಿಗೆ ಹೆಚ್ಚಳ ಸರಿದೂಗಿಸಬಹುದು. ಉಳಿದಂತೆ ವಸತಿ ಗೃಹದ ಬಾಡಿಗೆ 1000 ರೂ. ಗಿಂತಲೂ ಕಡಿಮೆ ಇದ್ದರೆ ಯಾವುದೇ
ತೆರಿಗೆ ಇಲ್ಲ. ಆದರೆ, ಬಾಡಿಗೆ 1000 ರೂ. ಮೀರಿದರೆ ಶೇ. 12ರಷ್ಟು ಜಿಎಸ್‌ಟಿಯನ್ನು ಗ್ರಾಹಕರು ಪಾವತಿಸಬೇಕು ಎಂದು ಅವರು ತಿಳಿಸಿದರು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ: ಜಿಎಸ್‌ಟಿ ಜಾರಿಯಾದ ನಂತರ ಪೆಟ್ರೋಲ್ ಹಾಗೂ ಡೀಸೆಲ್‌ಗಳ ಬೆಲೆಯಲ್ಲಿ ಇಳಿಕೆಯಾಗಿದೆ. ನಗರದ ಭಾರತ್ ಪೆಟ್ರೋಲಿಯಂ ಉತ್ಪನ್ನಗಳ ವಿತರಕರಾದ ಕೇಶವರೆಡ್ಡಿ ಪೆಟ್ರೋಲ್ ಬಂಕ್‌ನಲ್ಲಿ ಜೂನ್ 30ರಂದು ಸಾಮಾನ್ಯ ಪೆಟ್ರೋಲ್‌ಗೆ 69.02 ರೂ ಬೆಲೆ ಇತ್ತು. ಜು. 3ರಂದು ಈ ಬೆಲೆ 65.63ಕ್ಕೆ ಇಳಿದಿತ್ತು. ಹೈಸ್ಪೀಡ್ ಪೆಟ್ರೋಲ್ ಬೆಲೆ ಜೂ. 30ರಂದು 71.84 ರೂ ಇತ್ತು, ಜು. 3ರಂದು ಈ ಬೆಲೆ 68.33 ರೂ.ಗಳಿಗೆ ಇಳಿದಿತ್ತು. ಜೂ.30ರಂದು ಡೀಸೆಲ್ ಬೆಲೆ 58.30 ರೂಗಳಷ್ಟಿತ್ತು. ಜು.3ರಂದು ಡೀಸೆಲ್ ಬೆಲೆ 55.61 ರೂ.ಗಳಿಗೆ ಇಳಿದಿತ್ತು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆ ಆಗಿದ್ದರಿಂದ ಗ್ರಾಹಕರು ಕೊಂಚ ಖುಷಿಯಲ್ಲಿದ್ದರು.
Related Articles
ಜಿಎಸ್‌ಟಿ ಜಾರಿಯಾದಾಗಿನಿಂದ ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಬೆಲೆಯಲ್ಲಿ ಬದಲಾವಣೆಗಳಾಗಿಲ್ಲ. ನಗರದ ಎಸ್‌ಜಿಕೆ ಮೊಬೈಲ್ ಶಾಫಿಯಲ್ಲಿ ವಿವೋ, ಒಪೊ ಬ್ರಾಂಡ್‌ಗಳ ಸ್ಮಾರ್ಟ್ ಫೋನ್ಗಳನ್ನು 500 ರೂ. ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಅಂಗಡಿ
ಮಾಲೀಕ ಎಚ್.ಕೆ.ಬಸವರೆಡ್ಡಿ, ಆ್ಯಪಲ್ ಕಂಪನಿಯ ಮೊಬೈಲ್ ಫೋನ್‌ಗಳಿಗೆ ಶೇ. 3.5ರಿಂದ ಶೇ. 4ರವರೆಗೆ ರಿಯಾಯ್ತಿ ಘೋಷಿಸಲಾಗಿದೆ. ಆದರೆ, ಬೇರೆ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಬದಲಾವಣೆಗಳಾಗಿಲ್ಲ. ಆದರೆ, ಜಿಎಸ್‌ಟಿ ಜಾರಿಯಾಗುವ ಮುನ್ನ ನಮ್ಮ ಗ್ರಾಹಕರಿಗೆ ನಮ್ಮ ಲಾಭಾಂಶದಲ್ಲಿ ಕಡಿಮೆ ಮಾಡಿ 500 ರೂಗಳ ವರೆಗೆ ರಿಯಾಯ್ತಿ ನೀಡುತ್ತಿದ್ದೇವೆ. ಆದರೆ, ಮೊಬೈಲ್ ಕರೆನ್ಸಿ ರಿಚಾರ್ಜ್ ದರಗಳಲ್ಲಿ ಬದಲಾವಣೆಗಳಾಗದಿದ್ದರೂ
ಕರೆಗಳ ದರದಲ್ಲಿ ಕೊಂಚ ಹೆಚ್ಚಳವಾಗಿದೆ ಎಂದರು.
Advertisement
ಜಿಎಸ್‌ಟಿ ತೆರಿಗೆ ಪದ್ಧತಿ ಉತ್ತಮವಾಗಿದೆ. ಮುಂಚಿನಂತೆ ತೆರಿಗೆ ವರದಿ ಸಲ್ಲಿಕೆಯಲ್ಲಿದ್ದಂತ ಗೋಜಲುಗಳು ಇಲ್ಲವಾಗಿವೆ.ಇದೊಂದು ಸರಳೀಕೃತ ತೆರಿಗೆ ಪದ್ಧತಿಯಾಗಿದ್ದು ಹೋಟೆಲ್ ಉಪಾಹಾರಗಳು ಗ್ರಾಹಕರಿಗೆ ಹೊರೆಯಾಗದಿರಲು ಈಗ ವಿಧಿಸಿರುವ ಶೇ. 12ರ ಜಿಎಸ್‌ಟಿ ಶೇ.5ಕ್ಕೆ ಇಳಿಕೆಯಾಗಬೇಕು. ಎಚ್.ಎಸ್.ಮಧುಸೂದನ್, ಮಾಲೀಕರು, ಮಯೂರಾ
ಹೋಟೆಲ್ ಎಂ.ಮುರಳಿಕೃಷ್ಣ