Advertisement
ಜಾಗೃತಿಯ ನಿಶ್ಯಕ್ತಿ!ಅಹ್ಮದಾಬಾದ್‌ನಲ್ಲಿ 1978ರಲ್ಲಿ ಸ್ಥಾಪನೆಯಾದ ಗ್ರಾಹಕ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರ (ಸಿಇಆರ್‌ಸಿ) ಈಗ ಗ್ರಾಹಕ ಹೋರಾಟಗಳ ಮುಂಚೂಣಿಯ ನಾಯಕನಾಗಿರಬೇಕಿತ್ತು. 10 ಸಾವಿರ ಚದರ ಮೀಟರ್ ಜಾಗದಲ್ಲಿ ವ್ಯಾಪಿಸಿರುವ ಸಂಸ್ಥೆಯ ಆಂತರಿಕ ಪ್ರಯೋಗಾಲಯ ಏಷ್ಯಾ ಮಟ್ಟದಲ್ಲಿಯೇ ಅಪರೂಪವಾದದ್ದು. ಇಲ್ಲಿ ಆಹಾರ, ಸೌಂದರ್ಯವರ್ಧಕ, ಮನೆಯ ಎಲೆಕ್ಟ್ರಿಕಲ್ ಉಪಕರಣಗಳು, ಪಂಪ್‌ಸೆಟ್, ಫ್ಯಾನ್…. ಹೀಗೆ ಹಲವು ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸುವ ವ್ಯವಸ್ಥೆಯನ್ನು ಹೊಂದಲಾಗಿದೆ.
ಈ ರೀತಿಯ ಪತ್ರಿಕಾ ಪ್ರಕಟಣೆ, ಕಾರ್ಯಾಗಾರಗಳು, ವ್ಯವಸ್ಥಿತ ಲ್ಯಾಬ್ ನಿರ್ವಹಣೆಗಳು ಅತಿ ಹೆಚ್ಚಿನ ವೆಚ್ಚಗಳನ್ನು ಬಯಸುತ್ತವೆ. ಪರೀಕ್ಷೆಗೆ ಒಳಪಡುವ ಒಂದು ತಯಾರಿಕೆಯನ್ನು ಸಿಇಆರ್‌ಸಿ ಸಾಗರದಿಂದಲೂ ಖರೀದಿಸುತ್ತಿತ್ತು. ಸಾಗರದ ಬಳಕೆದಾರರ ವೇದಿಕೆ ಅದನ್ನು ಮಾರುಕಟ್ಟೆಯಲ್ಲಿಯೇ ಖರೀದಿಸಿ ಕಳುಹಿಸಿದರೆ ಅದರ ಎಲ್ಲ ವೆಚ್ಚಗಳನ್ನು ಸಿಇಆರ್‌ಸಿ ಭರಿಸುತ್ತಿತ್ತು. ಈ ರೀತಿ ದೇಶಾದ್ಯಂತ ನಡೆಸುವ ಚಟುವಟಿಕೆಗೆ ಬೇಕಾಗುವ ಹಣಕಾಸು ಸಾಕಷ್ಟು ದೊಡ್ಡ ಮೊತ್ತದ್ದಾಗಿರುತ್ತದೆ. ಎಲ್ಲೋ ಒಂದು ಕಡೆ, ಆ ನಿರ್ವಹಣೆ ಸಾಧ್ಯವಾಗದೆ ಇಂಗ್ಲೀಷ್‌ನಲ್ಲಿ ಪ್ರಕಟವಾಗುತ್ತಿದ್ದ ಇನ್‌ಸೈಟ್ ಪತ್ರಿಕೆ ಕಣ್ಣು ಮುಚ್ಚಿತು. 37 ವರ್ಷಗಳ ಸೇವೆ, 53 ಉದ್ಯೋಗಿಯ ಬಲ ಪಡೆದಿರುವ ಸಂಸ್ಥೆ ಈಗಲೂ ಕಾರ್ಯಾಚರಣೆಯಲ್ಲಿದೆ ಎಂಬುದನ್ನು ಅವರ ವೆಬ್ ಸೈಟ್k ಘಜಠಿಠಿಟ://cಛಿrcಜಿnಛಜಿಚ.ಟ್ಟಜ/] ಹೇಳುತ್ತದೆ. ಗ್ರಾಹಕ್ ಸಾಥಿ ಎಂಬ ಹಿಂದಿ ಪತ್ರಿಕೆಯನ್ನು ಪ್ರಕಟಿಸುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಅದರ ಪ್ರಾಡಕ್ಟ್ ಲ್ಯಾಬ್ ರಿಪೋರ್ಟ್‌ಗಳ ವಿಭಾಗವನ್ನು ಪರಿಶೀಲಿಸಿದರೆ 2017ರವರೆಗಿನದ್ದು ಮಾತ್ರ ಕಾಣಿಸುತ್ತದೆ.
Related Articles
Advertisement
ಹೋರಾಟದ ಸಂಸ್ಥೆಗಳಿಗೆ ಆರ್ಥಿಕ ಚೇತನಬಳಕೆದಾರರ ದಂಢಿ ಹಣ ವಿವಿಧ ಸೇವಾದಾತರಲ್ಲಿ ಸಂಗ್ರಹವಾಗಿದೆ. ಬ್ಯಾಂಕ್‌ಗಳಲ್ಲಿ ಬಳಕೆಯಾದ ಬ್ಯಾಂಕ್ ಖಾತೆಗಳಲ್ಲಿ ಉಳಿದ ಹಣ, ಅವಧಿ ಮುಗಿಸಿದ್ದರೂ ಮರಳಿ ಪಡೆಯದ ಠೇವಣಿ ಹಣ, ನಗದೀಕರಣಕ್ಕೆ ಸಲ್ಲಿಸಿದ ಚೆಕ್ ಪಾವತಿಯಾಗದ ಬ್ಯಾಂಕ್‌ನ ಖಾತೆಯಲ್ಲಿರುವ ಪ್ರಕರಣ… ಇವುಗಳಿಂದ ಕೋಟಿ ಕೋಟಿ ರೂ.ಗಳ ಸಂಗ್ರಹವಿದೆ. ಇತ್ತೀಚಿನ ಮಾಹಿತಿಯಂತೆ 64 ಬ್ಯಾಂಕ್‌ಗಳಲ್ಲಿ ಹಕ್ಕುದಾರಿಕೆ ಮಂಡಿಸದೆ ಸಂಗ್ರಹದಲ್ಲಿರುವ ಮೊತ್ತ 11,300 ಕೋಟಿ ರೂ. ಈವರೆಗೆ 3 ಕೋಟಿ ಖಾತೆಗಳು ತಟಸ್ಥವಾಗಿವೆ. ಈ ಮೊತ್ತ ಬ್ಯಾಂಕ್‌ಗಳ ಕೇಂದ್ರ ಶಾಖೆಯ ಖಾತೆಗೆ ವರ್ಗಾವಣೆಗೊಳ್ಳಬೇಕು. ಇದಕ್ಕೆ ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿದರವನ್ನು ಲಾಗೂ ಮಾಡಿ ಬಡ್ಡಿಯನ್ನೂ ಸೇರಿಸಬೇಕು ಎಂಬ ಆರ್‌ಬಿಐ ನಿಯಮವಿದೆ. ಹಣವನ್ನು ಬ್ಯಾಂಕಿಂಗ್ ಕ್ಷೇತ್ರದ ಫಲಾನುಭಗಳ ಜಾಗೃತಿಗಾಗಿ ಬಳಸಬೇಕೆಂಬ ಷರತ್ತಿನಡಿಯಲ್ಲಿ ಬ್ಯಾಂಕಿಂಗ್ ನಿಯಮಗಳಿಗೆ 2012ರಲ್ಲಿ ತಿದ್ದುಪಡಿ ತಂದು ಡಿಪಾಸಿಟರ್ ಎಜುಕೇಷನ್ ಎಂಡ್ ಅವೇರ್‌ನೆಸ್ ಫಂಡ್ ರೂಪಿಸಲಾಗಿದೆ. ಈ ಹಣ ಸರಿಯಾದ ಕಾರಣಕ್ಕೆ ಬಳಕೆಯಾಗುತ್ತಿಲ್ಲ ಎಂದು ನಂಬಲು ಕಾರಣಗಳಿವೆ. ಕಾಟಾಚಾರಕ್ಕೆ ನಡೆಯುವ ಜಾಗೃತಿ ಸಮಾವೇಶಗಳು, ಕಾರ್ಯಾಗಾರಗಳಿಗಿಂತ ಸಿಇಆರ್‌ಸಿಯಂತಹ ಸಂಸ್ಥೆಗಳನ್ನು ಮುನ್ನಡೆಸಲು ಇಂಥ ಹಣ ಬಳಕೆಯಾಗಬೇಕು. ಈ ಥರಹದ ಸಂಸ್ಥೆಗಳು ಪೂರ್ಣ ಪ್ರಮಾಣದ ಕಾರ್ಯಾಚರಣೆಯಲ್ಲಿದ್ದರೆ ಗ್ರಾಹಕ ಆಂದೋಲನ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಟೆಲಿಕಾಂ ಕ್ಷೇತ್ರದಲ್ಲಿಯೂ ನಿರ್ಜೀವ ಸಿಮ್‌ನಲ್ಲಿ ಬಳಕೆಯಾಗದೆ ಉಳಿಯುವ ಮೊತ್ತವೂ ಸಾವಿರಾರು ಕೋಟಿಗಳಾಗುತ್ತವೆ. ಈ ಕುರಿತ ಅಂಕಿಅಂಶ ಲಭ್ಯವಿಲ್ಲ. ಆದರೆ ಒಂದಂತೂ ಸ್ಪಷ್ಟ, ಈ ಮೊತ್ತ ಗ್ರಾಹಕ ಜಾಗೃತಿಯ ಚಟುವಟಿಕೆಗಳಿಗಾಗಿಯೇ ವಿನಿಯೋಗವಾಗಬೇಕಾಗಿದೆಯೇ ವಿನಃ ಮೊಬೈಲ್ ಸೇವಾದಾತರ ಅಕೌಂಟ್‌ಗೆ ಸೇರಬಾರದು. ಗ್ರಾಹಕ ನಿಧಿಯ ಬಳಕೆ
1944ರ ಸೆಂಟ್ರಲ್ ಎಕ್ಸೆ„ಸ್ ಎಂಡ್ ಸಾಲ್ಟ್ ಆ್ಯಕ್ಟ್‌ನು° 1991ರಲ್ಲಿ ತಿದ್ದುಪಡಿ ಮಾಡಿ ಗ್ರಾಹಕ ಹಿತರಕ್ಷಣಾ ನಿಧಿಯನ್ನು ರೂಪಿಸಲಾಯಿತು. ಈ ನಿಧಿಯಲ್ಲಿಯೂ ಸಾವಿರಾರು ಕೋಟಿ ಹಣವಿದೆ. ಗ್ರಾಹಕ ನ್ಯಾಯಾಲಯಗಳಲ್ಲಿ ಸೇವಾ ನ್ಯೂನತೆ ಎಸಗುವ ಅಪರಾಧಿ ಸಂಸ್ಥೆ, ವ್ಯಕ್ತಿಗಳಿಗೆ ವಿಧಿಸುವ ದಂಡಗಳು ಗ್ರಾಹಕ ನಿಧಿಗೆ ಸಲ್ಲುತ್ತವೆ. ಇತ್ತೀಚಿನ ಒಂದು ಪ್ರಕರಣವನ್ನು ಉಲ್ಲೇಖೀಸುವುದಾದರೆ, ದೆಹಲಿಯ ಜಾನ್ಸನ್ ಎಂಡ್ ಜಾನ್ಸನ್ ತಯಾರಿಕೆಯ ಡೀಲರ್ ಒಬ್ಬರು ಶೇ. 18ರಷ್ಟು ಬಡ್ಡಿ ಸಮೇತ 5 ಲಕ್ಷ ರೂ.ಗಳನ್ನು ಜಿಎಸ್‌ಟಿ ವಂಚನೆಯ ಪ್ರಕರಣದಲ್ಲಿ ಗ್ರಾಹಕ ನಿಧಿಗೆ ಪಾವತಿಸಿದ್ದಾರೆ. ಈ ರೀತಿಯ ಹಣ ನುಂಗಿ ನೀರು ಕುಡಿಯಲೆಂದೇ ನೂರಾರು ಲೆಟರ್‌ಹೆಡ್ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಬಹುಪಾಲನ್ನು ಅಧಿಕಾರದಲ್ಲಿದ್ದವರೇ ಬೇನಾಮಿ ಸಂಘಟನೆಗಳು, ಟ್ರಸ್ಟ್‌ಗಳನ್ನು ಹುಟ್ಟುಹಾಕಿ ಜನರ ದುಡ್ಡಿಗೆ ಕೈಹಾಕಿವೆ. ನಿಜಕ್ಕೂ ಸೇವೆ ಸಲ್ಲಿಸುತ್ತಿರುವ, ಹಣ ಮಾಡುವ ದಂಧೆ ಗೊತ್ತಿಲ್ಲದ ಪ್ರಾಮಾಣಿಕರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದಾರೆ! ಸರ್ಕಾರ ಎಂಬುದಕ್ಕೆ ಅಪಾರ ಶಕ್ತಿ ಇದೆ. ಅದು ಗ್ರಾಹಕ ಕ್ಷೇತ್ರದಲ್ಲಿ ಅಸಲಿಯತ್ತಾಗಿ ಕೆಲಸ ಮಾಡುವ ಸಂಸ್ಥೆಗಳ ಮಾಹಿತಿಯನ್ನು ಸಂಗ್ರಹಿಸಿ ತಾನೇ ಯೋಜನೆ ರೂಪಿಸಿ ಅವುಗಳನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯ, ಸಾಧ್ಯತೆಗಳನ್ನು ಹೊಂದಿದೆ. ಅದಾಗಲಿ. – ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು,
ಬಳಕೆದಾರರ ವೇದಿಕೆ, ಸಾಗರ