ಬೆಂಗಳೂರು: ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ವಂಚಿಸಿದ್ದಖಾಸಗಿ ಉದ್ಯೋಗ ಏಜೆನ್ಸಿಯ ವಿರುದ್ಧಕಾನೂನು ಸಮರ ಸಾರಿ, ಉದ್ಯೋಗಾಕಾಂಕ್ಷಿಯೊಬ್ಬರು 1 ಲಕ್ಷ ರೂ. ಪಡೆದು ಕೊಂಡಿದ್ದಾರೆ.
ಬೆಂಗಳೂರು ನಿವಾಸಿಯಾಗಿರುವ ಭೌತ ಶಾಸ್ತ್ರದ ಎಂಎಸ್ಸಿ, ವೈದ್ಯಕೀಯ ಪದವೀ ಧ ರಾಗಿರುವ51ವರ್ಷದ ದೂರುದಾರರು ಕಂಪನಿ ಯೊಂದರಲ್ಲಿ ಮಾಸಿಕ 1.40 ಲಕ್ಷ ರೂ. ವೇತನ ಪಡೆಯುತ್ತಿದ್ದರು. 2014ರಲ್ಲಿ ಉದ್ಯೋಗ ಏಜೆನ್ಸಿ ಸಂಪರ್ಕಕ್ಕೆ ಬಂದಿದ್ದು, ಈ ವೇಳೆ ಸಂಸ್ಥೆಯು 1.64 ಲಕ್ಷ ರೂ.ಜೀವಿತಾವಧಿಯ ಸದಸ್ಯತ್ವ ಪಡೆದು ಕೊಂಡಿದರೆ ಆ್ಯಪಲ್, ಐಎನ್‌ಸಿ ಸೇರಿದಂತೆ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಕೊಡಿಸು ವುದಾಗಿ ಭರವಸೆ ನೀಡಿದ್ದರು. ಇದನ್ನು ನಂಬಿ 2014ರಲ್ಲಿ ಸದಸ್ಯತ್ವ ಶುಲ್ಕ ಪಾವತಿಸಿ ನೊಂದಣಿ ಮಾಡಿಕೊಂಡಿದ್ದರು.
ಬಯೋಡೆಟಾ ತಡೆ ಬೆದರಿಕೆ!: ಮೆಡಿಕಲ್ ಫೀಲ್ಡ್ ಉದ್ಯೋಗದ ಬಗ್ಗೆ ಯಾವುದೇ ತರಹದ ಜ್ಞಾನವಿಲ್ಲದ ಏಜೆನ್ಸಿ ದೂರುದಾರರಿಗೆ ವೈದ್ಯಕೀಯ ಎಂಜಿಯರಿಂಗ್ ಕ್ಷೇತ್ರದ ಅರ್ಹತೆಗೆ ತಕ್ಕಂತೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ವಿಫಲವಾಗಿದೆ. ಏಜೆನ್ಸಿ ನಂಬಿ ವ್ಯಕ್ತಿಯು ಕೆಲಸಬಿಟ್ಟು21 ತಿಂಗಳ ಕಾಲ ಹೊಸ ಉದ್ಯೋಗಕ್ಕಾಗಿ ಕಾದಿದ್ದರು. ಈ ವೇಳೆ ಉದ್ಯೋಗವಿಲ್ಲದೆ ತಲ್ಲಣಕ್ಕೆಒಳಗಾಗಿದ್ದರು. ಈ ವೇಳೆ ಸದಸ್ಯತ್ವ ಶುಲ್ಕ ಮರುಪಾವತಿಗೆ ಆಗ್ರಹಿಸಿ ದಾಗ ಏಜೆನ್ಸಿಯು ಒಪ್ಪಂದ ಉಲ್ಲಂಘನೆಗೆ 25 ಲಕ್ಷ ರೂ. ದಂಡಪಾವತಿಸುವಂತೆ ಬೆದರಿಕೆ ಹಾಕಿದೆ.
11.60 ಲಕ್ಷ ರೂ. ಪರಿಹಾರ: ಇದರಿಂದನೊಂದ ವ್ಯಕ್ತಿಯು ವಂಚಿಸಿದ ಏಜೆನ್ಸಿಯಿಂದ ಮಾನಸಿಕ ಸಮಸ್ಯೆ, ಸಮಯ ವ್ಯತ್ಯಯ, ಸೇವಾ ವ್ಯತ್ಯಯದ ಹಿನ್ನೆಲೆ 11.60ಲಕ್ಷ ರೂ. ಪರಿಹಾರ ಕೋರಿ ಬೆಂಗಳೂರು ನಗರ ಹಾಗೂ ಗ್ರಾಮೀಣ 1ನೇ ಹೆಚ್ಚುವರಿ ಗ್ರಾಹಕ ಕೋರ್ಟ್‌ಗೆ ದೂರಿತ್ತಿದ್ದಾರೆ.
ಆಪಾದನೆ ತಿರಸ್ಕಾರ: ದೂರುದಾರರ ವಾದ ಹಾಗೂ ಆರೋಪಗಳನ್ನು ಉದ್ಯೋಗ ಏಜೆನ್ಸಿತಿರಸ್ಕರಿಸಿದೆ. ಒಬ್ಬ ಸ್ನಾತಕೋತ್ತರ ಪದವೀಧರನಿಗೆಏಜೆನ್ಸಿ ತನ್ನಲ್ಲದ ಕ್ಷೇತ್ರದಿಂದ ಉದ್ಯೋಗ ನೀಡುತ್ತಿಲ್ಲ ಎನ್ನುವುದಾಗಿ ತಿಳಿಯಲು ಮೂರುವರ್ಷಗಳು ಹಿಡಿಯಿತೇ? ಉದ್ಯೋಗಕ್ಕೆ ಕೇವಲ ಪದವಿಯೊಂದೇ ಸಾಲದ್ದು, ಜತೆಗೆ ವೃತ್ತಿ ಕೌಶ್ಯಲ ಸಹ ಬೇಕಾಗುತ್ತಿದೆ. ಈ ಕೌಶ್ಯಲ ದೂರುದಾರರ ಬಳಿ ಇಲ್ಲ. ಒಪ್ಪಂದ ಪ್ರಕಾರ ನಿಯಮ ಮೀರಿ ದೂರು ದಾಖಲಿಸಿದ್ದಕ್ಕೆ ದೂರುದಾರರು ಸಂಸ್ಥೆಗೆ ಹಣ ಪಾವತಿಗೆ ವಕೀಲರು ವಾದ ಮಂಡಿಸಿದ್ದಾರೆ.
1 ಲಕ್ಷ ರೂ. ಪಾವತಿಗೆ ಆಗ್ರಹ! : ವಾದ ಆಲಿಸಿದ ಗ್ರಾಹಕ ನ್ಯಾಯಾಲಯ ಗ್ರಾಹಕ ಸೇವೆಯಲ್ಲಿ ದೋಷ ಆಗಿರುವುದು ಭಾಗಶಃ ದೃಢಗೊಂಡಿದೆ. ದೂರುದಾರರು ಸದಸ್ಯತ್ವಪಡೆದುಕೊಂಡ ಬಳಿಕ 3ವರ್ಷಗಳ ಕಾಲ ಅನೇಕಸಂದರ್ಶನಗಳಿಗೆ ಹಾಜರಾಗಿದ್ದಾರೆ. ಒಪ್ಪಂದ ಪ್ರಕರಣ ಸದಸ್ಯತ್ವದ ಶುಲ್ಕ ಮರುಪಾವತಿಮಾಡಲು ಸಾಧ್ಯವಿಲ್ಲ. ಆದರೆ ದೂರುದಾರರುಸದಸ್ಯತ್ವ ಮುಂದುವರಿಸಲು ನಿರಾಕರಿಸಿದ ಹಿನ್ನೆಲೆಸಂಸ್ಥೆಯು ಸದಸ್ಯತ್ವ ಶುಲ್ಕದ 82,ಸಾವಿರ ಮೊತ್ತಕ್ಕೆಶೇ.12ರ ಬಡ್ಡಿ ದರದಲ್ಲಿ 6ವರ್ಷದ ಅವಧಿಗೆ ಒಟ್ಟು ಲಕ್ಷರೂ. ಪಾವತಿಸಲು ಹೇಳಿದೆ.
-ತೃಪ್ತಿ ಕುಮ್ರಗೋಡು