ಚಡಚಣ: ಕೇವಲ 14 ವರ್ಷದಲ್ಲಿ 1593 ಉಳಿತಾಯ ಖಾತೆ, 721 ಕೋಟಿ ರೂ. ಠೇವಣಿಯೊಂದಿಗೆ 131 ಶಾಖೆಗಳಾಗಲು ಗ್ರಾಹಕರ ವಿಶ್ವಾಸ ಹಾಗೂ ಉತ್ತಮ ವ್ಯವಹಾರವೆ ಕಾರಣ ಎಂದು ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.
ರೇವತಗಾಂವ ಗ್ರಾಮದಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರಿ ಶಾಖೆ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿದ್ದಸಿರಿ ಶಾಖೆಯಿಂದ ವಿಜಯಪುರ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಬಡ್ಡಿ ರಹಿತ 5 ಸಾವಿರ ರೂ. ಸಾಲ ನೀಡಲಾಗುತ್ತಿದೆ. ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ 15 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿಗೆ 1000 ಕೋಟಿ ರೂ. ಸಾಲ ನೀಡಿದ್ದೇವೆ. ಅವರು ಸರಿಯಾದ ವ್ಯವಹಾರ ನಮ್ಮ ಜೊತೆ ಇಟ್ಟುಕೊಂಡಿದ್ದಾರೆ.24×365 ಎಂಬ ಹೆಸರಿನಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವಂತಹ ಶಾಖೆಗಳು ಆರಂಭಿಸಿದ್ದೇವೆ ಎಂದರು.
ಮಹಿಳಾ ಶಾಖೆಗಳನ್ನು ಆರಂಭಿಸಿದ್ದು ರಾಜ್ಯದ ಪ್ರತಿ ತಾಲೂಕಿಗೊಂದು ಶಾಖೆ ತೆಗೆಯುವ ಯೋಜನೆ ರೂಪಿಸಲಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಮಣೂಕ ಶೇಖರಣಾ ಘಟಕ ಮಾಡಲಾಗುತ್ತಿದೆ ಎಂದ ಅವರು, ಭೀಮಾ ತೀರದ ಗ್ರಾಮಗಳ ರಸ್ತೆಗಳು ಹದಗೆಟ್ಟಿದ್ದು ಡಿಸಿಎಂ ಕಾರಜೋಳ ಜೊತೆ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ:ಜ.1ರ ಬಳಿಕ ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಡಯಲ್ ಮಾಡಲು ‘0’ ಒತ್ತಿ
ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿದ ಹತ್ತಳ್ಳಿ ಹಿರೇಮಠದ ಗುರುಪಾದೇಶ್ವರ ಶಿವಾಚಾರ್ಯರು ಮಾತನಾಡಿ, ಪ್ರವಾಹ ಬಂದಾಗೊಮ್ಮೆ ಈ ಭಾಗದ ರೈತರು ಸಂಕಷ್ಟ ಅನುಭವಿಸುತ್ತಿದ್ದು ಶಾಶ್ವತ ಪರಿಹಾರ ಕಲ್ಪಿಸಿ ಎಂದರು. ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ಬಂದಣ್ಣಕುಂಬಾರ, ಮಹಾದೇವ ಹಿರೇಕುರಬರ, ಶಿವಾನಂದ ಅಜುರ,ಭೀಮಾಶಂಕರ ಪೂಜಾರಿ, ನೀಲಕಂಠ ಗೌಡ ಬಿರಾದಾರ,ಸಿದ್ದರಾಮ ಗುಡ್ಡಾಪುರೆ, ರೇವಪ್ಪ ಇರಾಮನಿ, ಶಿವಾನಂದ ಅಣ್ಣೆಪ್ಪನವರ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ
ಇದ್ದರು.