Advertisement

ಉಪ ಚುನಾವಣೆಗೆ ಸಮಾಲೋಚನೆ

11:46 PM Aug 05, 2019 | Lakshmi GovindaRaj |

ಬೆಂಗಳೂರು: ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆ ಸಿದ್ಧತೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೋಮವಾರ ವೀಕ್ಷಕರು ಹಾಗೂ ಉಸ್ತುವಾರಿಗಳ ಜತೆ ಸಮಾಲೋಚನೆ ನಡೆಸಿದರು.

Advertisement

ಕೆ.ಆರ್‌. ಪುರದ ವೀಕ್ಷಕ ಕೆ.ಜೆ.ಜಾರ್ಜ್‌, ಹೊಸಕೋಟೆ ವೀಕ್ಷಕ ಕೃಷ್ಣ ಬೈರೇಗೌಡ, ರಾಣಿಬೆನ್ನೂರು ವೀಕ್ಷಕ ಜಮೀರ್‌ ಅಹಮದ್‌ ಜತೆ ಆಯಾ ಕ್ಷೇತ್ರಗಳ ಸ್ಥಿತಿಗತಿ, ಪರ್ಯಾಯ ಅಭ್ಯರ್ಥಿ ಸಂಬಂಧ ಚರ್ಚಿಸಿದರು. ಅನರ್ಹತೆ ಕುರಿತು ನ್ಯಾಯಾಲಯದ ತೀರ್ಪು ಬಂದ ನಂತರ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಬಹುದು. ಆದರೆ, ಈಗಿನಿಂದಲೇ ಎಲ್ಲ ಕ್ಷೇತ್ರಗಳಲ್ಲಿ ಸಿದ್ಧತೆ ನಡೆಸಬೇಕು.

ಅಭ್ಯರ್ಥಿ ಗುರುತಿಸಿ ಪಕ್ಷ ಸಂಘಟನೆಯಲ್ಲೂ ತೊಡಗಲು ನಿರ್ಧರಿಸಲಾಯಿತು ಎಂದು ಹೇಳಲಾಗಿದೆ. ಮೂರೂ ಕ್ಷೇತ್ರಗಳಲ್ಲಿ ಈಗಾಗಲೇ ಪಕ್ಷದ ವತಿಯಿಂದ ಉಸ್ತುವಾರಿಗಳನ್ನು ನೇಮಿಸಲಾಗಿದೆ. ವೀಕ್ಷಕರನ್ನು ನಿಯೋಜಿಸಲಾಗಿದೆ. ಅವರು ಕೊಡುವ ವರದಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಬ್ಲಾಕ್‌ ಕಾಂಗ್ರೆಸ್‌ ಹಾಗೂ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಶಿಫಾರಸು ಪಡೆದು ಹೈಕಮಾಂಡ್‌ಗೆ ಕಳುಹಿಸಲಾಗುವುದು ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next