Advertisement

ಬೀದರನಲ್ಲಿ ಯೋಗ ಭವನ ನಿರ್ಮಾಣ: ಗಣಪತರಾವ್‌

03:18 PM Jan 02, 2022 | Team Udayavani |

ಬೀದರ: ಸಾಮೂಹಿಕವಾಗಿ ಧ್ಯಾನಯೋಗ ಮಾಡಲು ಪತಂಜಲಿ ಯೋಗ ಪೀಠದಿಂದ ಬೀದರ ನಗರದಲ್ಲಿ ಅಗತ್ಯ ಸೌಕರ್ಯಗಳುಳ್ಳ ಭವನ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಸ್ಥಳಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಭಾರತ ಸ್ವಾಭಿಮಾನ ಆಂದೋಲನದ ಜಿಲ್ಲಾಧ್ಯಕ್ಷ ಗಣಪತರಾವ್‌ ಖೂಬಾ ಮನವಿ ಮಾಡಿದರು.

Advertisement

ನಗರದ ರಾಘವೇಂದ್ರ ಮಂದಿರದ ಸಭಾಂಗಣದಲ್ಲಿ ಪತಂಜಲಿ ಯೋಗ ಪೀಠದಿಂದ ಆಯೋಜಿಸಿದ್ದ ಶೂನ್ಯ ಸಂಪಾದನೆ ಉಪಾಸನಾ ಧ್ಯಾನ ಯೋಗ ಶಿಬಿರದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒತ್ತಡ ಬದುಕು, ರೋಗರುಜಿನಗಳಿಂದ ದೂರವಿರಬೇಕಾದರೆ ನಾವೆಲ್ಲ ದಿನಾಲೂ ಧ್ಯಾನ, ಯೋಗ ಮಾಡಬೇಕು. ಜೀವನದಲ್ಲಿ ಶಾಂತಿ, ನೆಮ್ಮದಿ, ಸಂತೃಪ್ತಿಯಿಂದ ಬಾಳಬೇಕಾದರೆ ದಿವ್ಯಔಷಧಿ ಧ್ಯಾನ, ಯೋಗವಾಗಿದೆ ಎಂದರು.

ಯೋಗ ಗುರು ಮಡಿವಾಳ ದೊಡ್ಡಮನಿ ಮಾತನಾಡಿ, ಪಂಚಭೂತಗಳಿಂದ ಕೂಡಿದ ಈ ಪ್ರಕೃತಿ ಬಹಳ ಸುಂದರವಾಗಿದೆ. ನಮಗೆ ಪ್ರಕೃತಿ ಎಲ್ಲವನ್ನೂ ಧಾರೆ ಎರೆದಿದೆ. ಅದನ್ನು ಸದುಪಯೋಗ ಮಾಡಿಕೊಂಡು ಪರಿಸರವನ್ನು ನೋಡಿ ನಾವು ಬಹಳಷ್ಟು ಪಾಠ ಕಲಿಯಬೇಕಾಗಿದೆ ಎಂದರು.

ಸಾಹಿತಿ ಎಂ.ಜಿ. ದೇಶಪಾಂಡೆ ಕವನ ವಾಚಿಸಿದರು. ಡಾ| ನಂದಕುಮಾರ ತಾಂದಳೆ ಮತ್ತು ಡಾ| ಸಿ.ಎಸ್‌. ಮಾಲಿಪಾಟೀಲ ಇನ್ನಿತರರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಯೋಗ ಸಾಧಕರಾದ ಗುರನಾಥ ಮೂಲಗೆ, ಯೋಗೇಂದ್ರ ಯದಲಾಪುರೆ, ಧೊಂಡಿರಾಮ ಚಾಂದಿವಾಲೆ, ನೀಲಮ್ಮ, ಶಕುಂತಲಾ ವಾಲಿ, ವಿಜಯಲಕ್ಷ್ಮೀ ಡೋಯಿಜೋಡೆ ಅವರನ್ನು ಸನ್ಮಾನಿಸಲಾಯಿತು. ಪ್ರಶಾಂತ ಹೊಳಸಮುದ್ರಕರ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಶ್ರೀಕಾಂತ ಮೋದಿ ವಂದಿಸಿದರು. ಡಾ| ಸುನೀಲಕುಮಾರ ಮಂಗಲಗಿ, ಶಂಕರರಾವ ಚಿದ್ರಿ, ಜಗನ್ನಾಥ ಮಹಾರಾಜ, ಪ್ರೊ| ಉಮಾಕಾಂತ ಮೀಸೆ, ಚಂದ್ರಶೇಖರ ಹೆಬ್ಟಾಳೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next