ಕಟಪಾಡಿ: ಕೋಟೆ ಗ್ರಾ.ಪಂ. ವ್ಯಾಪ್ತಿಯ ಕಿನ್ನಿಗುಡ್ಡೆ ಪರಿಶಿಷ್ಟ ಜಾತಿ ಕಾಲನಿಯ ನಿವಾಸಿಗಳ ಬಹುಕಾಲದ ಬೇಡಿಕೆಯ ಸಂಪರ್ಕ ರಸ್ತೆಯ ನಿರ್ಮಾಣಕ್ಕೆ ಶನಿವಾರ ಶಾಸಕ ಲಾಲಾಜಿ ಆರ್. ಮೆಂಡನ್ ಗುದ್ದಲಿಪೂಜೆ ನೆರವೇರಿಸಿದರು. 1 ಕೋಟಿ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣಗೊಳ್ಳಲಿದೆ.
ಈ ಭಾಗದ ಜನರ ಅಭಿವೃದ್ಧಿಯ ಬೇಡಿಕೆಗೆ ಮನ್ನಣೆಯನ್ನು ನೀಡಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಡಿ ಅನುದಾನವನ್ನು ಹೊಂದಿಸಿಕೊಳ್ಳಲಾಗಿದೆ ಎಂದು ಲಾಲಾಜಿ ಮೆಂಡನ್ ಹೇಳಿದರು.
ನಿಕಟಪೂರ್ವ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಕೋಟೆ ಗ್ರಾ.ಪಂ. ಅಧ್ಯಕ್ಷ ಕಿಶೋರ್ ಕುಮಾರ್ ಅಂಬಾಡಿ, ಉಪಾಧ್ಯಕ್ಷೆ ಪ್ರಮೀಳಾ ಜತ್ತನ್ನ, ಗ್ರಾ.ಪಂ. ಸದಸ್ಯರಾದ ರತ್ನಾಕರ್ ಕೋಟ್ಯಾನ್, ರಮೇಶ್ ಪೂಜಾರಿ, ನಾಗರಾಜ್ ಮೆಂಡನ್, ಲೀಲಾವತೀ, ಕಟಪಾಡಿ ಗ್ರಾ.ಪಂ. ಸದಸ್ಯರಾದ ಕವಿತಾ ಸುವರ್ಣ, ಶ್ರೀನಿವಾಸ ಕಿಣಿ, ಗೋಪಾಲಕೃಷ್ಣ ರಾವ್ ಮಟ್ಟು, ಕೆ. ಮುರಳೀಧರ್ ಪೈ, ನಿತಿನ್ ವಿ. ಶೇರಿಗಾರ್, ಸರೋಜಿನಿ ಶೆಟ್ಟಿ, ಅಶೋಕ್ ಶೆಟ್ಟಿ, ನ್ಯಾಯವಾದಿ ಕೆ. ಗಣೇಶ್ ಕುಮಾರ್, ಗುರುಪ್ರಸಾದ್ ಶೆಟ್ಟಿ, ವೀಣಾ ಶೆಟ್ಟಿ, ಗುರುಕೃಪಾ ರಾವ್, ಮಾಧವ ಭಟ್, ಲೋಕನಾಥ್ ಶಾಂತಿ, ಪುಂಡಲೀಕ ಭಟ್, ಧೀರಜ್ ಶಾಂತಿ, ಅರ್ಚಕ ಕೃಷ್ಣ, ಹರ್ಷಿತ್ ಪೂಜಾರಿ ಮಟ್ಟು, ಸತೀಶ್ ಪೂಜಾರಿ ಉದ್ಯಾವರ, ಗೀತಾ ಶೆಣೈ, ಕರುಣಾಕರ ಪೂಜಾರಿ, ಕೆ.ವಿ. ಭಟ್, ಕೋಟೆ ಪಿಡಿಒ ಶ್ರುತಿ ಕಾಂಚನ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸವಿತಾ ಉಪಸ್ಥಿತರಿದ್ದರು.