Advertisement

ಸ್ಥಳೀಯರಿಂದಲೇ ಸಾರ್ವಜನಿಕ ಸಂಪರ್ಕ ರಸ್ತೆ ನಿರ್ಮಾಣ

01:39 AM Jun 12, 2019 | sudhir |

ಪೆರ್ಲ: ಕಾಟುಕುಕ್ಕೆ ಖಂಡೇರಿಯಿಂದ ಮುಂಗ್ಲಿಕಾನ ತೋಡಿನವರೆಗೆ ಇದ್ದ ರಸ್ತೆಯನ್ನು ವಿಸ್ತರಿಸಿ ಬಾಳೆಮೂಲೆ ಮೂಲಕ ಕರ್ನಾಟಕದ ಒಡ್ಯ ಭಾಗಕ್ಕೆ ಸಂಪರ್ಕಿಸುವ ರಸ್ತೆಯ ನಿರ್ಮಾಣ ಕಾಮಗಾರಿಯು ಸ್ಥಳೀಯರ ನೇತೃತ್ವದಲ್ಲಿ ನಡೆಯಿತು. ಪ್ರಸ್ತುತ ಯೋಜನೆಯು ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು ಇದೀಗ ಅದು ಸಾಕಾರಗೊಂಡು ಈ ಪ್ರದೇಶದ ಜನರ ಸಾರಿಗೆ ಸಮಸ್ಯೆಯನ್ನು ದೂರಗೊಳಿಸಿದೆ.

Advertisement

ರಸ್ತೆಗಾಗಿ ಶ್ರಮದಾನ
ಸ್ಥಳೀಯ ಫಲಾನುಭವಿಗಳು ರಸ್ತೆ ನಿರ್ಮಾಣದ ಶ್ರಮದಾನ ನಡೆಸಿದ್ದು ಅಲ್ಲದೆ ನಿರ್ಮಾಣದ ವೆಚ್ಚ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟು ಧನಸಹಾಯದ ಮೂಲಕ ಭರಿಸಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಕಾಟುಕುಕ್ಕೆ ವಾರ್ಡ್‌ ಸದಸ್ಯೆ ಮಲ್ಲಿಕಾ ರೈ, ಮಮತಾ ರೈ ಹಾಗೂ ಊರಿನವರಾದ ಜಯರಾಮ ರೈ ದಂಬೆಕಾನ, ವಿಷ್ಣು ಭಟ್‌ ಬಾಳೆಮೂಲೆ ಅವರ ವಿಶೇಷ ಕಾಳಜಿಯಿಂದ ಈ ಯೋಜನೆಯು ಸಾಕಾರಗೊಳಿಸಲು ನಿರಂತರ ಶ್ರಮವಹಿಸಿ ನೀರಾವರಿ ಇಲಾಖೆಯಿಂದ ಅಣೆಕಟ್ಟು, ಮೇಲ್ಸೇತುವೆಗೆ ಅನುದಾನ ಲಭಿಸಲು ಹಾಗೂ ರಸ್ತೆಗೆ ಜಾಗ ಲಭಿಸಲು ಜಮೀನುದಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಣೆಕಟ್ಟು, ಮೇಲ್ಸೇತುವೆ ಅನುಮೋದನೆ ಹಂತದಲ್ಲಿ
ಇದೀಗ ಮಾರ್ಗ ಪೂರ್ತಿಗೊಳ್ಳಲು ತೊಡಕಾಗಿರುವ ಮುಂಗ್ಲಿಕಾನ ತೋಡಿಗೆ ಅಣೆಕಟ್ಟು ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಅನುಮೋದನೆಗೊಳ್ಳುವ ಅಂತಿಮ ಹಂತದಲ್ಲಿದೆ ಎಂದು ಎಣ್ಮಕಜೆ ಗ್ರಾಮ ಪಂಚಾಯತ್‌ ಸದಸ್ಯೆ ಮಲ್ಲಿಕಾ ರೈ ತಿಳಿಸಿದ್ದಾರೆ.

ರಸ್ತೆಗಾಗಿ ಫ‌ಲವತ್ತಾದ ಭೂಮಿ ದಾನ ಮಾಡಿದರು
ರಸ್ತೆಯು ಹಾದು ಹೋಗುವ ಸ್ಥಳದ ಮಾಲಕರಾದ ಐತ್ತಪ್ಪ ರೈ ಪಟ್ಟೆ, ಸದಾಶಿವ ರೈ ಬಾಳೆಮೂಲೆ, ಪ್ರಸಾದ ರೈ ಮುಂಗ್ಲಿಕ್ಕಾನ ಇವರು ರಸ್ತೆ ನಿರ್ಮಾಣಕ್ಕೆ ಬೇಕಾದ ಸ್ಥಳವನ್ನು ಉದಾರವಾಗಿ ನೀಡಿದ ಕಾರಣ ಯೋಜನೆ ಸಾಕಾರಗೊಂಡಿದೆ. ಇವರು ತಮ್ಮ ಕೃಷಿಭೂಮಿಯ ಫಲವತ್ತಾದ ಅಡಿಕೆ ಮರಗಳನ್ನು ಕಡಿದು ಮಾರ್ಗಸಾಗಲು ಸಹಕರಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

Advertisement

– ಬಾಲಕೃಷ್ಣ ಅಚ್ಚಾಯಿ

Advertisement

Udayavani is now on Telegram. Click here to join our channel and stay updated with the latest news.

Next