Advertisement

ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ: ಸಿಎಂ ಬೊಮ್ಮಾಯಿ

02:21 AM Jun 02, 2022 | Team Udayavani |

ಮಣಿಪಾಲ: ಸಮಗ್ರ ಅಭಿವೃದ್ಧಿಯೊಂದಿಗೆ ನವ ಕರ್ನಾಟಕದ ಮೂಲಕ ಭಾರತದ ನಿರ್ಮಾಣದೆಡೆಗೆ ಮುಂದಡಿ ಇಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ 8 ವರ್ಷ ಪೂರೈಸಿದ್ದು, ಈ ಅವಧಿಯ ಸಾಧನೆ, ಅಭಿವೃದ್ಧಿಗಳ ರಿಪೋರ್ಟ್‌ ಕಾರ್ಡ್‌ ನೀಡಿದೆ. ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಇನ್ನಷ್ಟು ಬಲಾಡ್ಯಗೊಳಿಸಿ ಅಗ್ರಮಾನ್ಯ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಕಲ್ಪ, ಕಾರ್ಯಕ್ರಮ ಹಾಗೂ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಶೀಘ್ರ ವೇತನ
ಉಡುಪಿ ಜಿಲ್ಲಾ ತಾಯಿ -ಮಕ್ಕಳ ಆಸ್ಪತ್ರೆಯನ್ನು ಬಿ.ಆರ್‌. ಶೆಟ್ಟಿ ವೆಂಚರ್ನಿಂದ ಸರಕಾರದ ಸ್ವಾಧೀನಕ್ಕೆ ಪಡೆಯಲಾಗಿದೆ. ಸ್ವಲ್ಪ ತಾಂತ್ರಿಕ ಗೊಂದಲದಿಂದ ಸಿಬಂದಿಗೆ ಸರಿಯಾಗಿ ವೇತನ ಆಗಿಲ್ಲ. ಕೂಡಲೇ ಸರಿಪಡಿಸಿ, ಐದು ತಿಂಗಳ ವೇತವನ್ನು ಬಿಡುಗಡೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸರಿಯಾದ ಕ್ರಮದಲ್ಲಿ ವೇತನ ನೀಡಲು ಬೇಕಾದ ವ್ಯವಸ್ಥೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಎಸಿಬಿ ಬಲವರ್ಧನೆ
ನಮ್ಮ ಸರಕಾರ ಬಂದ ಬಳಿಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವನ್ನು ಬಲಗೊಳಿಸಿದ್ದೇವೆ, ಅದಕ್ಕೊಂದು ಪ್ರತ್ಯೇಕ ವ್ಯವಸ್ಥೆಯೂ ಬಂದಿದೆ. ಲೋಕಾಯುಕ್ತ ಇದ್ದರೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಎಸಿಬಿಗೆ ಆಗುತ್ತಿರಲಿಲ್ಲ. ಈಗ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು, ದಾಳಿ ನಡೆಸಲು ಎಸಿಬಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲೂ ಪ್ರಕರಣ ಇರುವುದರಿಂದ ಅದಕ್ಕೂ ಕಾಯುತ್ತಿದ್ದೇವೆ ಎಂದರು.

ಕಾನೂನು ಪಾಲಿಸಿ
ಲವ್‌ ಜೆಹಾದ್‌ ಹೊಸತಲ್ಲ. ಮೊದಲಿನಿಂದಲೂ ಇದೆ. ಅದರ ನಿಯಂತ್ರಣಕ್ಕಾಗಿ ಕಾನೂನು ಮಾಡಿದ್ದೇವೆ. ಅದರ ಅಡಿಯಲ್ಲಿ ಎಲ್ಲವನ್ನು ಪರಿಗಣಿಸುತ್ತೇವೆ. ಯಾರು ಕೂಡ ಕಾನೂನು ಉಲ್ಲಂ ಸುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

ಮುಂದಿನ ದಿನಗಳಲ್ಲಿ ಕರ್ನಾಟಕದ ಕರಾವಳಿ ಸಹಿತ ದೇಶದ ಸಮುದ್ರ ಕಿನಾರೆಯಲ್ಲಿ ಉಪ್ಪು ನೀರಿನಲ್ಲಿರುವ ಐರನ್‌ ಅಂಶವನ್ನು ಬೇರ್ಪಡಿಸಿ, ಅಮೋನಿಯಂನಿಂದ ವಿದ್ಯುತ್‌ ಉತ್ಪಾದನೆಯೂ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಕೇಂದ್ರ ಸರಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next