Advertisement

20 ಕೋಟಿ ರೂ.ನಲ್ಲಿ ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣ

04:37 PM Jul 25, 2022 | Team Udayavani |

ಮುಳಬಾಗಿಲು: ನಗರದ ನೂಗಲಬಂಡೆ ಪ್ರದೇಶದಲ್ಲಿ 20 ಕೋಟಿ ರೂ.ನಲ್ಲಿ ತಾಯಿ ಹಾಗೂಮಕ್ಕಳ ಆಸ್ಪತ್ರೆ ನಿರ್ಮಿಸಲು ಈಗಾಗಲೇ ಸರ್ಕಾರಿಜಮೀನು ಗುರುತಿಸಲಾಗಿದೆ. ಕೆಲವೇ ದಿನಗಳಲ್ಲಿಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಎಚ್‌.ನಾಗೇಶ್‌ ತಿಳಿಸಿದರು.

Advertisement

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದಅವರು, ತಾಲೂಕಿನಲ್ಲಿ ಜನಸಂಖ್ಯೆ ಹೆಚ್ಚುತ್ತಿರುವಹಿನ್ನೆಲೆಯಲ್ಲಿ ನಗರದ ಹೊರವಲಯದ ನರಸಿಂಹ ತೀರ್ಥದಲ್ಲಿ 500 ಹಾಸಿಗೆಗಳ ಹೈಟೆಕ್‌ ಆಸ್ಪತ್ರೆಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ವಿವರಿಸಿದರು.

ಪೀಠೊಪಕರಣ ಖರೀದಿ: ಸರ್ಕಾರಿ ಆಸ್ಪತ್ರೆಯಲ್ಲಿ ದಂತ ತಜ್ಞರ ಕೊಠಡಿಗಳಿಗೆ ಬೇಕಾದ ಪೀಠೊಪಕರಣ ಖರೀದಿ ಮಾಡಲು 20 ಲಕ್ಷ ರೂ.ಬಿಡುಗಡೆಗೆ ಹಾಗೂ ಪಿಜಿಯೋಥೆರμ ಕೋಣೆಗೆಅಗತ್ಯ ಉಪಕರಣಗಳನ್ನು ಒದಗಿಸಲು ಅನುದಾನಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

1 ಲಕ್ಷ ರೂ. ಬಿಡುಗಡೆ: ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರು ನೀಡಲು, 2 ಸೋಲಾರ್‌ ವಾಟರ್‌ಹೀಟರ್‌, 24 ಗಂಟೆ ಬಿಸಿನೀರಿನ ವ್ಯವಸ್ಥೆ ತಲುಪಿಸಲು ಸೋಲಾರ್‌ ವಿದ್ಯುತ್‌ ದೀಪ ಅಳವಡಿಸಲು ಶಾಸಕರ ನಿಧಿಯಿಂದ 1 ಲಕ್ಷ ರೂ. ಬಿಡುಗಡೆ ಮಾಡಿಸಲಾಗುವುದು ಎಂದು ಹೇಳಿದರು.

ಪಾರ್ಕಿಂಗ್‌ ವ್ಯವಸ್ಥೆ: ಆಸ್ಪತ್ರೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸ್ಥಳಾವಕಾಶ, ಸುಗಮ ವಾಹನ ಸಂಚಾರಕ್ಕೆ ಅಡ್ಡವಾಗಿರುವ ಆಸ್ಪತ್ರೆಯ ಮುಂಭಾಗದ ಅಂಗಡಿಗಳನ್ನು ತೆರವುಗೊಳಿಸಿ,ಕಾಪೌಂಡ್‌, ಗೇಟ್‌ ನಿರ್ಮಿಸಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸಲಾಗುವುದೆಂದು ತಿಳಿಸಿದರು.

Advertisement

ಶುದ್ಧ ನೀರಿನ ವ್ಯವಸ್ಥೆ: ಆಸ್ಪತ್ರೆ ಆವರಣದಲ್ಲಿಸಾರ್ವಜನಿಕರಿಗೆ, ರೋಗಿಗಳಿಗೆ ಮಿನರಲ್‌ಯುಕ್ತಶುದ್ಧ ನೀರಿನ ಘಟಕವನ್ನು ಶಾಸಕರ ನಿಧಿಯಿಂದಸ್ಥಾಪನೆ ಮಾಡಲಾಗುವುದು. ಆಸ್ಪತ್ರೆಯಲ್ಲಿ ಕೊರತೆಇರುವ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿವಿಶೇಷ ಯೋಜನೆ ರೂಪಿಸಲು ಸಭೆಯಲ್ಲಿ ತೀರ್ಮಾನಿಸಿದರು.

ದಂಡ ಹಾಕಿ: ಆಸ್ಪತ್ರೆ ಆವರಣದಲ್ಲಿ ಕೆಲವರು ತಮ್ಮ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಬೆಂಗಳೂರುಸೇರಿ ಇತರೆ ಕಡೆ ಕೆಲಸ ಕಾರ್ಯಗಳಿಗೆಹೋಗುತ್ತಿರುವುದರಿಂದ ಆ್ಯಂಬುಲೆನ್ಸ್‌ ಸೇರಿರೋಗಿಗಳ ಸಂಬಂಧಿಕರ ವಾಹನಗಳ ಸಂಚಾರಕ್ಕೆಅಡ್ಡಿಯಾಗುತ್ತಿದೆ. ಈ ಬಗ್ಗೆ ಸದಸ್ಯರು ಸಭೆಯಲ್ಲಿತಿಳಿಸಿದಾಗ ಕೂಡಲೇ ಶಾಸಕರು ಇದಕ್ಕೆ ಸ್ಪಂದಿಸಿಅಕ್ರಮವಾಗಿ ವಾಹನ ನಿಲುಗಡೆ ಮಾಡಿದರೆ 5000ರೂ. ದಂಡ ಹಾಕಬೇಕು. ಮತ್ತೆ ಅದೇ ಕೆಲಸಮಾಡಿದ್ರೆ ವಾಹನ ವಶಪಡಿಸಿಕೊಳ್ಳಬೇಕೆಂದುಪಿಎಸ್‌ಐ ಮಂಜುನಾಥ್‌ಗೆ ಕಟ್ಟುನಿಟ್ಟಿನ ಆದೇಶ ಮಾಡಿದರು.

ನಗರಸಭೆ ಅಧ್ಯಕ್ಷ ರಿಯಾಜ್‌ ಅಹಮದ್‌, ಆಯುಕ್ತ ವಿ.ಶ್ರೀಧರ್‌, ಆಡಳಿತಾಧಿಕಾರಿಡಾ.ಸುರೇಂದ್ರಕುಮಾರ್‌, ಡಾ.ವೇಣುಗೋಪಾಲ್‌,ತಾಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ, ಬೆಸ್ಕಾಂ ಎಇಇ ವಿ.ಎಂ.ರಮೇಶ್‌, ರûಾ ಸಮಿತಿಸದಸ್ಯರಾದ ಕೀಲುಹೊಳಲಿ ಹರೀಶ್‌, ಇರ್ಷಾದ್‌, ಅನುಸೂಯಮ್ಮ, ರವಿಕುಮಾರ್‌, ಆರ್‌. ಮಂಜುನಾಥ್‌, ಸೈಯದ್‌ ರಫಿ, ರಾಮಕೃಷ್ಣೇಗೌಡ, ಸೋಮಶೇಖರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next