Advertisement
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ, ಕಡಬ ಕಂದಾಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಸುಮಾರು 40 ಮಕ್ಕಳು ಕಲಿಯುತ್ತಿರುವ ಮೂರಾಜೆ ಕೊಪ್ಪ ಶಾಲಾ ಕಟ್ಟಡದ ಗೋಡೆ ಹಾಗೂ ಛಾವಣಿಯಲ್ಲಿ ಬಿರುಕು ಕಂಡುಬಂದಿರುವ ಕಾರಣದಿಂದಾಗಿ ಅದನ್ನು ತೆರವುಗೊಳಿಸಲು ಸರಕಾರ ಆದೇಶಿಸಿದೆ. ಆದರೆ ಶಾಲಾ ಕಟ್ಟಡ ಇರುವ ಜಾಗ ಭಾಗಶಃ ಅರಣ್ಯ ಪ್ರದೇಶದಲ್ಲಿದೆ ಎನ್ನುವ ಕಾರಣದಿಂದಾಗಿ ಇದುವರೆಗೆ ಶಾಲೆಯ ಹೆಸರಿನಲ್ಲಿ ಪಹಣಿ ಪತ್ರ ಲಭಿಸಿರಲಿಲ್ಲ. ಅದರಿಂದಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಇರಿಸಲು ತಾಂತ್ರಿಕ ತೊಡಕು ಎದುರಾಗಿದೆ. ಈಗಿನ ಕಟ್ಟಡ ಶಿಥಿಲಗೊಂಡ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಪಕ್ಕದ ಭಜನ ಮಂದಿರದ ಜಗಲಿ ಹಾಗೂ ತಾತ್ಕಾಲಿಕ ಶೆಡ್‌ನಲ್ಲಿ ತರಗತಿ ನಡೆಸಲಾಗುತ್ತಿತ್ತು.ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮಂಗಳವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಕಡಬ ಕಂದಾಯ ಕಚೇರಿಗೆ ಭೇಟಿ ನೀಡಿ ಶಾಲೆಯ ಜಮೀ ನಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಿದರು. ಬಳಿಕ ಪತ್ರಿಕೆ ಯೊಂದಿಗೆ ಮಾತನಾಡಿ, ಈಗಾಗಲೇ ಶಾಲೆಯ ಜಮೀನಿನ ಸಮಸ್ಯೆ ಕುರಿತು ಕ್ಷೇತ್ರದ ಶಾಸಕರೊಂದಿಗೆ ಸಮಾ ಲೋಚನೆ ನಡೆಸಲಾಗಿದೆ. ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಸ್ಪಂದಿಸಿದ್ದಾರೆ. ಕಡಬದ ಕಂದಾಯ ಅಧಿಕಾರಿ ಗಳು ಹಾಗೂ ಅರಣ್ಯ ಇಲಾಖೆಯ ಸಿಬಂದಿ ಭೇಟಿ ನೀಡಿ ಜಮೀನಿನ ಅಳತೆ ನಡೆಸಿ 34 ಸೆಂಟ್ಸ್ ಜಾಗವನ್ನು ಶಾಲೆಗಾಗಿ ಗುರುತಿಸಿದ್ದಾರೆ. ಈ ಬಗ್ಗೆ ಅವರು ಸಹಾ ಯಕ ಆಯುಕ್ತರಿಗೆ ವರದಿ ಸಲ್ಲಿಸು ವುದಾಗಿ ತಿಳಿಸಿದ್ದು, ಶಾಲೆ ಪುನರಾರಂಭಗೊಳ್ಳುವ ಮೊದಲು ಜಮೀನಿನ ಸಮಸ್ಯೆ ಬಗೆಹರಿಯುವ ಭರವಸೆ ಹೊಂದಲಾಗಿದೆ ಎಂದರು.