Advertisement

“ರೆಮೋ’ಚಿತ್ರಕ್ಕೆ ಗಾಜಿನ ಕಚೇರಿ ಸೆಟ್‌ ನಿರ್ಮಾಣ

10:47 AM Sep 01, 2019 | Lakshmi GovindaRaj |

ನಿರ್ದೇಶಕ ಪವನ್‌ ಒಡೆಯರ್‌ “ನಟಸಾರ್ವಭೌಮ’ ಚಿತ್ರದ ನಂತರ ಸಿ.ಆರ್‌.ಮನೋಹರ್‌ ನಿರ್ಮಾಣದಲ್ಲಿ ಅವರ ಸಹೋದರ ಇಶಾನ್‌ ಅವರಿಗೆ “ರೆಮೋ’ ಚಿತ್ರವನ್ನು ನಿರ್ದೇಶಿಸುತ್ತಿರುವ ವಿಷಯ ಗೊತ್ತೇ ಇದೆ. ಈಗಾಗಲೇ ಸುಮಾರು 20 ದಿನಗಳ ಕಾಲ ಚಿತ್ರೀಕರಣ ಕೂಡ ನಡೆದಿದೆ. “ರೆಮೋ’ ಚಿತ್ರದ ಹೊಸ ಸುದ್ದಿಯೆಂದರೆ, ದೊಡ್ಡ ಬಜೆಟ್‌ನಲ್ಲಿ ಗಾಜಿನ ಸೆಟ್‌ವೊಂದನ್ನು ನಿರ್ಮಿಸಿ, ಚಿತ್ರೀಕರಿಸಲಾಗುತ್ತಿದೆ.

Advertisement

ಹೌದು, ಚಿತ್ರದ ಹೀರೋ ಪಾತ್ರವನ್ನು ವಿವರಿಸುವಂತಹ ಗಾಜಿನ ಕಚೇರಿಯ ಸೆಟ್‌ವೊಂದು ಚಿತ್ರದ ಪ್ರಮುಖ ಆಕರ್ಷಣೆ. ಹಾಗಾಗಿ, ವಿಜಯನಗರದ ಬಸ್‌ನಿಲ್ದಾಣದಲ್ಲಿ ಗಾಜಿನ ಸೆಟ್‌ ನಿರ್ಮಿಸಿ, ಶೂಟಿಂಗ್‌ ನಡೆಸಲಾಗುತ್ತಿದೆ. ಅದೊಂದು ಐಶಾರಾಮಿ ಗಾಜಿನ ಕಚೇರಿಯಾಗಿದ್ದು, ಕಲಾನಿರ್ದೇಶಕರಾದ ಗುಣ ಹಾಗು ಕರಣ್‌ ಅವರು ಸೆಟ್‌ ನಿರ್ಮಿಸಿದ್ದಾರೆ. ವಿಶೇಷವೆಂದರೆ, ಪಕ್ಕದಲ್ಲೇ ಮೆಟ್ರೋ ಇರುವುದರಿಂದ ಆ ಗಾಜಿನ ಕಚೇರಿಸೆಟ್‌ ಕೂಡ ಆಕರ್ಷಣೆ ಎನಿಸಿದೆ.

ಅಂದಹಾಗೆ, ನಾಯಕನ ವ್ಯಕ್ತಿತ್ವಕ್ಕೆ ತಕ್ಕಂತೆಯೇ ಗಾಜಿನ ಕಚೇರಿಯ ಸೆಟ್‌ ನಿರ್ಮಿಸಲಾಗಿದೆ ಎನ್ನುವ ನಿರ್ದೇಶಕ ಪವನ್‌ ಒಡೆಯರ್‌, “ನನ್ನ “ಗೂಗ್ಲಿ’ ನಂತರ ಮತ್ತೂಂದು ಬ್ಯೂಟಿಫ‌ುಲ್‌ ಲವ್‌ಸ್ಟೋರಿ ಸಿನಿಮಾ ಇದಾಗಿದೆ. ಇಷ್ಟರಲ್ಲೇ ಸಿಂಗಾಪುರ್‌ಗೆ ಚಿತ್ರತಂಡ ತೆರಳಲಿದೆ’ ಎನ್ನುತ್ತಾರೆ ಪವನ್‌. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದೆ. ಇಶಾನ್‌ಗೆ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.