ಮುಂಬಯಿ,: ಕೊರೊನಾದ ಮೂರನೇ ಅಲೆಯನ್ನು ನಿಭಾಯಿಸಲು ನಾಲ್ಕು ಹೊಸ ಜಂಬೋ ಆಸ್ಪತ್ರೆಗಳನ್ನು ನಿರ್ಮಿಸುವುದರೊಂದಿಗೆ ಇದನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಇರಿಸಿಕೊಳ್ಳಲಾಗುವುದು ಮತ್ತು ಈ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಕನಿಷ್ಠ 50 ಹಾಸಿಗೆಗಳನ್ನು ಮೀಸಲಿಡಲಾಗುವುದು ಎಂದು ಮುಂಬಯಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ತಿಳಿಸಿದ್ದಾರೆ.
ಮುಂಬಯಿಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಂಭಾವ್ಯ ಮೂರನೇ ಅಲೆಯನ್ನು ನಿಭಾಯಿಸಲು ಜಂಬೋ ಆಸ್ಪತ್ರೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಬಲಪಡಿಸುವ ಕೆಲಸವನ್ನು ಪುರಸಭೆ ಕೈಗೊಂಡಿದೆ. ಪ್ರಸ್ತುತ ಎಂಟು ಜಂಬೊ ಕೊರೊನಾ ಆಸ್ಪತ್ರೆಗಳಲ್ಲಿ 10,830 ಹಾಸಿಗೆಗಳಿವೆ. ಇದರಲ್ಲಿ ತೀವ್ರ ನಿಗಾ ಘಟಕದ 872 ಹಾಸಿಗೆ ಮತ್ತು ವೆಂಟಿಲೇಟರ್ ಸೌಲಭ್ಯವಿರುವ 574 ಹಾಸಿಗೆಗಳನ್ನು ಹೊಂದಿದೆ.
ಈ ಜಂಬೊ ಆಸ್ಪತ್ರೆಗಳನ್ನು ಸುಮಾರು ಆರು ತಿಂಗಳ ಅವಧಿಗೆ ಸ್ಥಾಪಿಸಲಾಯಿತು. ಇತ್ತೀಚೆಗಿನ ಚಂಡಮಾರುತಗಳ ಬಳಿಕ ಈ ಎಲ್ಲ ಎಂಟು ಜಂಬೊ ಕೊರೊನಾ ಆಸ್ಪತ್ರೆಗಳು ರಚನಾತ್ಮಕ ಲೆಕ್ಕಪರಿಶೋಧನೆ ಮತ್ತು ಅಗ್ನಿಶಾಮಕ ಲೆಕ್ಕಪರಿಶೋಧನೆಗೆ ಬಳಪಡಿಸಲಾಗುತ್ತಿದೆ. ಇವುಗಳಲ್ಲಿ ಬಿಕೆಸಿ, ನೆಸ್ಕೊ ಹಂತ ಒಂದು ಮತ್ತು ಎರಡು, ದಹಿಸಾರ್ ಎರಡು, ನೆಸ್ಕೊ, ಡೊಮ…, ಮುಲುಂಡ್ ಮತ್ತು ಸೆವೆನ್ ಹಿಲ್ಸ್ ಸೇರಿವೆ.ಮಕ್ಕಳಿಗೆ ಪ್ರತ್ಯೇಕ ವಿಭಾಗಮಲಾಡ್, ಕಾಂಜುರ್‌ಮಾರ್ಗ, ಸಯಾನ್ ಮಹಾಲಕ್ಷ್ಮೀಗಳಲ್ಲಿ ಹೊಸ ಜಂಬೋ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದ್ದು, ತೀವ್ರ ನಿಗಾ ಘಟಕಕ್ಕೆ ಶೇ. 70ರಷ್ಟು ಆಮ್ಲಜನಕ ಹಾಸಿಗೆಗಳನ್ನು ಕಾಯ್ದಿರಿಸಲಾಗುವುದು ಎಂದು ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ತಿಳಿಸಿದ್ದಾರೆ.
ಈ ಎಲ್ಲ ಸ್ಥಳಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗಗಳನ್ನು ಸ್ಥಾಪಿಸಲಾಗುವುದು. ಆರಂಭದಲ್ಲಿ 25ರಿಂದ 50 ಹಾಸಿಗೆಗಳನ್ನು ಇಲ್ಲಿ ಒದಗಿಸಲಾಗುವುದು. ಈ ಮಕ್ಕಳಿಗೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲಾಗುವುದು. ಅಗತ್ಯವಿದ್ದರೆ ಈ ಸ್ಥಳದಲ್ಲಿ 250 ಹಾಸಿಗೆಗಳನ್ನು ವ್ಯವಸ್ಥೆಗೊಳಿಸಬಹುದು ಎಂದು ಹೇಳಿದರು.
ಇಲಾಖಾವಾರು ಸಭೆ3ನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗುವ ಸಂಖ್ಯೆ ಹೆಚ್ಚಾಗುತ್ತದೆ ಎಂದು ತಜ್ಞರ ಹೇಳಿಕೆ ಯನ್ನು ಪರಿಗಣಿಸಿ, ನಾವು ಮುಂಬಯಿಯ 24ವಿಭಾಗಗಳಲ್ಲಿ ಮಕ್ಕಳ ವೈದ್ಯರು ಮತ್ತು ಇತರ ವೈದ್ಯರೊಂದಿಗೆ ಸಭೆ ಆರಂಭಿಸಿದ್ದೇವೆ. ಮಕ್ಕಳಿಗಾಗಿ ತಂಡವು ನೀಡಬೇಕಾದ ಸೂಚನೆಗಳು ಮತ್ತು ಚಿಕಿತ್ಸೆ ಯ ಬಗ್ಗೆ ಮುಂಬಯಿಯ ಎಲ್ಲ ಸಂಬಂಧಪಟ್ಟ ವೈದ್ಯರಿಗೆ ತಿಳಿಸಲಾಗುವುದು. ಮಕ್ಕಳ ತಜ್ಞರು ಮತ್ತು ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಇಲಾಖಾವಾರು ಸಭೆಗಳು ಪ್ರಾರಂಭವಾಗಿವೆ.