Advertisement

ಎಂಡೋ ಸಂತ್ರಸ್ತರ ಕೇಂದ್ರ ನಿರ್ವಹಣಾ ಮೇಲುಸ್ತುವಾರಿ ಸಮಿತಿ ರಚನೆ

05:50 AM Jul 21, 2017 | Harsha Rao |

ಕೊಕ್ಕಡ:  ಸರಕಾರದ ಅನುದಾನವನ್ನು ಎಂಡೋ ಸಂತ್ರಸ್ತರಿಗಾಗಿ ವಿಶೇಷ ರೀತಿಯ ಪ್ಯಾಕೇಜ್‌ನಲ್ಲಿ ವಿನಿಯೋಗಿಸಲಾಗುತ್ತಿದ್ದು ಇಲ್ಲಿನ ಪಾಲನಾ ಕೇಂದ್ರದಲ್ಲಿ ಈ ಹಿಂದಿಗಿಂತಲೂ ದಕ್ಷತೆಯಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ| ರಘುನಂದನ್‌ ನುಡಿದರು.

Advertisement

ಅವರು ರಾಜ್ಯ ಸರಕಾರದ ಅನುದಾನದಲ್ಲಿ ಮಂಗಳೂರಿನ ಸೇವಾಭಾರತಿ ಸಂಸ್ಥೆಯವರ ಮೂಲಕ ಕೊಕ್ಕಡದಲ್ಲಿ ನಡೆಸಲ್ಪಡುತ್ತಿರುವ ಎಂಡೋ ಪಾಲನ ಕೇಂದ್ರದಲ್ಲಿ ಕೇಂದ್ರದ ಸಂತ್ರಸ್ತರ ಪೋಷಕರ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರೋಗ್ಯ ಇಲಾಖೆಯಿಂದ ಇಲ್ಲಿನ ಸಂತ್ರಸ್ತರಿಗಾಗಿ ಕೆಲವೊಂದು ಅಗತ್ಯ ಚಿಕಿತ್ಸಾ ಕ್ರಮಗಳನ್ನು ಹೆಚ್ಚುವರಿಯಾಗಿ ಅಳವಡಿಸಿಕೊಂಡು ಆರೋಗ್ಯ ಕಾಳಜಿಯೊಂದಿಗೆ ಬೌದ್ಧಿಕ ಬೆಳವಣಿಗೆಗೂ ಪೂರಕವಾದ ವಿಶೇಷ ಕೌಶಲಾಭಿವೃದ್ಧಿಯನ್ನೂ ಕಾರ್ಯರೂಪಕ್ಕೆ ತರಲಾಗಿದೆ. ಇಲ್ಲಿನ ಪಾಲನಾ ಕೇಂದ್ರದ ಮೇಲುಸ್ತುವಾರಿಯನ್ನು ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ನಿರ್ವಹಣಾ ಸಮಿತಿಯನ್ನು ಇಂದು ರಚಿಸಲಾಗುತ್ತಿದ್ದು, ಸರಕಾರದ ನಿಯಮಾವಳಿ ಪ್ರಕಾರ ಆಯಾಯ ಇಲಾಖೆಗಳ ನೌಕರರನ್ನು ಇದರ ಸದಸ್ಯರನ್ನಾಗಿ ಮಾಡುವಂತೆ ಆದೇಶಿಸಲಾಗಿದೆ ಎಂದರು.

ನಿರ್ವಹಣಾ ಸಮಿತಿಗೆ ಸ್ಥಳೀಯ ಗ್ರಾ.ಪಂ. ಅಧ್ಯಕ್ಷರನ್ನೇ  ಅಧ್ಯಕ್ಷರನ್ನಾಗಿ ಸರಕಾರ ಸೂಚಿಸಿದ್ದು ಉಳಿದಂತೆ ಪೂರಕ ಇಲಾಖೆಗಳ ಅಧಿಕಾರಿಗಳು ಈ ಸಮಿತಿಯಲ್ಲಿ ಪದಾಧಿಕಾರಿಗಳಾಗಿರುತ್ತಾರೆ. ಅಲ್ಲದೇ ಪ್ರತೀ ಸಂತ್ರಸ್ತರ ಪೋಷಕರನ್ನೂ ಈ ಸಮಿತಿಗೆ ಆಯ್ಕೆ ಮಾಡಲಿದ್ದು, ಸರಕಾರದ ಅನುದಾನಗಳು ಇಲ್ಲಿ ಸಮರ್ಪಕವಾಗಿ ಸಂತ್ರಸ್ತರಿಗೆ ದೊರಕುವಂತಾಗಬೇಕು ಅನ್ನುವ ಕಲ್ಪನೆಯನ್ನಿಟ್ಟುಕೊಂಡು ಈ ಸಮಿತಿ ರಚಿಸುವಂತೆ ಸರಕಾರದಿಂದ ಆದೇಶವಾಗಿದೆ ಎಂದರು.

ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್‌ ಮಾತನಾಡಿ, ಪಾಲನಾ ಕೇಂದ್ರಗಳ ನಿರ್ವಹಣೆಗಾಗಿ ರಾಜ್ಯ ಸರಕಾರ ವಿಶೇಷ ಕಾಳಜಿ ನೀಡುತ್ತಿದ್ದು ಸರಕಾರದ ಅನುದಾನಗಳು ಸದ್ಭಳಕೆಯಾ ಗುವಲ್ಲಿ ಸಮಿತಿಯ ಎಲ್ಲಾ ಸದಸ್ಯರುಗಳೂ ಆಸ್ಥೆ ವಹಿಸಿಕೊಳ್ಳೋಣ ಎಂದರು.

Advertisement

ಕೊಕ್ಕಡದ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ಈ ಎಂಡೋ ಪಾಲನಾ ಕೇಂದ್ರದಿಂದ ಯಾವುದೇ ಸಮಸ್ಯೆಗಳೂ ಕೇಳಿ ಬರುತ್ತಿಲ್ಲ. ಇದು ಈ ಸಂಸ್ಥೆಯನ್ನು  ದಕ್ಷತೆಯಿಂದ ಮುನ್ನಡೆಸುತ್ತಿದ್ದಾರೆ ಅನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಪಾಲನಾ ಕೇಂದ್ರ ನಿರ್ವಹಣೆಯನ್ನು ನಡೆಸುತ್ತಿರುವ ಮಂಗಳೂರಿನ ಸೇವಾಭಾರತಿ ಸಂಸ್ಥೆಯ ನಿರ್ದೇಶಕಿ ಪ್ರಮೀಳಾ ರಾವ್‌ ಮಾತನಾಡಿ, ಎಂಡೋ ಪಾಲನಾ ಕೇಂದ್ರದ ನಿರ್ವಹಣೆ ಯಲ್ಲಿ ಸರಕಾರ ನಿರ್ದೇಶಿಸಿದಂತೆ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದರು. ದ.ಕ. ಜಿಲ್ಲಾ ಎಂಡೋ ಸಂತ್ರಸ್ತರ ವಿಶೇಷ  ನೋಡೆಲ್‌ ಅಧಿಕಾರಿ ಡಾ| ಅರುಣ್‌ ಕುಮಾರ್‌, ಸೇವಾಭಾರತಿ ನಿರ್ದೇಶಕ ವಿನೋದ್‌ ಶೆಣೈ, ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಪ್ರಕಾಶ್‌ ಉಪಸ್ಥಿತರಿದ್ದರು. 

ಡಾ| ಪ್ರಕಾಶ್‌ ಸ್ವಾಗತಿಸಿದರು. ನಿರ್ವಹಣಾ ಸಂಸ್ಥೆಯ ವತಿಯಿಂದ ವಿಶೇಷ ಚೇತನ ಮಕ್ಕಳಿಗೆ ಉಚಿತವಾಗಿ ನೀಡಲಾಗುವ ಬ್ಯಾಗುಗಳನ್ನು ಎ.ಸಿ. ಡಾ| ರಘುನಂದನ್‌ ಸಾಂಕೇತಿಕವಾಗಿ ವಿತರಿಸಿ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next