Advertisement

ಅಪಾಯಕಾರಿ ಹೊಂಡಕ್ಕೆ ತಡೆಗೋಡೆ ನಿರ್ಮಾಣ

11:25 PM Sep 13, 2019 | mahesh |

ಕನಕಮಜಲು: ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಕನಕಮಜಲು ಸಮೀಪ ಹೆದ್ದಾರಿ ಬದಿ ಅಪಾಯಕಾರಿ ಹೊಂಡಕ್ಕೆ ತಡೆಗೋಡೆ ನಿರ್ಮಿಸ ಲಾಗಿದೆ. ಸಿಮೆಂಟ್‌ ಕಲ್ಲುಗಳನ್ನು ಹಾಕಿ ರಸ್ತೆ ಬದಿ ಹೊಂಡಕ್ಕೆ ಅಡ್ಡಲಾಗಿ ತಡೆಗೋಡೆ ಕಟ್ಟಲಾಗಿದೆ.

Advertisement

ಕನಕಮಜಲು ಪೇಟೆಯಿಂದ ಕೃಷಿ ಪತ್ತಿನ ಸಹಕಾರ ಸಂಘದ ರಸ್ತೆ ಮಧ್ಯೆ 100 ಮೀಟರ್‌ ಅಂತರದಲ್ಲಿ ಅಡಿಕೆ ತೋಟಕ್ಕೆ ಹೊಂದಿಕೊಂಡಂತೆ ಭಾರೀ ಹೊಂಡವೊಂದು ಇದೆ. ಗುಂಡಿ ಬಿಟ್ಟು ಎರಡೂ ಕಡೆ ತಡೆಬೇಲಿ ಹಾಕಲಾಗಿತ್ತು. ಗುಂಡಿ ಮಾತ್ರ ಹೆದ್ದಾರಿಗೆ ತೆರೆದುಕೊಂಡಿದ್ದರಿಂದ ವಾಹನ ಸಂಚಾರಕ್ಕೆ ಸಂಚಕಾರವಾಗಿತ್ತು.

ಗುಂಡಿ ಪೊದೆಯಿಂದ ಮುಚ್ಚಿದ್ದು ಹೊಂಡವಿರುವ ಭಾಗ ಚಾಲಕರಿಗೆ ಸರಿಯಾಗಿ ಕಾಣುವುದಿಲ್ಲ ಎನ್ನುವ ಆತಂಕ ಸ್ಥಳೀಯರಲ್ಲಿ ಮನೆ ಮಾಡಿತ್ತು.

ಈ ಕುರಿತು ಸೆ. 9ರಂದು “ಉದಯವಾಣಿ’ ಸುದಿನದಲ್ಲಿ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ತ್ವರಿತಗತಿಯಲ್ಲಿ ಸ್ಪಂದಿಸಿದ ಅಧಿ ಕಾರಿಗಳು ಕೇವಲ ನಾಲ್ಕು ದಿನಗಳಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಿ ದ್ದಾರೆ. ಈ ಕಾರ್ಯ ಸ್ಥಳೀಯರ ಶ್ಲಾಘನೆಗೆ ಪಾತ್ರ ವಾಗಿದೆ. ತಡೆಗೋಡೆಗೆ ಸುಣ್ಣ ಅಥವಾ ಬಿಳಿ ಬಣ್ಣ ಬಳಿದರೆ ಚಾಲಕರಿಗೆ ದೂರದಿಂದಲೇ ಅರಿವಾಗ ಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next