Advertisement
ದೊಡ್ಡಬಳ್ಳಾಪುರ: ಬಯಲು ಸೀಮೆಗೆ ನೀರುಣಿಸುವ ರಾಜ್ಯ ಸರ್ಕಾರದ ಎತ್ತಿನಹೊಳೆ ಯೋಜನೆ ಕಾಮಗಾರಿ ಗಳು ಭರದಿಂದ ಸಾಗಿವೆ. ಯೋಜನೆಯ ಪ್ರಮುಖ ಅಂಗವಾದ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಒಳಪಡುವ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಆಯ್ದ ಗ್ರಾಮಗಳಲ್ಲಿ ಸರ್ವೆ ಕಾರ್ಯ ಮತ್ತು ಜಿಯೋಟೆಕ್ನಿಕಲ್ ತನಿಖೆ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿರುವುದು ಯೋಜನೆಗೆ ಮರು ಜೀವ ಬಂದಂತಾಗಿದೆ.
Related Articles
Advertisement
ವಿವಿಧೆಡೆ ಭೂ ಸ್ವಾಧೀನ: ದೊಡ್ಡಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಬೈರಗೊಂಡ್ಲು ಜಲಾಶಯ ನಿರ್ಮಾಣದ ವ್ಯಾಪ್ತಿಗೆ ಟಿ.ಜಿ.ಹಳ್ಳಿ- ರಾಮನಗರ – ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಫೀಡರ್‌ಕಾಲುವೆ ಯೋಜನೆಬರಲಿದ್ದು, ಇದರಲ್ಲಿ ನೆಲಮಂಗಲ ತಾಲೂಕಿನ 33 ಗ್ರಾಮಗಳು, ರಾಮನಗರದ ಮಾಗಡಿ ತಾಲೂಕಿನ2ಗ್ರಾಮಗಳು ಸೇರಿ 35 ಗ್ರಾಮಗಳ 83 ಎಕರೆ ಭೂ ಸ್ವಾಧೀನ ನಡೆಯಲಿದೆ. ಗೌರಿಬಿದನೂರು ದೊಡ್ಡಬಳ್ಳಾಪುರ ಗ್ರಾವಿಟಿ ಫೀಡರ್ ಕಾಲುವೆ ಯೋಜನೆಗೆ ದೊಡ್ಡಬಳ್ಳಾ ಪುರ ತಾಲೂಕಿನ 17 ಗ್ರಾಮಗಳ 53 ಎಕರೆ, ಗೌರಿಬಿದನೂರು ತಾಲೂಕಿನ35 ಗ್ರಾಮಗಳ92 ಎಕರೆ ಸೇರಿ 145 ಎಕರೆ ಭೂಸ್ವಾಧೀನ ನಡೆಯಲಿದೆ. ಇದರಿಂದ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನ ಹೊಳೆ ನೀರು ಹರಿಸಲು ಅನುಕೂಲವಾಗಲಿದೆ.
ಸರ್ವೆ ಕಾರ್ಯಕ್ಕೆ ಸಹಕಾರ ನೀಡಿ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಿಂದ ಬೆಂಗಳೂರು ಗ್ರಾಮಾಂತರ, ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸಲು ಉದ್ದೇಶಿಸಿ ರುವ ಬೈರಗೊಂಡಲು ಜಲಾಶಯದ ನಿರ್ಮಾಣಕ್ಕಾಗಿ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿ, ಗರಡುಗಲ್ಲು, ಮಚ್ಚೇನಹಳ್ಳಿ, ಶೀರಾಮನ ಹಳ್ಳಿ, ಶಿಂಗೇನಹಳ್ಳಿ, ಗಾಣದಾಳು, ಕಣಕೇನಹಳ್ಳಿ, ನರಸಾಪುರ, ಆಲಪ್ಪನಹಳ್ಳಿ, ಬೈಯಪ್ಪನಹಳ್ಳಿ ಮತ್ತು ಅಂಕೋನಹಳ್ಳಿ ಗ್ರಾಮಗಳಲ್ಲಿ ಜಲಾಶಯ ಮುಳುಗಡೆಯ ಸಾಧಕ ಬಾಧಕಗಳ ಸರ್ವೆ ಕಾರ್ಯ ಮಾಡಲು ಸರ್ಕಾರದಿಂದ ನಿರ್ದೇಶನವಿದೆ.
ದೊಡ್ಡಬಳ್ಳಾಪುರ ಜಲಾಶಯದ ಸರ್ವೆ ಕಾರ್ಯ ಮಾಡಿದ್ದಲ್ಲಿ ಮಾತ್ರ ಜಲಾಶಯದ ಮುಳುಗಡೆ ಪ್ರದೇಶದ ನಿಖರವಾಗಿ ಭೂ ಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ,ಭೂ ಪರಿಹಾರ ಮೊತ್ತ, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಅಂದಾಜು ಲೆಕ್ಕಚಾರ ಮಾಡ ಲಾಗುವುದು. ಜಲಾಶಯದ ಸಾಧಕ ಬಾಧಕಗಳ ಸರ್ವೆ ಕಾರ್ಯದಿಂದ ಭೂಮಿಗಾಗಲಿ ಅಥವಾ ವೈಯಕ್ತಿಕ ದಿನ ನಿತ್ಯಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ತನಿಖೆ ಮಾಡಲು ಸ್ಥಳೀಯ ಜನರು ಅಡ್ಡಿಪಡಿಸದೆ ಸಹಕಾರ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮನವಿ ಮಾಡಿದ್ದಾರೆ.