Advertisement

ಅರುಣಾಚಲ ಗಡಿ ಹೆದ್ದಾರಿ ನಿರ್ಮಾಣ ಶುರು-ಕಾಮಗಾರಿ ಪೂರ್ತಿ ಬಳಿಕ ಸೇನೆಯ ಸಂಚಾರ ಮತ್ತಷ್ಟು ಸುಗಮ

12:36 AM Jan 07, 2024 | Team Udayavani |

ಹೊಸದಿಲ್ಲಿ: ಚೀನದ ಗಡಿಭಾಗದಲ್ಲಿರುವ ಅರುಣಾಚಲಪ್ರದೇಶವನ್ನು ಸುರಕ್ಷಿತಗೊಳಿ­ಸಲು ಭಾರತ ಬಲವಾದ ಹೆಜ್ಜೆಯಿಟ್ಟಿದೆ. ಅರುಣಾಚಲ ಗಡಿ ಹೆದ್ದಾರಿ (ಅರುಣಾಚಲ ಫ್ರಾಂಟಿಯರ್‌ ಹೈವೇ) ನಿರ್ಮಾಣ ಕಾಮಗಾರಿಗೆ ಕೇಂದ್ರ ಚಾಲನೆ ನೀಡಿದೆ. ಎರಡೂ ದೇಶಗಳ ನಡುವೆಯಿರುವ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ನೈಜ ಗಡಿನಿಯಂತ್ರಣ ರೇಖೆ)ಗೆ ಬಹಳ ಸನಿಹದಲ್ಲಿ ಅದನ್ನು ನಿರ್ಮಿಸಲಾಗುತ್ತದೆ. 2022, ಡಿ.9ರ ರಾತ್ರಿ ಭಾರತ-ಚೀನ ಯೋಧರ ನಡುವೆ ಭಾರೀ ಚಕಮಕಿಗೆ ಕಾರಣವಾಗಿದ್ದ ಯಾಂಗ್‌ತ್ಸೆ ಪ್ರದೇಶಕ್ಕೆ ಸನಿಹದಲ್ಲೇ ಈ ರಸ್ತೆ ಹಾದುಹೋಗುತ್ತದೆ. ಈ ಭಾಗದಲ್ಲಿ ಏನೇ ಮಾಡಲು ಹೊರಟರೂ ಖ್ಯಾತೆ ತೆಗೆಯುವ ಚೀನಕ್ಕೆ, ಭಾರತ ಬಲವಾದ ಉತ್ತರ ನೀಡಿದೆ.

Advertisement

ನೈಜ ಗಡಿನಿಯಂತ್ರಣ ರೇಖೆಯ ಭಾರತೀಯ ಭಾಗದಿಂದ ಕೇವಲ 20 ಕಿ.ಮೀ. ದೂರದಲ್ಲಿ ಈ ಹೆದ್ದಾರಿ ನಿರ್ಮಾಣ ವಾಗುತ್ತಿದೆ. ಇದರ ಒಟ್ಟು ದೂರ 1,859 ಕಿ.ಮೀ., ವೆಚ್ಚ 40,000 ಕೋಟಿ ರೂ. ಬಿಆರ್‌ಒ ಮತ್ತು ಕೇಂದ್ರ ಹೆದ್ದಾರಿ ಸಚಿವಾಲಯಗಳು ಒಗ್ಗೂಡಿ ರಸ್ತೆ ನಿರ್ಮಾಣಕ್ಕಿಳಿದಿವೆ.

ಮಹತ್ವವೇನು?: ಅರುಣಾಚಲವನ್ನು ಆಕ್ರಮಿಸುವ ಚೀನ ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಇದಕ್ಕಾಗಿ 2022, ಡಿ.9ರಂದು ತವಾಂಗ್‌ನಲ್ಲಿರುವ ಯಾಂಗ್‌ತ್ಸೆ ಪ್ರದೇಶದಲ್ಲಿ ಭಾರತ-ಚೀನ ಯೋಧರ ನಡುವೆ ಸಂಘರ್ಷ ಸಂಭವಿಸಿತ್ತು. ಈ ಯಾಂಗ್‌ತ್ಸೆ ಸಮೀಪವೇ ಹೆದ್ದಾರಿ ಹಾದು ಹೋಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next