Advertisement

ನೀರಿಂಗಿಸುವಿಕೆಗೆ ಬೃಹತ್‌ ಹೊಂಡ ನಿರ್ಮಾಣ

01:45 AM Jun 10, 2019 | sudhir |

ಸವಣೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ ಸರ್ವೆ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿ ಕಾರ್ಯಕ್ರಮಗಳ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Advertisement

ತೀವ್ರವಾಗಿ ಕುಸಿಯುತ್ತಿರುವ ಅಂತರ್ಜಲದಿಂದಾಗಿ ಕುಡಿಯುವ ನೀರು ಹಾಗೂ ಕೃಷಿಗಾಗಿ ಬಳಸಲಾಗುತ್ತಿರುವ ಕೊಳವೆ ಬಾವಿಗಳು, ಕೆರೆಗಳು ಬತ್ತುತ್ತಿರುವ ಅಪಾಯಕಾರಿ ಬೆಳವಣಿಗೆ ಮನಗಂಡು ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಸದಸ್ಯರು, ಜಲತಜ್ಞರು ಹಾಗೂ ಉಪನ್ಯಾಸಕ ಶ್ರೀಶ ಕುಮಾರ್‌ ಅವರ ಮಾರ್ಗದರ್ಶನ ಪಡೆದು ಸರ್ವೆ ಗ್ರಾಮದಲ್ಲಿ ಅಂತರ್ಜಲ ವೃದ್ಧಿಗೆ ಜನಜಾಗೃತಿ ಹಾಗೂ ವಿವಿಧ ಯೋಜನೆಗಳನ್ನು ರೂಪಿಸಲಾಗಿದ್ದು, ಅವುಗಳ ಅನುಷ್ಠಾನಕ್ಕೆ ಮುಂದಾಗಿದ್ದಾರೆ.

ಅಧ್ಯಕ್ಷರ ಮನೆಯಿಂದ ಚಾಲನೆ

ಯುವಕ ಮಂಡಲದ ಅಧ್ಯಕ್ಷ ಕಮಲೇಶ್‌ ಸರ್ವೆದೋಳಗುತ್ತು ಅವರ ಮನೆಯಲ್ಲಿ ಮಳೆ ನೀರಿಂಗಿಸಲು ಬೃಹತ್‌ ಹೊಂಡ ನಿರ್ಮಿಸುವ ಮೂಲಕ ಯುವಕ ಮಂಡಲದ ಅಂತರ್ಜಲ ವೃದ್ಧಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸುತ್ತಮುತ್ತಲಿನ ಗುಡ್ಡಗಳ ಹಾಗೂ ತಮ್ಮ ಜಮೀನಿನಲ್ಲಿ ಸುರಿದ ನೀರನ್ನು ವ್ಯರ್ಥವಾಗಿ ಹರಿದು ಹೋಗದಂತೆ ತಡೆದು ಭೂಮಿಗೆ ಇಂಗಿಸಿ ಅಂತರ್ಜಲವೃದ್ಧಿಗೆ ಪ್ರಯತ್ನಿಸುವ ಉದ್ದೇಶದಿಂದ ಯುವಕ ಮಂಡಲದ ಅಭಿಯಾನದ ಭಾಗವಾಗಿ ಮೊದಲ ಯೋಜನೆಯನ್ನು ನಮ್ಮ ಜಮೀನಿನಲ್ಲಿ ಅನುಷ್ಠಾನ ಮಾಡಿದ್ದೇವೆ ಎಂದು ಯುವಕ ಮಂಡಲದ ಅಧ್ಯಕ್ಷ ಕಮಲೇಶ್‌ ಹೇಳಿದರು.

ಜನರು ಮನಸ್ಸು ಮಾಡುತ್ತಿಲ್ಲ

Advertisement

ವಿಪರೀತ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಜನರು ಇಂದಿಗೂ ಮಳೆ ನೀರಿಂಗಿಸುವಿಕೆಗೆ ಮನಸ್ಸು ಮಾಡುತ್ತಿಲ್ಲ. ನೀರಿಂಗಿಸುವಿಕೆ ಮಹತ್ವದ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಯುವಕ ಮಂಡಲದ ವತಿಯಿಂದ ಆಯೋಜಿಸಲಿದ್ದೇವೆ ಎಂದು ಕಾರ್ಯಕ್ರಮ ಸಂಯೋಜಕ, ಯುವಕ ಮಂಡಲದ ಕೋಶಾಧಿಕಾರಿ ನಾಗೇಶ್‌ ಪಟ್ಟೆಮಜಲು ತಿಳಿಸಿದರು.

ಉದ್ದೇಶ ಹೊಂದಿದ್ದೇವೆ

ಅಭಿಯಾನದ ಅಂಗವಾಗಿ ಯುವಕ ಮಂಡಲದ ಸದಸ್ಯರ ಹಾಗೂ ಆಸಕ್ತ ಗ್ರಾಮಸ್ಥರ ಜಮೀನುಗಳಲ್ಲಿ ಅಂತರ್ಜಲ ವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಉದ್ದೇಶವನ್ನು ಯುವಕ ಮಂಡಲ ಹೊಂದಿದೆ.

ಯುವಕ ಮಂಡಲದ ಗೌರವಾಧ್ಯಕ್ಷ, ಮುಂಡೂರು ಗ್ರಾ.ಪಂ. ಅಧ್ಯಕ್ಷ ವಸಂತ ಎಸ್‌.ಡಿ., ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು, ಎಸ್‌ಜಿಎಂ ಪ್ರೌಢಶಾಲೆಯ ಮುಖ್ಯ ಗುರು ಶ್ರೀನಿವಾಸ್‌ ಎಚ್.ಬಿ., ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಜೇಶ್‌ ಎಸ್‌.ಡಿ., ಪದಾಧಿಕಾರಿಗಳಾದ ನಾಗೇಶ್‌ ಪಟ್ಟೆಮಜಲು, ಹರೀಶ್‌ ಆಲೇಕಿ, ಅಶೋಕ್‌ ಎಸ್‌.ಡಿ., ಸದಸ್ಯರಾದ ವಸಂತ ಪೂಜಾರಿ ಕೈಪಂಗಳದೋಳ, ಲೋಕೇಶ್‌ ಗೌಡ ಎಂ., ಕೃಷ್ಣಪ್ಪ ಪಟ್ಟೆಮಜಲು, ಶರತ್‌ ಸರ್ವೆದೋಳಗುತ್ತು, ಸ್ಥಳೀಯರಾದ ಪೂವಪ್ಪ, ಸುರೇಶ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next