Advertisement
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಕಡೆಗಳಲ್ಲಿ ಕಳೆದ ಮೂರ್‍ನಾಲ್ಕು ವರ್ಷದಿಂದಲೇ ಜೆಸಿಬಿ ಯಂತ್ರದ ಮೂಲಕ ಬೆಂಕಿರೇಖೆ ಅಳವಡಿಸಿ, ಬೆಂಕಿಯನ್ನು ನಂದಿಸುವುದಕ್ಕೆ ಅನುಕೂಲಕರ ವಾತಾವರಣಸೃಷ್ಟಿಸಲಾಗಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿನ ಅರಣ್ಯಪ್ರದೇಶದಲ್ಲಿ ಬೆಂಕಿರೇಖೆ ನಿರ್ಮಾಣ ಮಾಡಲಾಗಿದೆ. ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಪ್ರಾರಂಭವಾಗುವ ಸಂದರ್ಭದಲ್ಲಿ 540 ಎಕರೆವಿಮಾನ ಜಾಗವನ್ನು ನಿಲ್ದಾಣಕ್ಕಾಗಿ ವಶಕ್ಕೆಪಡೆದುಕೊಳ್ಳಲಾಗಿತ್ತು. ಅದಕ್ಕೆ ಬದಲಿ ಜಾಗವನ್ನುದೊಡ್ಡಬಳ್ಳಾಪುರದಲ್ಲಿ 540 ಎಕರೆ ಸರ್ಕಾರ ಕಾಡು ಬೆಳೆಸಲು ಜಾಗ ನೀಡಿದೆ. ಜಿಲ್ಲೆಯ ಎಲ್ಲೆಡೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಬಾರದೆಂಬ ಉದ್ದೇಶ ಹೊಂದಿದ್ದು, ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ.
Related Articles
Advertisement
ಕಟ್ಟುನಿಟ್ಟಿನ ಕ್ರಮವಹಿಸಿ :
ಕಾಡ್ಗಿಚ್ಚನ್ನು ನಂದಿಸಲು ಅರಣ್ಯ ಇಲಾಖೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಲಾಖೆಗೆ ಬಹಳ ಸಮಯಬೇಕಾಗುವುದರಿಂದ ಅರಣ್ಯ ಇಲಾಖೆಯು ಜಿಲ್ಲೆಯಲ್ಲಿನ ಪ್ರಗತಿಪರಸಂಘ, ಸಂಸ್ಥೆಗಳೊಂದಿಗೆ ಚರ್ಚಿಸಿ ಮುಂಗಾರಿನ ನಂತರ ಹೊಸ ಗಿಡನೆಡಲು ಆಹ್ವಾನಿಸಬೇಕು. ಅಗತ್ಯವಿರುವ ನೀರು, ಗೊಬ್ಬರಕಾಲಕಾಲಕ್ಕೆ ಒದಗಿಸಬೇಕು. ಪರಿಸರ ಕಾಳಾಜಿ ಇರುವರನ್ನು ಗುರುತಿಸಿ ಗುರುತಿನ ಚೀಟಿ ನೀಡುವ ವ್ಯವಸ್ಥೆ ಮಾಡಬೇಕು. ಕಳೆದಹಲವು ವರ್ಷಗಳಿಂದಲೂ ಅರಣ್ಯ ಇಲಾಖೆ ಸಿಬ್ಬಂದಿಗಳೇಅನಧಿಕೃತವಾಗಿ ಹಣ ಪಡೆದು ಮೋಜು-ಮಸ್ತಿಗೆ ಮತ್ತು ವನ್ಯಮೃಗಗಳ ಬೇಟೆಗೆ ಅವಕಾಶ ನೀಡುವುದು ಕಂಡುಬಂದಿದೆ.ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಪರಿಸರ ಪ್ರೇಮಿ ಮಂಜುನಾಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಅರಣ್ಯ ಪ್ರದೇಶಗಳು
ತಾಲೂಕು ಅರಣ್ಯ ಪ್ರದೇಶ
(ಹೆಕ್ಟೇರ್‌ಗಳಲ್ಲಿ )
ದೇವನಹಳ್ಳಿ / 2939.649
ದೊಡ್ಡಬಳ್ಳಾಪುರ / 8774.878
ನೆಲಮಂಗಲ / 4309.559
ಹೊಸಕೋಟೆ / 3600.367
ಜಿಲ್ಲೆಯಲ್ಲಿ ಒಟ್ಟು ಅರಣ್ಯ ಪ್ರದೇಶದ
ವಿಸ್ತೀರ್ಣ 19624.453 ಹೆಕ್ಟೇರ್ ಇದೆ.
ಅರಣ್ಯ ಇಲಾಖೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕಾಡಿಗೆ ಬೆಂಕಿತಗುಲದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ವಿದೇಶಗಳಲ್ಲಿ ಬೆಂಕಿ ನಂದಿಸಲುಹೆಲಿಕಾಪ್ಟರ್ ಬಳಸುತ್ತಾರೆ. ಹೊಸ ಮಾದರಿಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಬೆಂಕಿಯಿಂದ ಪರಿಸರ ನಾಶವಾದರೆ ವಾತಾವರಣ ಸೃಷ್ಟಿಸಲು ಸಾಧ್ಯವಿಲ್ಲ.–ಚಿಕ್ಕೇಗೌಡ. ಸಾಮಾಜಿಕ ಕಾರ್ಯಕರ್ತ, ಕೊಯಿರಾ
ಜಿಲ್ಲೆಯಲ್ಲಿ ಕಾಡ್ಗಿಚ್ಚು ತಡೆಗೆ ಬೆಂಕಿರೇಖೆ ನಿರ್ಮಾಣ ಮಾಡಲಾಗುತ್ತಿದೆ.ಬೆಂಕಿ ಆರಿಸಲು ಸಿಬ್ಬಂದಿ ನೇಮಿಸಲಾಗಿದೆ.ಜನರಿಗೆ ಬೆಂಕಿ ಅನಾಹುತ ಬಗ್ಗೆ ಅರಿವುಮೂಡಿಸುವ ಕಾರ್ಯ ಮಾಡಲಾಗುತ್ತಿದೆ. –ಸುಮಿತ್, ಉಪ ಅರಣ್ಯ ಸಂರಕ್ಷಣಾಧಿಕಾರಿ
–ಎಸ್.ಮಹೇಶ್