ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿ ಗ್ರಾಮದಲ್ಲಿ ಸುಮಾರು 8 ಕೋಟಿ ರೂ. ಅನುದಾನದಲ್ಲಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣಕ್ಕೆ ಶಾಸಕ ಎನ್.ಮಹೇಶ್ ಶುಕ್ರವಾರ ಭೂಮಿಪೂಜೆ ಸಲ್ಲಿಸಿದರು.
ನಂತರ ಮಾತನಾಡಿ, ಸರ್ಕಾರ 2018ರಂದು ನೂತನ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣಕ್ಕೆ 8 ಕೋಟಿ ರೂ. ಮಂಜೂರು ಮಾಡಿತ್ತು. ಮೊದಲನೇ ಯ ಕಂತಿನಲ್ಲಿ 6 ಕೋಟಿ ರೂ. ಬಿಡುಗಡೆ ಆಗಿದೆ. ಉಳಿದ 2 ಕೋಟಿ ರೂ. ಅನುದಾನವನ್ನು ಶೀಘ್ರದಲ್ಲೇ ಮಂಜೂರು ಮಾಡಿಸಲಾಗುವುದು ಎಂದರು.
ಉಪ ವಿಭಾಗ ಕೇಂದ್ರದಲ್ಲಿ ಪಾಲಿಟೆಕ್ನಿಕ್ ಕಾಲೇಜು ಇಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಮತ್ತು ಮೈಸೂರು ಸೇರಿದಂತೆ ವಿವಿಧ ಜಿಲ್ಲೆ ಗಳಿಗೆ ತೆರಳಬೇಕಾಗಿತ್ತು. ಈಗ ಸರ್ಕಾರ ತಾಲೂ ಕು ಕೇಂದ್ರದಲ್ಲಿ ಕಾಲೇಜು ತೆರೆಯಲು ತೀಮಾ ರ್ನಿಸಿದ್ದು, ಸರ್ಕಾರ ಮಂಜೂರಾತಿ ಮಾಡಿದ್ದು, ವಿದ್ಯಾಥಿ ರ್ಗಳು ಬಳಕೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.
ಹಾಸ್ಟೆಲ್ಗೆ ಅನುದಾನ ಮಂಜೂರು: ಸರ್ಕಾರ ಕೇವಲ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿದೆ. ವಿವಿಧೆಡೆಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ಬೇಕಾಗುವ ಅನುದಾನ ಸರ್ಕಾರದ ವತಿ ಯಿಂದ ಮಂಜೂರು ಮಾಡಿಸುವುದಾಗಿ ಹೇಳಿದರು.
ತಹಶೀಲ್ದಾರ್‌ಗೆ ಸೂಚನೆ: ಕಾಲೇಜಿಗೆ ನೇರವಾಗಿ ಬರಲು ರಸ್ತೆಯ ಕೊರತೆ ಇದ್ದು, ಕೂಡಲೇ ಚಿಲಕವಾಡಿ ಬೆಟ್ಟದ ಸಮೀಪ ರಸ್ತೆಗೆ ಬೇಕಾದಷ್ಟು ಜಮೀನು ಮಂಜೂರು ಮಾಡುವಂತೆ ತಹಶೀ ಲ್ದಾರ್‌ಗೆ ಸೂಚನೆ ನೀಡಲಾಗುವುದು ಎಂದರು.
ಕಾಲೇಜು ಕಟ್ಟಡ ಕಾಮಗಾರಿಯನ್ನು ಮೈಸೂರಿನ ಆರ್ಯನ್, ಅಶ್ವಿನ್‌ಪಾಳ್ಯ ಗುತ್ತಿಗೆ ಪಡೆದುಕೊಂಡಿದ್ದು, ಸರ್ಕಾರ ಸೂಚಿಸಿರುವಂತೆ ಒಂದೂವರೆ ವರ್ಷದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಮಹೇಶ್, ಜಿಪಂ ಸದಸ್ಯ ನಾಗರಾಜು, ಕುಂತೂರು ಗ್ರಾಪಂ ಸದಸ್ಯರಾದ ಪ್ರಮೋದ್, ದಿನೇಶ್, ಮುಖಂಡರಾದ ಜಗದೀಶ್, ಪ್ರಸಾದ್, ಮತ್ತು ಬೋಧಕ- ಬೋಧಕೇತರ ವರ್ಗ ಇದ್ದರು.