Advertisement

ಪುರಸಭೆ ಸ್ಥಳ ನೀಡಿದರೆ 2 ಸಾವಿರ ಮನೆ ನಿರ್ಮಾಣ

04:27 PM Sep 06, 2022 | Team Udayavani |

ಸೇಡಂ: ಪುರಸಭೆ 15 ರಿಂದ 20 ಎಕ್ಕರೆ ಸ್ಥಳ ನಿಡಿದರೆ 2 ಸಾವಿರ ಮನೆಗಳ ನಿರ್ಮಾಣಕ್ಕೆ ಬೇಕಾಗುವ ಅನುದಾನ ತರಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.

Advertisement

ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಅಂಬೇಡ್ಕರ್‌ ವಸತಿ ಯೋಜನೆಗಳ 75 ಜನ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು, ಹಳೆಯ ಕಟ್ಟಡ ಅಥವಾ ಖಾಲಿ ನಿವೇಶನ ಹೊಂದಿದ್ದರೆ ಅವರಿಗೆ ಮನೆ ಕಟ್ಟಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 3.5 ಲಕ್ಷ ಹಣವನ್ನು ನೀಡಲಾಗುತ್ತಿದೆ . ನಾನು ಶಾಸಕನಾಗಿ ಬಂದಮೇಲೆ ಕೊಳಚೆ ಪ್ರದೇಶದ ನಿವಾಸಿಗಳಿಗೆ ತಲಾ 5 ಲಕ್ಷ ವೆಚ್ಚದಲ್ಲಿ 500 ಮನೆಗಳನ್ನು ಮಂಜೂರು ಮಾಡಲಾಗಿದ್ದು 300 ಮನೆಗಳು ಪೂರ್ಣವಾಗಿವೆ ಎಂದರು.

ವಾಸಿಸಲು ಸೂರಿಲ್ಲದವರಿಗಾಗಿ ಚಿಂಚೋಳಿ ರಸ್ತೆಯಲ್ಲಿ 50 ಕೋಟಿ ವೆಚ್ಚದಲ್ಲಿ 750 ಮನೆಗಳ ನಿರ್ಮಾಣಕಾರ್ಯ ಆರಂಭವಾಗಿದ್ದು ಮುಂದಿನ 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹಿಂದಿನ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಆಧಾರವಿಲ್ಲದೆ 10 ಸಾವಿರ ಹಕ್ಕು ಪತ್ರ ವಿತರಣೆ ಮಾಡಿತ್ತು ಅದನ್ನು ನಾವು ಸರಿಮಾಡಿ ಜನರಿಗೆ ಹಣ ನೀಡುವ ಕೆಲಸ ಮಾಡಿದ್ದೇವೆ. ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ 4ಸಾವಿರ ಕುಟುಂಬಗಳಿಗೆ ವಸತಿ ಯೋಜನೆ ಕಲ್ಪಿಸಲಾಗಿದೆ. ಕಾಚೂರ ಬ್ರಿಡ್ಜ್ನಿಂದ 50ಕೋಟಿ ವೆಚ್ಚದಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಕೆಲಸಕ್ಕೆ ಹಣ ಮೀಸಲಿಡಲಾಗಿದೆ ಎಂದರು.

ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ಪುರಸಭೆ ಅಧ್ಯಕ್ಷೆ ಶೋಭಾ ಹೂಗಾರ, ಮುಖ್ಯಾ ಧಿಕಾರಿ ಸತೀಶ ಗುಡ್ಡೆ, ಉಪಾಧ್ಯಕ್ಷ ಚಂದ್ರಶೇಖರ ಕೇರಳ್ಳಿ, ಬಿಜೆಪಿ ನಗರಾಧ್ಯಕ್ಷ ಸತೀಶ ಪಾಟೀಲ ತರನಳ್ಳಿ, ಪುರಸಭೆ ಸದಸ್ಯರಾದ ಶಿವಾನಂದಸ್ವಾಮಿ ಕೇಶ್ವಾರ, ಬಸಣ್ಣ ರನ್ನೇಟ್ಲಾ, ನೀಲಾಧರ ಶೆಟ್ಟಿ, ರಾಘವೇಂದ್ರ ಮೆಕ್ಯಾನಿಕ್‌, ರಾಜು ಗುತ್ತೇದಾರ, ಚಾಂದಬೀ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next