ಪ್ರವಾಸಿ ತಾಣವನ್ನಾಗಿಸಲು ಮಹದೇಶ್ವರ ದೇಗುಲ ಅಭಿವೃದ್ಧಿ ಪ್ರಾಧಿಕಾರ ಸಕಲ ರೀತಿಯಲ್ಲಿಯೂ ಕ್ರಮ ಕೈಗೊಂಡಿದ್ದು, ಮೊದಲ ಹೆಜ್ಜೆ ಎಂಬಂತೆ 20 ಎಕರೆ ಜಮೀನಿನಲ್ಲಿ ಸುಂದರ ಮಹದೇಶ್ವರ ಮೂರ್ತಿ, ಧ್ಯಾನಮಂದಿರ, ಪ್ರಕೃತಿ ಚಿಕಿತ್ಸೆ ಕೇಂದ್ರಗಳನ್ನು ನಿರ್ಮಿಸಲು ನೀಲನಕ್ಷೆ ತಯಾರಿಸಿ,ಪುತ್ಥಳಿ ನಿರ್ಮಾಣಕ್ಕೆ ಚಾಲನೆಯನ್ನೂ ನೀಡಿದೆ. ದೀಪದಗಿರಿ ಒಡ್ಡುವಿನಲ್ಲಿ 100 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾಗಿದ್ದು, 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಆದರೆ, ಜಮೀನು ವಿವಾದದಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ವಿವಾದ ಇತ್ಯರ್ಥವಾಗಿದೆ.
Advertisement