Advertisement
ಸೋಮವಾರ ಪಟ್ಟಣದ ದಿಕ್ಷಾ ಭೂಮಿಯಲ್ಲಿ 1.37 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ಒಂದು ವೇಳೆ ಸಂವಿಧಾನದಲ್ಲಿ ಬದಲಾವಣೆ ಪರ್ವ ಕಂಡರೇ ದೇಶದ ತುಂಬಾ ಕ್ರಾಂತಿಯಾಗುತ್ತದೆ ಎಂದರು.
ಅವರು ಮಾಡಿರುವ ಪ್ರಯತ್ನ ಅವಿಸ್ಮರಣೀಯ. ಬ್ರಿಟಿಷ್ ಸರ್ಕಾರ ದಲಿತರಿಗೆ ಒಂದು ರಾಷ್ಟ್ರ ನೀಡುವ ಕಲ್ಪನೆಯಲ್ಲಿತ್ತು. ಆದರೆ ಅಂಬೇಡ್ಕರ್ ಅವರು ಅದನ್ನು ಅಲ್ಲಗಳೆದು ದಲಿತರು ಕಾಶ್ಮಿರದಿಂದ ಕನ್ಯಾಕುಮಾರಿವರೆಗೆ ಇದ್ದಾರೆ.
Related Articles
ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಭೂಸನೂರ ಮಾತನಾಡಿ, ಡಾ| ಅಂಬೇಡ್ಕರ್ ಭವನ ಪಟ್ಟಣದಲ್ಲಿ ಲೋಕಾರ್ಪಣೆ ಮಾಡುತ್ತಿರುವುದು ಖುಷಿ ತಂದಿದೆ. ಕ್ಷೇತ್ರದಲ್ಲಿ ವಿವಿಧ ಗ್ರಾಮಗಳಲ್ಲಿ ಡಾ| ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ 82 ಭವನ, 7 ಸೇವಾಲಾಲ್ ಭವನ, 3 ವಾಲ್ಮೀಕಿ ಭವನ ನಿರ್ಮಾಣ ಮಾಡಿದ್ದೇನೆ ಎಂದರು.
Advertisement
ಪಟ್ಟಣದಲ್ಲಿ ಬಾಬು ಜಗಜೀವನರಾಮ ಅವರ ಭವನ ನಿರ್ಮಾಣ ಮಾಡಲು 50 ಲಕ್ಷ ರೂ. ಅನುದಾನ ತಂದು ಒಂದು ವರ್ಷ ಗತಿಸಿದೆ. ನಿವೇಶನ ಸಿಗದ ಕಾರಣ ಭವನ ನಿರ್ಮಾಣವಾಗಿಲ್ಲ. ಭಜಂತ್ರಿ ಸಮುದಾಯಕ್ಕೆ ಭವನ ನಿರ್ಮಾಣ ಮಾಡಲು 50 ಲಕ್ಷ ರೂ. ಅನುದಾನ ನೀಡಲಾಗುವುದು. ಭೋವಿ ಸಮುದಾಯದವರು ಮುಂದೆ ಬಂದು ನಿವೇಶನ ನೀಡಿದಲ್ಲಿ ಭೋವಿ ಸಮಾಜ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ದಲಿತರ ಕೆರಿಗಳಿಗೆ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಿಸುವ ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸಿದ್ದೇನೆ. ಅಂಬೇಡ್ಕರ್ ಆವಾಸ್ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿನ ಜೈಭೀಮ ನಗರದಲ್ಲಿನ ನಿವಾಸಿಗಳಿಗೆ ಶೇ. 100ರಷ್ಟು ಮನೆಗಳನ್ನು, ಮದಾರ ಕೆರಿ ನಿವಾಸಿಗಳಿಗೆ ಶೇ. 80ರಷ್ಟು, ಭೋವಿ ಸಮಾಜದವರಿಗೆ ಶೇ. 70ರಷ್ಟು, ಭಜಂತ್ರಿ ಸಮಾಜದವರಿಗೆ ಶೇ. 40ರಷ್ಟು ಹಾಗೂ ಲಂಬಾಣಿ ಸಮಾಜದವರಿಗೆ ಶೇ. 50 ಮನೆ ನೀಡಿದ್ದೇನೆ ಎಂದರು.
ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ ನೀಡಿದ ಮುಂದಿನ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ಭರವಸೆ ನೀಡದ ಶಾಸಕ ರಮೇಶ ಭೂಸನೂರ ಕಾರ್ಯ ಶ್ಲಾಘನೀಯ ಎಂದರು.
ಇದೇ ಸಂರ್ಭದಲ್ಲಿ ಭವನ ನಿರ್ಮಾಣಕ್ಕೆ ಕಾರಣಿಭೂತರಾದ ಶಾಸಕ ರಮೇಶ ಭೂಸನೂರ ಮತ್ತು ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಅವರನ್ನು ದಲಿತ ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು. ಜಿಪಂ ಸದಸ್ಯಬಿ.ಆರ್. ಯಂಟಮನ, ತಾಪಂ ಅಧ್ಯಕ್ಷೆ ಪ್ರಭಾವತಿ ಶಿರಸಗಿ, ಪ್ರದೀಪ ಗೌರ, ತಾಪಂ ಸದಸ್ಯರಾದ ಎಂ.ಎನ್.ಕಿರಣರಾಜ, ಲಕ್ಕಪ್ಪ ಬಡಿಗೇರ, ಹಣಮಂತ ಸಂದಿಮನಿ, ಶಿರಸ್ತೆದಾರ ಸುರೇಶ ಮ್ಯಾಗೇರಿ, ಸಮಾಜ ಕಲ್ಯಾಣಾಧಿಕಾರಿ ಗೋಪಿನಾಥ ಮಳಜಿ, ಶ್ರೀಕಾಂತ ಸೋಮಜಾಳ, ಅಶೋಕ ಸುಲ್ಪಿ, ಹುಯೋಗಿ ತಳ್ಳೋಳ್ಳಿ, ಪ್ರಧಾನಿ ಮೂಲಿಮನಿ, ಪರಶುರಾಮ ಕಾಂಬಳೆ, ಚಂದ್ರಕಾಂತ ಸಿಂಗೆ. ಆನಂದ ಮಾಣಸುಣಗಿ, ಗೋಪಿ ಬಡಿಗೇರ, ಮಹೇಶ ಜಾಬನವರ, ಡಾ|ಎಚ್.ವಾಯ್.ಸಿಂಗೇಗೋಳ, ಶಿವಾನಂದ ಆಲಮೇಲ, ಪ್ರವೀಣ ಸುಲ್ಪಿ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು. ಜಗದೀಶ ಸಿಂಗೆ ನಿರೂಪಿಸಿದರು. ಮಹೇಶ ಪೋತದಾರ ವಂದಿಸಿದರು.