Advertisement
ಅವರು ಭಾನುವಾರ ನಗರದ ಮಾರುತಿ ನಗರದಲ್ಲಿ ಸಂವಿಧಾನ ಪೀಠಿಕೆಯ ಫಲಕ ಅನಾವರಣದೊಂದಿಗೆ ಡಿ.ಸ್ಯಾಮಸನ್ ಕುಟುಂಬದ ಸಾಮರಸ್ಯ ಹೊಸ ಮನೆಗೆ ಹೊಸ ಹೆಜ್ಜೆ ಗೃಹಪ್ರವೇಶೋತ್ಸವ ನಿಮಿತ್ತ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಆಯೋಜಿಸಿದ ಸಂವಿಧಾನ ಓದು ಅಭಿಯಾನದಡಿ ಮನೆ-ಮನೆಗೂ ಸಂವಿಧಾನ ಎಂಬ ವಿನೂತನವಾದ ಅರ್ಥಪೂರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ದೇಶದ ಆಡಳಿತ ವ್ಯವಸ್ಥೆ ಸಂವಿಧಾನ ಮೇಲೆ ಅವಲಂಭಿತವಾಗಿದೆ. ನಮ್ಮ ಸಂವಿಧಾನ ಭಾತೃತ್ವ, ಸಹೋದರತೆ, ಸಮಾನತೆಯ ನೆಲೆಯಿಂದ ಕೂಡಿದ್ದು, ಎಲ್ಲರಿಗೂ ಬದುಕಲು ಅವಕಾಶ ಕೊಟ್ಟಿದೆ. ಇಂತಹ ಸಂವಿಧಾನ ಓದು ಅಭಿಯಾನದ ಮೂಲಕ ರಾಜ್ಯದಲ್ಲೆ ಮೊದಲ ಬಾರಿಗೆ ಮನೆ-ಮನೆಗೂ ಸಂವಿಧಾನ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿರುವುದು ಸಂತಸ ತಂದಿದೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Related Articles
Advertisement
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಲೇಖಕರು ಮತ್ತು ಮಿಮರ್ಶಕರಾದ ಡಾ.ಎಂ.ಜಿ.ಹೆಗಡೆಯವರು ದೇಶದಲ್ಲಿ ಹಲವಾರು ಜಾತಿ, ಧರ್ಮ, ಮತ, ಪಂಗಡಗಳಿದ್ದರೂ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸ್ವತಂತ್ರವಾಗಿ ಸಂತಸದಿಂದ ಬದುಕಲು ಸಂವಿಧಾನವೆ ಮೂಲ ಕಾರಣವಾಗಿದೆ ಎಂದರು.
ವೇದಿಕೆಯಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ, ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ವಕೀಲರ ಸಂಘದ ಕಾರ್ಯದರ್ಶಿ ವಿಶ್ವನಾಥ ಲಕ್ಷ್ಯಟ್ಟಿ ಉಪಸ್ಥಿತರಿದ್ದರು.
ಅಗಲಿದ ದಿ. ವಿಠ್ಠಲ ಭಂಡಾರಿಯವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯ್ತು. ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರನ್ನು ನಾಗಪ್ಪ ಮೊಕಾಶಿ ಮತ್ತು ಡಿ.ಸ್ಯಾಮಸನ್ ಪರಿವಾರದವರು ಸ್ಮರಣಿಕೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ವಿಶ್ರಾಂತ ನ್ಯಾಯಮೂರ್ತಿಗಳಾದ ಎಚ್.ಎನ್.ನಾಗಮೋಹನದಾಸ್, ಡಿ.ಸ್ಯಾಮಸನ್ ದಂಪತಿಗಳನ್ನು ಮತ್ತು ಪತ್ರಕರ್ತ ಬಿ.ಎನ್.ವಾಸರೆಯವರನ್ನು ವಿಜಯ ಸಂದೇಶ ಪತ್ರಿಕೆಯ ಸಂಪಾದಕರಾದ ಸುಮಂಗಲಾ ಅಂಗಡಿ ಹಾಗೂ ಚಂದ್ರಕಾಂತ ಅಂಗಡಿ ದಂಪತಿಗಳು ಸನ್ಮಾನಿಸಿದರು.
ಮಾನಸಾ.ಬಿ.ವಾಸರೆ ಪ್ರಾರ್ಥನೆ ಗೀತೆ ಹಾಡಿದರು. ರತ್ನದೀಪಾ.ಎಂ ಅವರು ಸಂವಿಧಾನ ಪೀಠಿಕೆಯನ್ನು ಓದಿದರು. ಪತ್ರಕರ್ತ ಬಿ.ಎನ್.ವಾಸರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಸ್ಯಾಸಮನ್ ವಂದಿಸಿದರು. ಸಂವಿಧಾನ ಓದು ಅಭಿಯಾನದ ಸದಸ್ಯರಾದ ಕೆ.ಎಚ್.ಪಾಟೀಲ ಅವರು ಕಾರ್ಯಕ್ರಮ ನಿರೂಪಿಸಿದರು.