Advertisement

ಮಠಗಳಿಂದ ನಿರಂತರ ಜಾಗೃತಿ

08:04 PM Mar 08, 2021 | Team Udayavani |

ಯಾದಗಿರಿ: ಅನಾದಿಕಾಲದಿಂದಲೂ ಸಮಾಜದಲ್ಲಿ ಮಠ ಮಾನ್ಯಗಳು ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಡಾ| ವೀರಬಸವಂತರಡ್ಡಿ ಮುದ್ನಾಳ ಹೇಳಿದರು. ಶನಿವಾರ ರಾತ್ರಿ ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿನ ಶ್ರೀ ಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವದ ನಂತರ ಜರುಗಿದ ಧರ್ಮ ಸಂಸ್ಕೃತಿ ಉತ್ಸವ ಸಭೆ ಉದ್ಘಾಟಿಸಿ ಅವರು ಮಾತನಾಡಿ, ಹಳ್ಳಿಗಳಲ್ಲಿ ಸಾಮರಸ್ಯ ಮೂಡಬೇಕಾದರೆ ಮಠ-ಮಂದಿರಗಳಿಂದ ಮಾತ್ರ ಸಾಧ್ಯ ಎಂದರು.

Advertisement

ಕುಗ್ರಾಮವಾಗಿದ್ದ ಹೆಡಗಿಮದ್ರಾ ಗ್ರಾಮ ಇದೀಗ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಯುವಕರಾಗಿರುವ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಬಣ್ಣಿಸಿದರು.

ದೇವಾಪುರದ ಪೂಜ್ಯ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಸತ್ಸಂಗದಿಂದ ಮನುಷ್ಯನ ಬದುಕು ಪಾವನವಾಗಲಿದೆ. ಭಕ್ತರಿಂದಲೇ ಮಠಗಳು ಅಭಿವೃದ್ಧಿ ಹೊಂದಲಿವೆ. ಹೆಡಗಿಮದ್ರಾ ಜನತೆ ಪುಣ್ಯವಂತರು. ಶ್ರೀಮಠದ ಪೀಠಾಧಿಪತಿಗಳು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ ಎಂದರು.

ಜಿಪಂ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ಗ್ರಾಮದ ಹಿರಿಯ ಮುಖಂಡ ಕಿಶನರಾವ ಮಾಲೀ ಪಾಟೀಲ್‌, ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್‌, ಬಿಜೆಪಿ ರಾಚನಗೌಡ ಮುದ್ನಾಳ್‌ ಮಾತನಾಡಿದರು. ಆಲಮೇಲದ ಚಂದ್ರಶೇಖರ ಸ್ವಾಮಿಗಳು, ಯಲೆØàರಿಯ ಕೊಟ್ಟೂರೇಶ್ವರ ಸ್ವಾಮಿಗಳು, ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರಡ್ಡಿ ನಾಯ್ಕಲ್‌, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್‌, ರಾಮರಡ್ಡಿಗೌಡ ತಂಗಡಗಿ, ಡಾ| ಸಿಎಂ ಪಾಟೀಲ್‌, ಖಂಡಪ್ಪ ದಾಸನ, ಶರಣಗೌಡ ಬಾಡಿಯಾಳ, ಸಿದ್ದನಗೌಡ ಕಾಡಂನೂರ, ಚಂದ್ರಯಗೌಡ ಗೊಗಿ ಎನ್‌. ಭೀಮುನಾಯಕ, ರಮೇಶ ಬಿದನೂರ, ಶಂಕರಗೌಡ ಹೊಸಮನಿ, ಭೀಮನಗೌಡ ಕ್ಯಾತನಾಳ, ರೇವಣಸಿದ್ದಯ್ನಾ ಶಾಸ್ತ್ರಿ ಸನ್ನತಿ, ಮಹಾಂತಯ್ಯ ಸ್ವಾಮಿ ಹಿರೇಮಠ, ನಾಗನರಡ್ಡಿ ಅಣಬಿ, ಭೀಮರಡ್ಡಿ ಸಾಹು ಬನ್ನೆಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next