Advertisement

Shivamogga ಗಲಭೆ ಎಬ್ಬಿಸಿ ಮತ್ತೊಂದು ಪಾಕ್‌ ಮಾಡುವ ಸಂಚು: ಸಿ.ಟಿ.ರವಿ

09:04 PM Oct 02, 2023 | Team Udayavani |

ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ದುರದೃಷ್ಟಕರ. ಅಮಾಯಕರನ್ನು ಗುರಿಯಾಗಿಸಿ ಗಲಭೆ ಹುಟ್ಟು ಹಾಕುವ ಉದ್ದೇಶವಾಗಿದ್ದು, ಇದು ಪೂರ್ವ ನಿಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.

Advertisement

ಸೋಮವಾರ ವಿಡಿಯೋ ಹೇಳಿಕೆ ನೀಡಿರುವ ಅವರು, ಹಿಂದೂಗಳ ಮಾರಣಹೋಮ ನಡೆಸಿದ ವ್ಯಕ್ತಿಗಳ ಪ್ರತಿಕೃತಿ ನಿರ್ಮಾಣಕ್ಕೆ ಏಕೆ ಅವಕಾಶ ನೀಡಿದ್ದು ಎಂದು ಅಲ್ಲಿನ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಉತ್ತರಿಸಬೇಕು. ಇಲ್ಲಿ ನಡೆದಿದ್ದು ಈದ್‌-ಮಿಲಾದ್‌ ಮೆರವಣಿಗೆಯೋ ಅಥವಾ ಟಿಪ್ಪು ಜಯಂತಿ- ಔರಂಗಜೇಬ್‌ ಜಯಂತಿಯೋ ಗೊತ್ತಾಗಲಿಲ್ಲ. ಔರಂಗಜೇಬ್‌ ಮತ್ತು ಟಿಪ್ಪು ಸುಲ್ತಾನ್‌ ಲಕ್ಷಾಂತರ ಹಿಂದೂಗಳ ಮಾರಣಹೋಮ ನಡೆಸಿದವರು.

ಶಿವಮೊಗ್ಗ ಜಿಲ್ಲಾಡಳಿತದವರು ಅವರನ್ನು ವಿಜೃಂಭಿಸಲು ಏಕೆ ಬಿಟ್ಟರು. ಹಾಡಹಗಲೇ ಕೈಯಲ್ಲಿ ತಲ್ವಾರ್‌ ಹಿಡಿದು ಬೆದರಿಸುವ ಕೆಲಸ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ. ಜಿಹಾದಿ ಪೋಷಣೆ ಮಾಡುವ ಬರವಣಿಗೆಗಳನ್ನು ಹಾಕಿದ್ದಾರೆ. ಈ ಎಲ್ಲಾ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿತ್ತು. ತೆರವು ಮಾಡದಿದ್ದ ಕಾರಣದಿಂದ ಗಲಭೆ ನಡೆದಿರುವುದು ಸ್ಪಷ್ಟವಾಗಿದೆ. ಈ ಮೂಲಕ ಮತ್ತೊಂದು ಪಾಕಿಸ್ತಾನ ಮಾಡುವ ಸಂಚು ನಡೆಯುತ್ತಿದೆ. ಕೋಮು ಶಕ್ತಿಗಳನ್ನು ರಾಜಕೀಯ ದಾಳಕ್ಕೆ ಬಳಕೆ ಮಾಡಿ ಮತ್ತೂಮ್ಮೆ ವಿಭಜನೆ ಮಾಡುವ ಭಯ ನಮ್ಮನ್ನು ಕಾಡುತ್ತಿದೆ. ದೇಶದ್ರೋಹಿ ಕೋಮುಶಕ್ತಿಗಳ ವಿರುದ್ಧ ನಾವೆಲ್ಲ ಒಂದಾಗಿ ನಿಲ್ಲಬೇಕಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next