Advertisement

Udupi: ಆಸ್ತಿ ಕಬಳಿಸಲು ನಕಲಿ ದಾಖಲೆ ಸೃಷ್ಟಿ ಸಂಚು: ದೂರು

09:07 PM Nov 09, 2024 | Team Udayavani |

ಉಡುಪಿ: ಆಸ್ತಿ ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿ ಮೋಸಗೊಳಿಸಲು ಸಂಚು ರೂಪಿಸಿದ ಕುರಿತು ನಗರ ಠಾಣೆಯಲ್ಲಿ ರಾಜ್‌ಕುಮಾರ್‌  ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಮಂಗಳೂರಿನ ಮೋಹನದಾಸ್‌ ಅವರ ಅಣ್ಣ ಮೃತ ಬಾಲಕೃಷ್ಣ  ಅವರ ಪತ್ನಿ ರಾಧಿಕಾ ಅವರು ಸಾಯುವ ಮೊದಲು  ಅವರ ಸ್ಥಿರಾಸ್ಥಿ ಸ.ನಂಬ್ರ 93/4 ಮತ್ತು 93/15 ಒಳಳಗೊಂಡಂತೆ ಉಳಿದ 27 ಸೆಂಟ್ಸ್‌ ಜಮೀನನ್ನು ಗಂಡನ ಸಹೋದರರ ಮಕ್ಕಳಾದ ಮೋಹನದಾಸ್‌ ಹಾಗೂ ರಾಮರಾಯ, ಲಕ್ಷ್ಮಣ , ಗುರುದತ್ತ, ಯೋಗೀಶ್‌ ಮತ್ತು ರವೀಂದ್ರ ಅವರನ್ನು ಫ‌ಲಾನುಭವಿಗಳನ್ನಾಗಿ ಮಾಡಿ ವಿಲ್‌ ಮಾಡಿದ್ದರು.

ಮೋಹನದಾಸರ ಮನೆಯಲ್ಲಿ ಕೆಲಸಕ್ಕಿದ್ದ ಲಕ್ಷ್ಮೀ ಯಾನೆ ಸುನೀತಿ ಅವರ ಮಗ (ಪ್ರಕರಣದ ಆರೋಪಿ ) ರಾಜ್‌ ಕುಮಾರ ಎಂಬಾತ ಸಣ್ಣ ವಯಸ್ಸಿನಿಂದ ಮೋಹನದಾಸರ ಮನೆಯಲ್ಲಿ ಬೆಳೆದಿದ್ದು, ಆತನ ಶಿಕ್ಷಣದ ಖರ್ಚು ಅನ್ನು ಫಿರ್ಯಾದಿದಾರರ ತಂದೆ ನೋಡಿಕೊಂಡಿದ್ದರು. ಆದರೇ ಫಿರ್ಯಾದಿದಾರರು ಹಾಗೂ ಆತನ ಸಂಬಂಧಿಕರ ಹೆಸರಿನಲ್ಲಿ ರಾಧಿಕಾ  ಮಾಡಲ್ಪಟ್ಟ ಉಯಿಲಿನ ಆಸ್ತಿಗಳನ್ನು ಕಬಳಿಸುವ ದುರುದ್ದೇಶದಿಂದ  ತಾನು ಬಾಲಕೃಷ್ಣ ಮತ್ತು ರಾಧಿಕಾರ ಮಗ ಎಂದು  ರಾಜ್‌ಕುಮಾರ್‌ ಬೆಂಗಳೂರಿನ ವರ್ತೂರು ಉಪತಹಶೀಲ್ದಾರರಲ್ಲಿ ಸಂತತಿ ನಕ್ಷೆ ಪಡೆದು ದಿ| ರಾಧಿಕಾರಿಂದ ತನ್ನ ಹೆಸರಿಗೆ ಖಾತಾ ಬದಲಾವಣೆಗಾಗಿ ಉಡುಪಿ ನಗರಸಭೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿರುವುದಾಗಿ ಮೋಹನದಾಸ್‌  ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next