Advertisement
ನಗರದಲ್ಲಿ ಸೋಮವಾರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮಿಳುನಾಡಿನಲ್ಲಿ ಈಗಾಗಲೇ ಈ ವ್ಯವಸ್ಥೆಯಿದೆ. ಇದೇ ರೀತಿ ನಮ್ಮಲ್ಲಿ ಜಾರಿಗೆ ತರುವದು ಎಷ್ಟು ಸೂಕ್ತ ಎಂದು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.
Related Articles
Advertisement
‘ಡಿ.4ರಿಂದ 15ರವರೆಗೆ ನಡೆಯಲಿರುವ ವಿಧಾನಮಂಡಲ ಅಧಿವೇಶನದ ಸಿದ್ಧತೆ ಪರಿಶೀಲಿಸಿದ್ದೇನೆ. ಭದ್ರತೆಗೆ 3,500 ಪೊಲೀಸರನ್ನು ನಿಯೋಜಿಸಲಾಗಿದೆ. ಅವರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಸೂಚಿಸಿದ್ದೇನೆ’ ಎಂದರು.
‘ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲಿನ ಪ್ರಕರಣಗಳ ಕುರಿತ ವಿಚಾರಣೆ ನಾಲ್ಕು ವರ್ಷಗಳಿಂದ ಬಾಕಿಯಿತ್ತು. ನಾನು ಬಂದ ಮೇಲೆ 500ಕ್ಕೂ ಹೆಚ್ಚು ಪ್ರಕರಣಗಳ ತನಿಖೆಗೆ ಆದೇಶಿದ್ದೇನೆ’ ಎಂದು ಹೇಳಿದರು.
‘ಸಂದರ್ಭ ಬಂದರೆ ನಾನು ದತ್ತಮಾಲೆ ಹಾಕುತ್ತೇನೆ’ ಎಂದು ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈಗ ಅವರ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೊಂದಾಣಿಕೆ ಸರಿಯಾಗಿ ಆಗಬೇಕಾದರೆ ಅವರು ದತ್ತಮಾಲೆ ಹಾಕಿಕೊಳ್ಳುತ್ತಾರೆ’ ಎಂದು ಲೇವಡಿ ಮಾಡಿದರು.