Advertisement

ಸರ್ಕಾರ ತಜ್ಞರ ಅಭಿಪ್ರಾಯ ಪರಿಗಣಿಸಲಿ: ಕೃಷ್ಣ ಬೈರೇಗೌಡ

09:11 PM Jun 25, 2020 | Sriram |

ಬೆಂಗಳೂರು: ಮತ್ತೆ ಲಾಕ್‌ಡೌನ್‌ ಮಾಡಬೇಕಾ ಅಥವಾ ಬೇಡವೇ ಎನ್ನುವ ಬಗ್ಗೆ ರಾಜ್ಯ ಸರ್ಕಾರ ತಜ್ಞರ ಅಭಿಪ್ರಾಯವನ್ನು ಪರಿಗಣಿಸಲಿ ನಂತರ ಕಾಂಗ್ರೆಸ್‌ ಪಕ್ಷದ ನಿಲುವು ತಿಳಿಸುತ್ತೇವೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ತುರ್ತು ಪರಿಸ್ಥಿತಿ ಬಂದಾಗ ಮಾತ್ರ ಪ್ರತಿಪಕ್ಷಗಳನ್ನು ಮಾತುಕತೆಗೆ ಕರೆಯುತ್ತಾರೆ. ಒಬ್ಬ ಎಎಸ್‌ಐಗೆ ಸೋಂಕು ಬಂದಿದೆ ಎಂದು ಗೊತ್ತಾದ ಮೇಲೆ ಅವರನ್ನು ಕರೆದುಕೊಂಡು ಹೋಗಲು ಅಂಬುಲೆನ್ಸ್‌ ವ್ಯವಸ್ಥೆ ಇಲ್ಲ. ಒಂದು ಅಂಬುಲೆನ್ಸ್‌ ಕಳುಹಿಸಲು ಏಳು ಗಂಟೆ ಸಮಯ ಬೇಕು. ಒಬ್ಬ ಸೋಂಕು ಬಂದ ಅಧಿಕಾರಿಯನ್ನೇ ಸರಿಯಾಗಿ ನೋಡಿಕೊಳ್ಳದ ಸರ್ಕಾರ ಇನ್ನು ಸಾಮಾನ್ಯರನ್ನು ಹೇಗೆ ಪರಿಗಣಿಸುತ್ತದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕೋವಿಡ್ -19 ಪರೀಕ್ಷೆಯನ್ನು ಸರಿಯಾಗಿ ನಡೆಸುತ್ತಿಲ್ಲ. ಸರಿಯಾಗಿ ತಪಾಸಣೆ ಮಾಡದೇ ಹೊದರೆ ನಿಯಂತ್ರಣ ಅಸಾಧ್ಯ. ಮುಂಬೈನಲ್ಲಿ ಸಾರ್ವತ್ರಿಕ ಪರೀಕ್ಷೆ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ಪರೀಕ್ಷೆ ನಡೆಸಬೇಕು. ಅಲ್ಲದೇ ಸೋಂಕಿನ ಲಕ್ಷಣಗಳು ಕಾಣದಿರುವವರಿಗೂ ಸೋಂಕು ತಗಲುತ್ತಿದೆ. ಇದರಿಂದ ಕೋವಿಡ್ 19 ಮತ್ತಷ್ಟು ಹರಡುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next