Advertisement

ಡಿ ದರ್ಜೆ ನೌಕರರನ್ನಾಗಿ ಪರಿಗಣಿಸಿ

12:46 PM Feb 15, 2020 | Suhan S |

ರಾಮದುರ್ಗ: ಕಂದಾಯ ಇಲಾಖೆ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ತಾಲೂಕಾ ಗ್ರಾಮ ಸಹಾಯಕರ ಸಂಘದಿಂದ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಗ್ರಾಮ ಸಹಾಯಕ ಸಂಘದ ತಾಲೂಕಾಧ್ಯಕ್ಷ ಕರಿಯಪ್ಪ ತಳವಾರ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ 40 ವರ್ಷಗಳಿಂದ ರಾಜ್ಯದಲ್ಲಿ 10.450 ಜನ ಸೇವೆ ಸಲ್ಲಿಸಲಾಗುತ್ತಿದೆ. 1978 ರಿಂದ ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕ ಹುದ್ದೆಯನ್ನು ಸೃಷ್ಠಿ ಮಾಡಿ ಕೇವಲ 75 ರೂ. ವೇತನದಿಂದ ಸೇವೆ ಸಲ್ಲಿಸುತ್ತಾ ಸತತ 40 ವರ್ಷಗಳಿಂದ ಅತಿ ಕನಿಷ್ಠ ವೇತನದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಕೆ.ಎ.ಟಿ ಗೆ ನಮ್ಮ ಸಂಘದಿಂದ ಸದಸ್ಯರು ಡಿ ಗ್ರುಪ್‌ ಬಯಸಿ ಅರ್ಜಿ ಸಲ್ಲಿಸಿದ್ದು, 05.12.1996 ರಂದು ತೀರ್ಪು ನೀಡಿ ಸದರಿ ಗ್ರಾಮ ಸೇವೆಯನ್ನು ಗ್ರುಪ್‌ ಡಿ ಅಂತಾ ಪರಿಗಣಿಸಲು ಸಂಬಂಧ ಪಟ್ಟಂತೆ ನಿಯಮಾವಳಿಗಳನ್ನು ರೂಪಿಸುವಂತೆ ಸರಕಾರಕ್ಕೆ ಸೂಚಿಸಿ 8 ತಿಂಗಳು ಕಾಲಾವಕಾಶ ನೀಡಿತು. ಆದರೆ ಆಗಿನ ಸರ್ಕಾರವು ಇದನ್ನು ಮಾನ್ಯ ಮಾಡಲಿಲ್ಲ ಎಂದು ಆರೋಪಿಸಿದರು.

ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ 1998ರಂದು ಅಂತಿಮ ತೀರ್ಪು ನೀಡಿ ಭಾರತ ಸಂವಿಧಾನದ ಅನುಚ್ಚೇದ 302ರ ಪ್ರಕಾರ ಹುದ್ದೆ ಕಾಯಂ ಮಾಡಿ ಭಾರತ ಅನುಚ್ಚೇದ 309 ರ ಪ್ರಕಾರ ಸಮಾನ ವೇತನ ಎಂಬ ಹಕ್ಕಿನಡಿಯಲ್ಲಿ ಗ್ರಾಮ ಸಹಾಯಕರನ್ನು ಡಿ ಗ್ರುಪ್‌ ನೌಕರರೆಂದು ಪರಿಗಣಿಸುವ ಹಕ್ಕು ಆಯಾ ರಾಜ್ಯಪಾಲರಿಗೆ ಇರುವದನ್ನು ತೋರಿಸಿಕೊಟ್ಟಿದೆ. ಅದರ ಪ್ರಕಾರ 10.07.2007 ರಂದು ನಮ್ಮ ಹುದ್ದೆ ಕಾಯಂ ಆಗಿದ್ದು, ಆದರೆ ಡಿ ಗ್ರುಪ್‌ ಆಗಲಿಲ್ಲ. ಕಾರಣ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗ್ರಾಮ ಸಹಾಯಕರನ್ನು ಡಿ ಗ್ರುಪ್‌ ನೌಕರರೆಂದು ಪರಿಗಣಿಸಿ ಸೇವಾ ಭದ್ರತೆ ಒದಗಿಸಿಕೊಡುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಉಪಾಧ್ಯಕ್ಷ ಅಪ್ಪಾಸಾಬ ಪವಾಡಿಗೌಡ್ರ, ಕಾರ್ಯದರ್ಶಿ ಮನೋಹರ ಕಣವಿ, ಅನಿಲ ಬಾರ್ಕಿ, ಮಹಾತೇಶ ಬಜೆನ್ನವರ, ರಮೇಶ ಉಜ್ಜಿನಕೊಪ್ಪ, ಫಕೀರಪ್ಪ ಕೊಳ್ಳಾರ, ಲಕ್ಷ್ಮಣ ಚಿಪ್ಪಲಕಟ್ಟಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next