Advertisement

ಉಚಿತ ಧಾನ್ಯ, ಇಪಿಎಫ್ ಪ್ರಸ್ತಾವನೆಗಳಿಗೆ ಒಪ್ಪಿಗೆ

03:36 AM Jul 09, 2020 | Sriram |

ಹೊಸದಿಲ್ಲಿ: ಬಡವರಿಗೆ ಉಚಿತ ಧಾನ್ಯ ವಿತರಣೆ, ಕಂಪೆನಿಗಳಿಗೆ ಹಾಗೂ ಉದ್ಯೋಗಿಗಳಿಗೆ ಆಗಸ್ಟ್‌ ವರೆಗೆ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ನೆರವಿನ ವಿಸ್ತರಣೆ ಸೇರಿದಂತೆ ಕೇಂದ್ರ ಸರಕಾರ ಇತ್ತೀಚೆಗೆ ಕೈಗೊಂಡಿದ್ದ ಮಹತ್ವದ ನಿರ್ಧಾರಗಳಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

Advertisement

ಅನಂತರ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌, ಆಗಸ್ಟ್‌ ವರೆಗೆ ಸರಕಾರ ನೀಡುವ ಇಪಿಎಫ್ ಸಹಾಯವು 3.67 ಲಕ್ಷ ಕಂಪೆನಿಗಳಿಗೆ ಹಾಗೂ 72.22 ಲಕ್ಷ ಉದ್ಯೋಗಿಗಳಿಗೆ ನೆರವಾಗಲಿದೆ. ಉದ್ಯೋಗಿಗಳ ಟೇಕ್‌-ಹೋಂ ವೇತನವೂ ಹೆಚ್ಚಾಗಲಿದೆ. ಕಂಪೆನಿಗಳಿಗೆ ಇಪಿಎಫ್ ಮೊತ್ತವನ್ನು ಕೈಯಿಂದ ಹಾಕುವ ಹೊರೆ ಇರುವುದಿಲ್ಲ ಎಂದರು.

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಆವಾಸ್‌ ಯೋಜನೆ(ಪಿಎಂ ಜಿಕೆಎವೈ)ಯಡಿ ದೇಶದ ಕಡು ಬಡವ ರಿಗೆ ಈಗ ನೀಡಲಾಗಿರುವ ಉಚಿತ ಧಾನ್ಯ ಸೌಲಭ್ಯ ವನ್ನು ನವೆಂಬರ್‌ ವರೆಗೆ ವಿಸ್ತರಿ  ಸುವ ನಿರ್ಧಾರಕ್ಕೂ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ನಗರಗಳಲ್ಲಿ ಬಡವರಿಗೆ ವಾಸ್ತವ್ಯ
ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಆವಾಸ್‌ ಯೋಜನೆಯಡಿ, ನಗರ ಪ್ರದೇಶಗಳಲ್ಲಿನ ಬಡವರಿಗೆ ಅಫೋರ್ಡಬಲ್‌ ರೆಂಟಲ್‌ ಹೌಸಿಂಗ್‌ ಕಾಂಪ್ಲೆಕ್ಸಸ್‌ (ಎಎಚ್‌ಆರ್‌ಸಿ) ಸೌಲಭ್ಯ ದಡಿ ಮನೆಗಳನ್ನು ಕೆಲವು ತಿಂಗಳ ಮಟ್ಟಿಗೆ ವಾಸ್ತವ್ಯಕ್ಕಾಗಿ ನೀಡಲು ನಿರ್ಧರಿಸಲಾಗಿತ್ತು. ಆ ಪ್ರಸ್ತಾ ವನೆಗೂ ಬುಧವಾರದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಜಾಬ್ಡೇಕರ್‌ ತಿಳಿಸಿದರು.

ಈ ಸೌಲಭ್ಯವನ್ನು ಜಾರಿಗೆ ತರಲು ಸರಕಾರದ ವತಿಯಿಂದ ನಿರ್ಮಾಣವಾಗಿರುವ ಮನೆಗಳನ್ನು ಎಎಚ್‌ಆರ್‌ಸಿ ಯೋಜನೆಗೆ ತಕ್ಕಂತೆ ಬದಲಾಯಿಸಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಈ ಸೌಲಭ್ಯದ ಮೊದಲ ಹಂತದಲ್ಲಿ 3 ಲಕ್ಷ ಫ‌ಲಾನುಭವಿಗಳಿಗೆ ಮನೆ ಗಳು ಸಿಗಲಿವೆ ಎಂದು ಹೇಳಿದರು.

Advertisement

ಪ್ರಮುಖ ನಿರ್ಧಾರಗಳು
-ಸರಕಾರಿ ಸ್ವಾಮ್ಯದ ಸಂಸ್ಥೆಗಳಾದ ಓರಿಯಂಟಲ್‌ ಇನ್ಶೂರೆನ್ಸ್‌, ನ್ಯಾಶನಲ್‌ ಇನ್ಶೂರೆನ್ಸ್‌ ಕಂಪೆನಿ ಲಿಮಿಟೆಡ್‌ ಹಾಗೂ ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಕಂಪೆನಿ ಲಿಮಿಟೆಡ್‌ ಸಂಸ್ಥೆಗಳಿಗೆ 12,450 ಕೋಟಿ ರೂ. ಸಹಾಯ.
-ಉಜ್ವಲ ಯೋಜನೆಯಡಿ ಬಡ ಮಹಿಳೆಯ ರಿಗೆ ಸೆಪ್ಟಂಬರ್‌ ವರೆಗೆ ಮೂರು ಅಡುಗೆ ಅನಿಲ ಸಿಲಿಂಡರ್‌ ಗಳನ್ನು ಪಡೆಯುವ ಅವಕಾಶ. ಇದ ರಿಂದ 7.4 ಕೋಟಿ ಮಹಿಳೆಯರಿಗೆ ಅನು ಕೂಲ. ಈ ಮೊದಲು ಈ ಸೌಲಭ್ಯ ಎಪ್ರಿಲ್‌- ಜೂನ್‌ ವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ವಿಸ್ತರಣೆ ಯಾಗಿರುವುದರಿಂದ 13,500 ಕೋಟಿ ರೂ. ನಿಗದಿ.
-ಕೃಷಿ ಕ್ಷೇತ್ರದ ಮೂಲಸೌಕರ್ಯಾಭಿವೃದ್ಧಿ ಹಾಗೂ ಸರಕು ಸಾಗಣೆ ನಿರ್ವಹಣೆ ಉತ್ತಮಗೊಳಿಸಲು 1 ಲಕ್ಷ ಕೋಟಿ
ರೂ. ಮೀಸಲು.

Advertisement

Udayavani is now on Telegram. Click here to join our channel and stay updated with the latest news.

Next