Advertisement

ಸಹಮತದ ದೇಹ ಸಂಪರ್ಕದ ಬಳಿಕ ಮದುವೆ ಮುರಿದರೆ ಅತ್ಯಾಚಾರವಲ್ಲ: ಹೈಕೋರ್ಟ್

10:06 PM Jul 07, 2023 | Team Udayavani |

ಕಟಕ್: ಒಮ್ಮತದ ದೈಹಿಕ ಸಂಬಂಧದ ಬಳಿಕ ಕೆಲವು ಕಾರಣಗಳಿಂದ ವಿವಾಹದ ಭರವಸೆ ಸಾಕಾರಗೊಳ್ಳದಿದ್ದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಒಡಿಶಾ ಹೈಕೋರ್ಟ್ ಹೇಳಿದೆ.

Advertisement

ವಿವಾಹಿತ ಮಹಿಳೆಯೊಬ್ಬರಿಂದ ಭುವನೇಶ್ವರ ಮೂಲದ ವ್ಯಕ್ತಿಯೊಬ್ಬರು ಎದುರಿಸಿದ್ದ ಅತ್ಯಾಚಾರದ ಆರೋಪವನ್ನು ಹೈಕೋರ್ಟ್ ರದ್ದುಗೊಳಿಸಿದೆ. ವ್ಯಕ್ತಿಯ ಸ್ನೇಹಿತೆಯಾಗಿದ್ದ ಆಕೆ ಐದು ವರ್ಷಗಳಿಂದ ಪತಿಯೊಂದಿಗೂ ವೈವಾಹಿಕ ವಿವಾದದಲ್ಲಿದ್ದು, ಅರ್ಜಿದಾರ ವ್ಯಕ್ತಿಯ ವಿರುದ್ಧ ಆರೋಪವನ್ನು ಮಾಡಿದ್ದಳು.

ಅರ್ಜಿದಾರರ ವಿರುದ್ಧದ ಇತರ ಆರೋಪಗಳಾದ ವಂಚನೆಯನ್ನು ತನಿಖೆಗೆ ಮುಕ್ತವಾಗಿ ಬಿಡಲಾಗಿದೆ ಎಂದು ನ್ಯಾಯಮೂರ್ತಿ ಆರ್.ಕೆ. ಪಟ್ನಾಯಕ್ ಆದೇಶದಲ್ಲಿ ತಿಳಿಸಿದ್ದಾರೆ.

ಉತ್ತಮ ನಂಬಿಕೆಯಿಂದ ಮಾಡಿದ ಭರವಸೆಯ ಉಲ್ಲಂಘನೆ ಮತ್ತು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ತರುವಾಯ ಪೂರೈಸಲಾಗದುದರ ನಡುವೆ ಸೂಕ್ಷ್ಮ ವ್ಯತ್ಯಾಸವಿದೆ ಎಂದು ಕೋರ್ಟ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next