Advertisement

ಎರಡನೇ ಬಾರಿಗೆ ಸಿಎಂ ಗದ್ದುಗೆಯತ್ತ ಕಾನ್ರಾಡ್‌ ಸಂಗ್ಮಾ

08:02 PM Mar 02, 2023 | Team Udayavani |

ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಟುರಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ ಅವರು ಬಿಜೆಪಿ ಅಭ್ಯರ್ಥಿ ಬರ್ನಾಡ್‌ ಮಾರಕ್‌ ಅವರನ್ನು 10,090 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

Advertisement

ಕಾನ್ರಾಡ್‌ ಅವರು ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಪಿ.ಎ.ಸಂಗ್ಮಾ ಅವರ ಚುನಾವಣಾ ಪ್ರಚಾರಕ ವ್ಯವಸ್ಥಾಪಕರಾಗಿ 1990ರಲ್ಲಿ ರಾಜಕೀಯ ಪ್ರಯಾಣ ಆರಂಭಿಸಿದರು. 2004ರಲ್ಲಿ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಸ್ಪರ್ಧಿಸಿ, 182 ಮತಗಳ ಅಂತರದಿಂದ ಸೋತರು. 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ ಹಣಕಾಸು, ಇಂಧನ, ಪ್ರವಾಸೋದ್ಯಮ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದರು.

2009ರಿಂದ 2013ರವರೆಗೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. 2016ರಲ್ಲಿ ಪಿ.ಎ.ಸಂಗ್ಮಾ ಅವರ ನಿಧನದ ನಂತರ ಎನ್‌ಪಿಪಿ ಅಧ್ಯಕ್ಷರಾದರು. 2018ರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸೇರಿ ಮೈತ್ರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದರು. ಆದರೆ, ಈ ಬಾರಿ ಏಕಾಂಗಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದ ಅವರು, ಬಹುಮತ ಗಳಿಸದಿದ್ದರೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ತಮ್ಮ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next