Advertisement

ಸಲ್ಮಾನ್‌ ಖುರ್ಷಿದ್‌ ವಿರುದ್ಧ ಎರಡು ಪ್ರತ್ಯೇಕ ದೂರು

11:59 PM Nov 11, 2021 | Team Udayavani |

ಹೊಸದಿಲ್ಲಿ: ಸನಾತನ ಧರ್ಮದ ವಿರುದ್ಧ ಆಕ್ಷೇಪಾರ್ಹವಾಗಿ ಬರೆದ ಹಿನ್ನೆಲೆಯಲ್ಲಿ ವಿವಾದಕ್ಕೀಡಾಗಿರುವ ಕೇಂದ್ರದ ಮಾಜಿ ಸಚಿವ ಸಲ್ಮಾನ್‌ ಖುರ್ಷಿದ್‌ ವಿರುದ್ಧ ಹೊಸದಿಲ್ಲಿಯ ವಿವೇಕ್‌ ಗಾರ್ಗ್‌ ಹಾಗೂ ವಿನೀತ್‌ ಜಿಂದಾಲ್‌ ಎಂಬ ಇಬ್ಬರು ವಕೀಲರು, ಎರಡು ಪ್ರತ್ಯೇಕ ಪೊಲೀಸ್‌ ದೂರುಗಳನ್ನು ದಾಖಲಿಸಿದ್ದಾರೆ.

Advertisement

ಇತ್ತೀಚೆಗೆ ಬಿಡುಗಡೆಯಾಗಿರುವ ಸಲ್ಮಾನ್‌ ಖುರ್ಷಿದ್‌ ಪುಸ್ತಕ “ಸನ್‌ರೈಸ್‌ ಓವರ್‌ ಅಯೋಧ್ಯಾ’ದಲ್ಲಿ ಹಿಂದುತ್ವಕ್ಕೆ ಅವಮಾನಕಾರಿಯಾದ ವಾಕ್ಯಗಳನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಲಾಗಿದೆ. ಪುಸ್ತಕದಲ್ಲಿರುವ ಈ ಸಾಲುಗಳು, ದೇಶದ್ರೋಹ, ಭಾರತದ ಸಾರ್ವಭೌಮತ್ವವನ್ನು ಬುಡಮೇಲಾಗಿಸುವ ಪಿತೂರಿಯನ್ನು ತೋರಿಸುತ್ತಿದ್ದು, ಈ ಪ್ರಕರಣ ತನಿಖೆಗೆ ಅರ್ಹವಾಗಿದೆ ಎಂದು ವಿವೇಕ್‌ ಗಾರ್ಗ್‌ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ನ.18ರಂದು ಈ ಶತಮಾನದ ಅತಿದೀರ್ಘಾವಧಿಯ ಭಾಗಶಃ ಚಂದ್ರಗ್ರಹಣ

ಏನಿದೆ ಪುಸ್ತಕದಲ್ಲಿ?: ರಾಮಜನ್ಮಭೂಮಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪನ್ನು ಆಧಾರವಾಗಿಟ್ಟುಕೊಂಡು ಖುರ್ಷಿದ್‌ ಈ ಪುಸ್ತಕ ಬರೆದಿದ್ದು, “ಭಾರತದ ಪುರಾತನ ಋಷಿಮುನಿಗಳು ಹುಟ್ಟುಹಾಕಿದ್ದ ಹಿಂದುತ್ವ ಹಾಗೂ ಸನಾತನ ಧರ್ಮಗಳ ಪರಿಕಲ್ಪನೆಗಳನ್ನು ರಾಜಕೀಯ ಆವಶ್ಯ ಕತೆಗಳಿಗೆ ತಕ್ಕಂತೆ ಬದಲಾಯಿಸಲಾಗಿದೆ. ಹೊಸ ಪರಿಕಲ್ಪನೆಗಳು ಇಸ್ಲಾಂನ ಜೆಹಾದ್‌ ಸಂಘಟನೆಗಳಾದ ಬೊಕೊ ಹರಾಮ್‌ ಹಾಗೂ ಐಎಸ್‌ಐಎಸ್‌ನ ಸಿದ್ಧಾಂತಗಳನ್ನು ಹೋಲುತ್ತಿವೆ’ ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next