Advertisement
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಲಗ್ಗೆರೆ ಹಾಗೂ ಕೊಟ್ಟಿಗೆಪಾಳ್ಯ ವಾರ್ಡ್‌ಗಳಲ್ಲಿ ಬುಧವಾರ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
Related Articles
Advertisement
ನಾನು ಮತ್ತು ಗೋಪಾಲಯ್ಯ ಒಕ್ಕಗಲಿಗರೆ ಅಲ್ಲವೆ, ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರೆ ನಾವೇಕೆ ಇಲ್ಲಿಗೆ ಬರುತ್ತಿದ್ದೆವು? ಪಕ್ಷದಲ್ಲಿದ್ದ ನಮ್ಮನ್ನೇ ಸರಿಯಾಗಿ ನೋಡಿಕೊಳ್ಳದ ಇವರು ಇಡೀ ಕ್ಷೇತ್ರದ, ರಾಜ್ಯದ ಒಕ್ಕಲಿಗರ ಉದ್ಧಾರ ಮಾಡಲು ಸಾಧ್ಯವಾ? ಇವರು ಸ್ವಾರ್ಥಕ್ಕಾಗಿ ಜಾತಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ವೈಯಕ್ತಿಕ ಆಸೆ- ಆಕಾಂಕ್ಷೆಗಾಗಿ ನಾವು ಕಾಂಗ್ರೆಸ್ ಪಕ್ಷ ಬಿಡಲಿಲ್ಲ. ಮುನಿರತ್ನ ಅವರಿಗೆ ಹಣದ ಅವಶ್ಯಕತೆ ಇದೆಯಾ? ಕಾರ್ಪೋರೇಟರ್, ಶಾಸಕರಾಗಿ ರಾಜರಾಜೇಶ್ವರಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಕಾಂಗ್ರೆಸ್‌ನವರೇ ಎರಡು ಬಾರಿ ಮುನಿರತ್ನ ಅವರಿಗೆ ಟಿಕೆಟ್ ನೀಡಿದ್ದಾರೆ, ಆಗ ಮುನಿರತ್ನ ಅವರ ಜಾತಿ, ಕೆಟ್ಟತನ ಕಾಣಲಿಲ್ಲ, ಬಿಜೆಪಿ ಸೇರಿದ ಕೂಡಲೇ ದೈವರಾಗಿದ್ದ ಇವರು ದೆವ್ವವಾಗಿ ಕಾಣುತ್ತಿದ್ದಾರಾ? ಕಾಂಗ್ರೆಸ್ ಅವರ ಬೇಜವಾಬ್ದಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಿಜವಾದ ಕುರುಕ್ಷೇತ್ರ ನಡೆಯುತ್ತಿದೆ. ಸತ್ಯ- ಅಸತ್ಯದ ನಡುವೆ ಸಂಗ್ರಾಮ ಏರ್ಪಟ್ಟಿದೆ. ಇಲ್ಲಿನ ಜನರು ಸತ್ಯವನ್ನು ಗೆಲ್ಲಿಸಬೇಕು. ಮುನಿರತ್ನ ಅವರು ಸ್ವಾಭಿಮಾನಕ್ಕೆ ಕಟ್ಟುಬಿದ್ದವರು. ಶಾಸಕರಿಗೆ ಸಿಗಬೇಕಾದ ಮಾನ್ಯತೆ ಸಿಗದೇ ಇದ್ದಾಗ, ಅಧಿಕಾರವನ್ನೂ ಲೆಕ್ಕಿಸದೇ ರಾಜೀನಾಮೆ ನೀಡಿದವರು. ಇವರ ಗೆಲುವು ಜನಗಳ ಗೆಲುವು ಎಂದರು.