Advertisement

ಪತ್ರಕರ್ತರನ್ನೇ ಕೂಡಿ ಹಾಕಿದ ಕೈ ಕಾರ್ಯಕರ್ತರು!

11:24 PM Nov 23, 2019 | Team Udayavani |

ಹೊಸಪೇಟೆ: ಕಾಂಗ್ರೆಸ್‌ ಪಕ್ಷದ ಬಣ ರಾಜಕೀಯದಿಂದ ಪತ್ರಕರ್ತರು ಪೇಚಾಡಿದ ಘಟನೆ ಶನಿವಾರ ನಡೆದಿದೆ. ಕಾಂಗ್ರೆಸ್‌ ಆಯೋಜಿಸಿದ್ದ ಸುದ್ದಿಗೋಷ್ಠಿಗೆ ತೆರಳಿದ್ದ ಪತ್ರಕರ್ತರನ್ನು ಸುದ್ದಿಗೋಷ್ಠಿ ಆರಂಭವಾಗುವ ಮೊದಲೇ ಇನ್ನೊಂದು ಬಣದವರು ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಕೂಡಿ ಹಾಕಿದ್ದಾರೆ. ನಂತರ ಕಾಂಗ್ರೆಸ್‌ ಮುಖಂಡರು ಕಚೇರಿಯ ಬಾಗಿಲು ತೆರೆದು ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ಹಾಗೂ ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಗಮನದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಪತ್ರಕರ್ತರಿಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಕಚೇರಿಗೆ ತೆರಳಿದ್ದ ಕೆಲ ಪತ್ರಕರ್ತರ ಬಳಿ ಕಾಂಗ್ರೆಸ್‌ನ ಇನ್ನೊಂದು ಬಣದ ಕಾರ್ಯಕರ್ತರು ಈ ಕಚೇರಿಯಲ್ಲಿ ಯಾವ ಸುದ್ದಿಗೋಷ್ಠಿ ಇಲ್ಲ, ನೀವು ಇಲ್ಲಿಂದ ಹೊರಗೆ ಹೋಗ್ತಿರೋ ಇಲ್ಲವೋ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.

ಆಗ ಸುದ್ದಿಗೋಷ್ಠಿ ಇರುವುದರಿಂದಲೇ ನಾವು ಇಲ್ಲಿಗೆ ಬಂದಿರುವುದು ಎಂದು ಸುದ್ದಿಗಾರರು ಯುವಕರಿಗೆ ತಿಳಿಸಿದ್ದಾರೆ. ಆದರೂ ಸುಮ್ಮನಾಗದ ಕಾರ್ಯಕರ್ತರು ಏಕಾಏಕಿ ಕಚೇರಿ ಶಟರ್‌ ಎಳೆದು ಬೀಗ ಹಾಕಿ ಹೊರ ನಡೆದಿದ್ದಾರೆ. ಇದರಿಂದ ಗಲಿಬಿಲಿಗೊಂಡ ಕೆಲ ಪತ್ರಕರ್ತರು ಕೂಗಾಡಿದ್ದಾರೆ. ಗಲಾಟೆ ಕೇಳುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್‌ ನಾಯಕರು ತಕ್ಷಣವೇ ಬೀಗ ತೆಗೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next