Advertisement
ನಗರದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಎರಡೂ¾ರು ಲಕ್ಷ ಜನರನ್ನು ಸೇರಿಸಿಬಿಟ್ಟರೆ ಏನೋ ಆಗಿ ಬಿಡುತ್ತದೆ ಎನ್ನುವ ಕಾಲ ಇದಲ್ಲ. ಉತ್ಸವಗಳಲ್ಲಿ ಜನ ಸೇರುವುದು ಸಾಮಾನ್ಯ. ನಾವೆಲ್ಲರೂ ಯಡಿಯೂರಪ್ಪನವರ ಜತೆ ಕೆಜೆಪಿಗೆ ಹೋದವರು. ಹಾವೇರಿಯಲ್ಲಿ ಸಮಾವೇಶ ಮಾಡಿದ್ದೆವು. ಆಗ ಬಂದ ಜನರನ್ನು ನೋಡಿ ಖುಷಿಯಾಗಿದ್ದೆವು. ಹನ್ನೊಂದು ಲಕ್ಷ ಜನ ಹಾವೇರಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಆದರೆ ಸಮಾವೇಶ ಮಾಡಿದ ಹಾವೇರಿ ಯಲ್ಲೇ ಜನ ನಮ್ಮನ್ನು ಸೋಲಿಸಿದರು. ಹಾಗಾಗಿ ದಾವಣಗೆರೆಯಲ್ಲಿ ಸಿದ್ದರಾಮಯ್ಯ – ಅಮೃತ ಮಹೋತ್ಸವ ಮಾಡಿದರೆ ಗೆಲ್ಲಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನಾವೇನೇ ಕಸರತ್ತು ಮಾಡಿದರೂ ಚುನಾವಣೆಯ ಹಿಂದಿನ ಮೂರು ದಿನಗಳೇ ಅಂತಿಮ. ಮತದಾನದ ಮೂರು ದಿನಗಳ ಹಿಂದೆ ಇರೋದೇ ನಿಜವಾದ ಆಟ. ಚುನಾವಣೆ ವ್ಯವಸ್ಥೆ ಸುಧಾರಣೆ ಮಾಡಲು ಸಾಧ್ಯವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಈಗಲೇ ಗೆಲುವು ಪಡೆದ ವರಂತೆ ವರ್ತಿಸುತ್ತಿದೆ. ನಮಗೂ ಗೆಲುವಿನ ವಿಶ್ವಾಸವಿದೆ ಎಂದರು.