Advertisement

Shettar ನಡೆಯಿಂದ ಕಾಂಗ್ರೆಸ್ ಗೆ ಹಾನಿಯಿಲ್ಲ, ಸವದಿ ಪಕ್ಷ ಬಿಡುವುದಿಲ್ಲ: ಎಂ.ಬಿ.ಪಾಟೀಲ್

12:08 PM Jan 26, 2024 | keerthan |

ವಿಜಯಪುರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ. ಅಲ್ಲದೇ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಶೆಟ್ಟರ ಹಾದಿಯಲ್ಲಿ ಸಾಗುವುದಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದ್ದಾರೆ.

Advertisement

ಗಣರಾಜ್ಯೋತ್ಸವ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಬಿಜೆಪಿ ಪಕ್ಷದಿಂದ ಜಗದೀಶ ಶೆಟ್ಟರ ಅವಮಾನಿತರಾಗಿದ್ದರು. ಆಗ ನಾನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವರು ಜಗದೀಶ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಶ್ರಮಿಸಿದ್ದೆವು. ವಿಧಾನಸಭೆ ಟಿಕೆಟ್ ಕೊಟ್ಟ ಬಳಿಕ ಸೋತರೂ ಅವರನ್ನು ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಶಾಸಕರಾಗಿ ಮಾಡಿತ್ತು. ಇಷ್ಟೆಲ್ಲ ಗೌರವ ನೀಡಿದರೂ ಏಕಾಏಕಿ ಬಿಜೆಪಿ ಸೇರ್ಪಡೆಯಾಗಿರುವುದು ಏಕೆಂದು ಗೊತ್ತಿಲ್ಲ ಎಂದರು.

ಜಗದೀಶ್ ಶೆಟ್ಟರ್ ನಡೆ ಬಗ್ಗೆ ನಾವು ಪ್ರತಿಕ್ರಿಯಿಸುವುದಕ್ಕಿಂತ ಜನರೇ ನಿರ್ಧಾರ ಮಾಡುತ್ತಾರೆ. ಜನ ಏನನ್ನುತಾರೆ ಎನ್ನುವುದು ಅವರೇ ತಿಳಿದುಕೊಳ್ಳಲಿ ಎಂದರು.

ಜಗದೀಶ ಶೆಟ್ಟರ್ ಅವರಿಗೆ ಬಿಜೆಪಿ ಏನು ಹೇಳಿದೆ, ಏನು ಭರವಸೆ ನೀಡಿದೆ, ಯಾವ ಒತ್ತಡ ಹಾಕಿದೆ ಎಂಬುದು ಗೊತ್ತಿಲ್ಲ. ವಾಸ್ತವ ಏನಿದೆ ಎಂಬುದನ್ನು ಶೆಟ್ಟರ್ ಅವರೇ ಬಹಿರಂಗ ಮಾಡಬೇಕು ಎಂದರು.

ಒಬ್ಬರು ಹೋಗಿದ್ದಾರೆ ಎಂದ ಮಾತ್ರಕ್ಕೆ ಮತ್ತೊಬ್ಬರ ಹೆಸರನ್ನು ತಳುಕು ಹಾಕುವುದು ತರವಲ್ಲ. ಲಕ್ಷ್ಮಣ ಸವದಿ ಕೂಡ ಬಿಜೆಪಿ ಸೇರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದರು.

Advertisement

ಯಾರ ಬಗ್ಗೆಯೂ ಈ ರೀತಿ ಇಲ್ಲ ಸಲ್ಲದ ಮಾತನಾಡಬಾರದು. ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗಿದ್ದವರು. ಜಗದೀಶ ಶೆಟ್ಟರ ಮಾಡಿದಂತೆ ಸವದಿ ಮಾಡುದಿಲ್ಲ ಎಂದು ವಿಶ್ವಾಸವಿದೆ ಎಂದು ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next