ಹೊಸದಿಲ್ಲಿ: ”ಕಾಂಗ್ರೆಸ್ ಕರ್ನಾಟಕ ಚುನಾವಣೆಯನ್ನು ಗೆದ್ದಿದ್ದು, ಮುಂಬರುವ ಮಧ್ಯಪ್ರದೇಶ ಚುನಾವಣೆಯಲ್ಲೂ ಗೆಲ್ಲಲಿದೆ” ಎಂದು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಹೇಳಿಕೆ ನೀಡಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಾಬರ್ಟ್ ವಾದ್ರಾ ”ನಾವು ವಿರೋಧ ಪಕ್ಷಗಳು ಬದಲಾವಣೆಯನ್ನು ತರಲು ಮೈತ್ರಿಕೂಟ(ಇಂಡಿಯಾ)ರಚಿಸಿದ್ದೇವೆ. ಬದಲಾವಣೆಗಾಗಿ ಕಾಂಗ್ರೆಸ್ ಓಟ ಮುಂದುವರಿಯಲಿದೆ” ಎಂದರು.
ಇತ್ತೀಚೆಗೆ ವಾದ್ರಾ ‘ನನ್ನ ಪತ್ನಿ ಪ್ರಿಯಾಂಕಾ ಸಂಸತ್ತಿನಲ್ಲಿ ಇರಬೇಕು. ಆಕೆಗೆ ಎಲ್ಲಾ ಅರ್ಹತೆಗಳಿವೆ’ ಎಂದು ಹೇಳಿಕೆ ನೀಡಿದ್ದರು.
ವಾದ್ರಾಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಜಾರಿ ನಿರ್ದೇಶನಾಲಯ ಬುಧವಾರ ಪ್ರಶ್ನಿಸಿದೆ. ಜಾಮೀನು ಷರತ್ತುಗಳನ್ನು ವಾದ್ರಾ ಪಾಲಿಸುತ್ತಿಲ್ಲ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. ವಾದ್ರಾ ಅವರು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿರುವುದನ್ನು ಸಾಬೀತುಪಡಿಸುವ ಹೆಚ್ಚುವರಿ ಅಫಿಡವಿಟ್ ಸಲ್ಲಿಸುವುದಾಗಿ ಇಡಿ ಪರ ವಾದ ಮಂಡಿಸಿದ ವಕೀಲರು ತಿಳಿಸಿದ್ದಾರೆ.
ವಾದ್ರಾಗೆ ವಿಚಾರಣಾ ನ್ಯಾಯಾಲಯವು 2019 ರ ಜನವರಿಯಲ್ಲಿ ಬಂಧನ ಪೂರ್ವ ಜಾಮೀನು ನೀಡಿತ್ತು. ಜಾಮೀನು ಷರತ್ತುಗಳು ವಿದೇಶಕ್ಕೆ ಹಾರುವ ಮೊದಲು ಅನುಮತಿಯನ್ನು ಒಳಗೊಂಡು ತನಿಖೆಗೆ ಸಹಕರಿಸುವಂತೆ ವಿಚಾರಣಾ ನ್ಯಾಯಾಲಯ ಸೂಚಿಸಿತ್ತು. ಇದೀಗ ಇಡಿ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.