Advertisement

ತ್ರಿವಳಿ ತಲಾಖ್; ಸುಪ್ರೀಂ ತೀರ್ಪಿಗೆ ಕಾಂಗ್ರೆಸ್ ಪ್ರತಿಕ್ರಿಯೆ ಹೀಗಿದೆ

12:58 PM Aug 22, 2017 | Team Udayavani |

ನವದೆಹಲಿ: ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ವಿವಾದಿತ ತ್ರಿವಳಿ ತಲಾಖ್ ಪದ್ಧತಿಯನ್ನು ಸುಪ್ರೀಂಕೋರ್ಟ್ ನಿಷೇಧಿಸಿ ಮಂಗಳವಾರ ಐತಿಹಾಸಿಕ ತೀರ್ಪು ಪ್ರಕಟಿಸಿದ ಬಳಿಕ ಕಾಂಗ್ರೆಸ್ ಪಕ್ಷ ಸುಪ್ರೀಂ ತೀರ್ಪನ್ನು ಸ್ವಾಗತಿಸಿ, ಸುಪ್ರೀಂಕೋರ್ಟ್ ಮುಸ್ಲಿಂ ವೈಯಕ್ತಿಕ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.

Advertisement

ಇದೊಂದು ತುಂಬಾ ಕ್ಲಿಷ್ಟಕರವಾದ ಪ್ರಕರಣವಾಗಿತ್ತು. ಏನೇ ಆಗಲಿ ಈ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಸುಪ್ರೀಂಕೋರ್ಟ್ ತುಂಬಾ ಘನತೆವೆತ್ತ ತೀರ್ಪನ್ನು ನೀಡಿದೆ. ಅಲ್ಲದೇ ಲೋಕಸಭೆಯಲ್ಲಿ ಸುದೀರ್ಘ ಚರ್ಚೆಗೂ ಅವಕಾಶ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.

ತ್ರಿವಳಿ ತಲಾಖ್ ಕುರಿಂತೆ ಸುಪ್ರೀಂಕೋರ್ಟ್ ಪ್ರಗತಿಪರ ಹಾಗೂ ಐತಿಹಾಸಿಕವಾದ ತೀರ್ಪು ನೀಡುವ ಮೂಲಕ, ಇದು ಮುಸ್ಲಿಮ್ ಮಹಿಳೆಯರ ಗೆಲುವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಸುಪ್ರೀಂಕೋರ್ಟ್ ಯಾವುದೇ ಕಾನೂನು ಮೀರಿ ತೀರ್ಪು ನೀಡಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಈಶ್ವರ್ ಎಎನ್ಐ ಜತೆ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next