Advertisement
ಮಂಡ್ಯ, ಹಾಸನ, ತುಮಕೂರು, ಮೈಸೂರು ಕ್ಷೇತ್ರಗಳಲ್ಲಿ ಹೊಂದಾಣಿಕೆಯ ಗೊಂದಲಗಳಿದ್ದು, ದೇವೇಗೌಡ, ಸಿದ್ದರಾಮಯ್ಯ, ಎಐಸಿಸಿ ರಾಜ್ಯ ಉಸ್ತು¤ ವಾರಿ ವೇಣುಗೋಪಾಲ್ ಪ್ರಯತ್ನದ ಅನಂತರವೂ ಸರಿಹೋಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ತುಮಕೂರು ಕ್ಷೇತ್ರದಲ್ಲಿ ಪಕ್ಷೇತರನಾಗಿ ನಾಮ ಪತ್ರ ಸಲ್ಲಿಸಿ ನಾಯಕರ ಮನವೊಲಿಕೆ ಬಳಿಕ ವಾಪಸ್ ಪಡೆದಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮತ್ತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ನನ್ನ ವಿರೋಧ ಕಟ್ಟಿಕೊಂಡು ಯಾವುದೇ ಪಕ್ಷದ ಯಾರೊಬ್ಬನಿಗೂ ಚುನಾವಣೆ ಗೆಲ್ಲುವ ತಾಕತ್ತು ಇಲ್ಲ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಮಧುಗಿರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಂಸದ ಮುದ್ದಹನುಮೇಗೌಡರ ಬಗ್ಗೆ ಯೋಚಿಸದೆ, ಯಾವ ಸಭೆಗೂ ಆಹ್ವಾನ ನೀಡದೆ ಅವಮಾನ ಮಾಡ ಲಾಗು ತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
Related Articles
Advertisement
ನಮಗೇನು ಮಾನ ಮರ್ಯಾದೆ ಇಲ್ವಾ?ಕೇವಲ ತುಮಕೂರು, ಹಾಸನವಷ್ಟೇ ಅಲ್ಲ, ಮೈಸೂರಿನಲ್ಲೂ ಮೈತ್ರಿ ನಡುವೆ ವೈಮನಸ್ಸು ಮುಂದು ವರಿದಿದೆ. ನಮಗೇನು ಮಾನ ಮರ್ಯಾದೆ ಇಲ್ವಾ, ನಮ್ಮನ್ನು ಯಾರೂ ಸಭೆಗೆ ಕರೆದಿಲ್ಲ. ನಾವು ಏಕೆ ಕಾಂಗ್ರೆಸ್ ಕಚೇರಿ ಹತ್ರ ಬರಬೇಕು ಎಂದು ಜೆಡಿಎಸ್ ಕಾರ್ಯಕರ್ತರು ನೇರವಾಗಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಸಚಿವ ಜಿ.ಟಿ.ದೇವೇಗೌಡ ಅವರನ್ನು ಪ್ರಶ್ನಿಸಿದ್ದಾರೆ. ಹುಣಸೂರಿನ ಜಿಟಿಡಿ ನಿವಾಸ ದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕೆಲವು ಕಾರ್ಯಕರ್ತರು ನಾವು ಹಿಂದೆ ಜಿದ್ದಾಜಿದ್ದಿ ಚುನಾವಣೆ ನಡೆಸಿದ್ದೇವೆ. ಕೇಸ್ ಹಾಕಿಸಿ ಕೊಂಡಿದ್ದೇವೆ, ಅವರೊಂದಿಗೆ ಜಗಳ ಮಾಡ್ಕೊಂಡಿ ದ್ದೇವೆ, ನೀವು ಹೊರಟು ನಿಂತಿದ್ದಿರಾ, ನಾವಲ್ಲಿಗೆ ಬರಲ್ಲ ಎಂದರು.